»   » ಟ್ರೆಂಡಿಂಗ್ ಆಗ್ತಿದೆ 'ಜಾಗ್ವಾರ್' ಚಿತ್ರದ ಈ ರೊಮ್ಯಾಂಟಿಕ್ ಸಾಂಗ್

ಟ್ರೆಂಡಿಂಗ್ ಆಗ್ತಿದೆ 'ಜಾಗ್ವಾರ್' ಚಿತ್ರದ ಈ ರೊಮ್ಯಾಂಟಿಕ್ ಸಾಂಗ್

Posted By:
Subscribe to Filmibeat Kannada

ಚೊಚ್ಚಲ ಸಿನಿಮಾದಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಕಮಾಲ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಮಹಾದೇವ್ ಆಕ್ಷನ್ ಕಟ್ ಹೇಳಿರುವ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರೆಡಿ ಆಗಿರುವ 'ಜಾಗ್ವಾರ್' ಟ್ರೈಲರ್ ಮತ್ತು ಸಾಂಗ್ಸ್ ವೈರಲ್ ಆಗ್ತಿರೋದನ್ನ ನೋಡಿದ್ರೆ, ಹೊಸ ದಾಖಲೆ ಬರೆಯುವುದು ಖಂಡಿತ. [ಟ್ರೈಲರ್: 'ಜಾಗ್ವಾರ್'...ದಿ ಕಿಲ್ಲರ್ ಅಬ್ಬರ ಬೊಂಬಾಟ್ ಗುರು]


watch-nikhil-kumar-starrer-jaguar-song-mama-seetha

ನಿನ್ನೆ (ಸೆಪ್ಟೆಂಬರ್ 2) ಸಂಜೆ 'ಜಾಗ್ವಾರ್' ಚಿತ್ರದ ಟ್ರೈಲರ್ ಬಿಡುಗಡೆ ಆಯ್ತು. ಒಂದೇ ದಿನದಲ್ಲಿ 'ಜಾಗ್ವಾರ್' ಚಿತ್ರದ ಟ್ರೈಲರ್ ನ ಯೂಟ್ಯೂಬ್ ನಲ್ಲಿ 69 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. [ಹಾಡು ಕೇಳಿ: 'ಹೇ...ಕೇಳೇ ನನ್ನ ಮುದ್ದು ಜಾಜಿ ಮಲ್ಲೆ...']


ಟ್ರೈಲರ್ ಜೊತೆ ನಿಖಿಲ್ ಕುಮಾರ್ ಮತ್ತು ದೀಪ್ತಿ ಸತಿ ಹೆಜ್ಜೆ ಹಾಕಿರುವ ರೊಮ್ಯಾಂಟಿಕ್ ಹಾಡು ಕೂಡ ರಿಲೀಸ್ ಆಗಿತ್ತು. ತಲೆ ತೂಗುವಂತೆ ಇರುವ ಎಸ್.ಎಸ್.ಥಮನ್ ಸಂಗೀತ ನೀಡಿರುವ ಕಾರ್ತಿಕ್ ಮತ್ತು ಮೇಘ ಹಾಡಿರುವ 'ಓಹ್...ಹುಡುಗಿ ಬಲೆ ಬೀಸಿ ಹಿಡಿದುಕೊಂಡಿರುವೆ..' ಹಾಡನ್ನ 14 ಸಾವಿರಕ್ಕೂ ಹೆಚ್ಚು ವ್ಯೂಸ್ ಪಡೆದುಕೊಂಡಿದೆ.ಓಹ್...ಹುಡುಗಿ ಬಲೆ ಬೀಸಿ ಹಿಡಿದುಕೊಂಡಿರುವೆ...
ಓಹೋ, ನೀ ನನ್ನ ಮನಸಾವರಿಸಿ ಅಪ್ಪಿಕೊಂಡಿರುವೆ...
ಏಹೇ, ನೀ ಹೃದಯಕ್ಕೆ ನುಗ್ಗಿ ಫುಟ್ ಬಾಲ್ ಆಡಿರುವೆ...
ನನ್ನಂಥಾ ಒಳ್ಳೆ ಹುಡುಗರ ಲೈಫ್ ಗೆ ವೈರಸ್ ಬಿಟ್ಟಿರುವೆ....


[ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]

English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. The romantic song of the Movie 'Mama Seetha' is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada