»   » ವಿಡಿಯೋ: 'H2O' ಕುಡಿದು ಸಖತ್ ಆಗಿ ಹಾಡಿ-ಕುಣಿದ ಉಪೇಂದ್ರ

ವಿಡಿಯೋ: 'H2O' ಕುಡಿದು ಸಖತ್ ಆಗಿ ಹಾಡಿ-ಕುಣಿದ ಉಪೇಂದ್ರ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಮಣಿ ಮತ್ತು ಅವಂತಿಕಾ ಶೆಟ್ಟಿ ಒಂದಾಗಿ ಕಾಣಿಸಿಕೊಂಡಿರುವ 'ಕಲ್ಪನಾ 2' ಕುಂಬಳಕಾಯಿ ಒಡೆದಿದ್ದು, ಈಗಾಗಲೇ ಆಡಿಯೋ ಬಿಡುಗಡೆ ಕೂಡ ನೆರವೇರಿದೆ.

ಹಾಡುಗಳು ಎಲ್ಲಾ ಕಡೆ ಸಖತ್ ಸದ್ದು ಮಾಡುತ್ತಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು 'ಕಲ್ಪನಾ 2' ಹಾಡುಗಳಿಗೆ ಧ್ವನಿ ನೀಡಿದ್ದಾರೆ.[ಜೂನ್ 9ಕ್ಕೆ ಉಪ್ಪಿ ಅಭಿಮಾನಿಗಳಿಗೆ ಕಾದಿದೆ ಸಂತಸದ ಸುದ್ದಿ]


Watch Making of 'H2O Kudidivni Baare' song by 'Kalpana 2'

ಇದೀಗ ಉಪೇಂದ್ರ ಅವರು ತಮ್ಮ ನಟನೆಯ 'ಕಲ್ಪನಾ 2' ಗೆ 'H2O ಕುಡಿದಿವ್ನಿ ಬಾರೇ-ರಕ್ತ ಕಣ್ಣೀರು ಸುರಿಸಿವ್ನಿ ಬಾರೇ' ಎಂಬ ಹಾಡನ್ನು ಹಾಡಿದ್ದು, ಆ ಹಾಡಿನ ಕಲರ್ ಫುಲ್ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ.


ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಅವಂತಿಕಾ ಅವರು ಸಖತ್ ಆಗಿ ಹೆಜ್ಜೆ ಹಾಕಿರುವ ಈ ಹಾಡಿನಲ್ಲಿ ಉಪೇಂದ್ರ ಅವರ ಎಲ್ಲಾ ಸಿನಿಮಾಗಳ ಹೆಸರುಗಳನ್ನು ಬಳಸಿಕೊಂಡಿರೋದು ವಿಶೇಷ.['ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?]


Watch Making of 'H2O Kudidivni Baare' song by 'Kalpana 2'

ತಮಿಳು 'ಕಾಂಚನಾ 2' ಚಿತ್ರದ ರೀಮೇಕ್ ಆಗಿರುವ 'ಕಲ್ಪನಾ 2' ಚಿತ್ರಕ್ಕೆ ನಿರ್ದೇಶಕ ಆರ್ ಅನಂತರಾಜು ಅವರು ನಿರ್ದೇಶನ ಮಾಡಿದ್ದಾರೆ. ಹಾರರ್-ಥ್ರಿಲ್ಲರ್ 'ಕಲ್ಪನಾ 2' ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.[ರಿಯಲ್ ಉಪ್ಪಿ ಅವರ ಹಾರರ್ ಚಿತ್ರದಲ್ಲಿ ನಾಡಗೀತೆ ಕಂಪು]


Watch Making of 'H2O Kudidivni Baare' song by 'Kalpana 2'

ರಿಯಲ್ ಸ್ಟಾರ್ ಉಪೇಂದ್ರ ಹಾಡಿರುವ 'H2O ಕುಡಿದಿವ್ನಿ ಬಾರೇ' ಅನ್ನೋ ಹಾಡಿನ ಮೇಕಿಂಗ್ ವಿಡಿಯೋ ಝಲಕ್ ಇಲ್ಲಿದೆ ನೋಡಿ.....

English summary
Watch the Making Of H20 Kudidivni Song from Kalpana 2, starring Upendra, Priyamani, Avanthika Shetty and others. Music composed By Arjun Janya. Directed by R. Anantha Raju.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada