»   » 'ಲೈಫು Super' ಅಂತ ಎಣ್ಣೆ ಹಾಕಿದ್ರೆ ಇವ್ರು ಬಿಲ್ ಕೇಳೋದೇ

'ಲೈಫು Super' ಅಂತ ಎಣ್ಣೆ ಹಾಕಿದ್ರೆ ಇವ್ರು ಬಿಲ್ ಕೇಳೋದೇ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಎಣ್ಣೆ ಹಾಕಿ ಡ್ಯಾನ್ಸ್ ಮಾಡೋ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲ. ಎಲ್ಲಾ ಸಿನಿಮಾಗಳಲ್ಲಿ ಒಂದು ಪೆಗ್ ಏರಿಸಿ ತೂರಾಡುತ್ತಾ ಕುಣಿಯೋ ಹಾಡು-ಡ್ಯಾನ್ಸು ಇರಲೇಬೇಕು. ಕೆಲವು ಸಿನಿಮಾಗಳಲ್ಲಿ ಲವ್ ಫೆಲ್ಯೂರು ಆಗಿ ಎಣ್ಣೆ ಹಾಕೋದು ಇದ್ದೇ ಇರುತ್ತೆ.

ಇದೀಗ ಈ ಎಲ್ಲಾ ಎಣ್ಣೆ ಹಾಡಿಗೆ ಹೊಸ ಸೇರ್ಪಡೆ ಹೊಸಬರ 'ಲೈಫು ಸೂಪರ್' ಚಿತ್ರದ 'ಬಿಲ್ಲು ಆಮೇಲೆ ನೋಡೋಣ ಕೊಟ್ಬಿಡಿ ಬೀರು' ಅನ್ನೋ ಹಾಡು.

Watch making of 'Billu Aamele Nodona' Video Song from 'Lifu Super'

ಗಾಯಕ ನವೀನ್ ಸಜ್ಜು ಹಾಡಿರುವ ಈ ಹಾಡನ್ನು ನಮ್ಮ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶ್ರೀಮುರಳಿ, ಧ್ರುವ ಸರ್ಜಾ, ಲೂಸ್ ಮಾದ ಯೋಗೇಶ್ ಮತ್ತವರ ಸಹೋದರ ಮಹೇಶ್, ಸಂಚಾರಿ ವಿಜಯ್, ನಿನಾಸಂ ಸತೀಶ್, ಚಿಕ್ಕಣ್ಣ ಮುಂತಾದವರು ಡಬ್ ಸ್ಮ್ಯಾಶ್ ಮಾಡಿದ್ದು, ಅದನ್ನು ಈ ಹಾಡಿನ ಮೇಕಿಂಗ್ ವಿಡಿಯೋ ನಡು-ನಡುವೆ ಸೇರಿಸಲಾಗಿರುವುದು ವಿಶೇಷ.

ಈ ಮೊದಲು ಶರಣ್ ಅವರ 'ವಿಕ್ಟರಿ' ಚಿತ್ರದ 'ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು' ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಈ ಹಾಡನ್ನು ಕೂಡ ಸ್ಯಾಂಡಲ್ ವುಡ್ ನ ಸ್ಟಾರ್ ನಟನರೆಲ್ಲರೂ ಮೆಚ್ಚಿಕೊಂಡು ಕೊಂಡಾಡಿದ್ದರು.

http://videos.filmibeat.com/kannada/on-the-sets/making-of-billu-aamele-nodona-video-song-lifu-super-221307.html

ಇದೀಗ ಅದೇ ಸಾಲಿನಲ್ಲಿ 'ಬಿಲ್ಲು ಆಮೇಲೆ ನೋಡೋಣ ಕೊಟ್ಬಿಡಿ ಬೀರು' ಕೂಡ ಫೇಮಸ್ ಆಗುತ್ತಿದೆ. ಎಲ್ಲಾ ಹೊಸಬರೇ ಸೇರಿಕೊಂಡು ಮಾಡುತ್ತಿರುವ ಚಿತ್ರಕ್ಕೆ ಈ ಮೂಲಕ ಕನ್ನಡ ಚಿತ್ರರಂಗದ ಸ್ಟಾರ್ ನಟರು ಪ್ರೋತ್ಸಾಹ ಕೊಡುತ್ತಿದ್ದಾರೆ.

ಈಗಾಗಲೇ ಈ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ನೋಡುಗರಿಗೆ ತುಂಬಾನೇ ಮನರಂಜನೆ ನೀಡುತ್ತಿದೆ. ಈ ವಿಡಿಯೋ ನೀವೂ ನೋಡಿ ಎಂಜಾಯ್ ಮಾಡಿ...

Watch making of 'Billu Aamele Nodona' Video Song from 'Lifu Super'

ನಿರ್ದೇಶಕ ಆರ್.ವಿನೋದ್ ಕುಮಾರ್ ಅವರು ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ಎಲ್ಲಾ ಹೊಸ ಪ್ರತಿಭೆಗಳೇ ಮಿಂಚಿದ್ದಾರೆ. ನಟ ಲಿಖಿತ್ ಸೂರ್ಯ, ನಟಿ ಮೇಘನಾ, ನಟಿ ಅನು ಚಿನ್ನಪ್ಪ ಮತ್ತು ನಟ ನಿರಂತ್ ಅವರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

English summary
Watch the Making of 'Billu Aamele Nodona' Video Song from Kannada Movie 'Lifu Super', starring Actor Likhit Surya, Actor Nirantha, Actress Meghana, Actress Anu Chinappa and others. Directed by R.Vinod Kumar. Music composed by Judah Sandhy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada