»   » ಪುನೀತ್ ರಾಜ್ ಕುಮಾರ್ ಲವ್ವು ನೀರು ಪಾಲಾದಾಗ...

ಪುನೀತ್ ರಾಜ್ ಕುಮಾರ್ ಲವ್ವು ನೀರು ಪಾಲಾದಾಗ...

Posted By:
Subscribe to Filmibeat Kannada

ಲವ್ ಮಾಡೋರಿಗೆ ಈಗ ಸುಲಭ. ಮೀಟಿಂಗ್-ಡೇಟಿಂಗ್ ಕನೆಕ್ಟ್ ಮಾಡುವುದಕ್ಕೆ ವಾಟ್ಸ್ ಆಪ್, ಜಿ-ಮೇಲ್, ವೀ ಚಾಟ್ ಎಲ್ಲಾ ಇದೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದೆ ಲೆಟರ್ ಒಂದು ಬಿಟ್ಟರೆ ಬೇರೇನೂ ಇರ್ಲಿಲ್ಲ.

ಅಂದಕಾಲತ್ತಿಲ್, ತನಗಾಗಿ ಕಾಯ್ತಿದ್ದ ಪ್ರೇಯಸಿಗೆ ಲವ್ ಲೆಟರ್ ಬರೆದು ಬಿಳಿ ಪಾರಿವಾಳ ಕಾಲಿಗೆ ಕಟ್ಟಿ ಕಳುಹಿಸಿದ ಅಪ್ಪು ಪ್ರೇಮ ಪತ್ರ ನೀರು ಪಾಲಾಗೋಯ್ತಂತೆ. ಅಂದ್ಹಾಗೆ, ಇದು ನಾವು ಹೇಳುತ್ತಿರುವ ಕಥೆ ಅಲ್ಲ. ಖುದ್ದು ಪುನೀತ್ ರಾಜ್ ಕುಮಾರ್ 'ರಣವಿಕ್ರಮ' ಚಿತ್ರದ ಹಾಡಲ್ಲಿ ಹೇಳಿರುವ ಫ್ಲ್ಯಾಶ್ ಬ್ಯಾಕ್ ಕಹಾನಿ. [ಪುನೀತ್ ಅಭಿನಯದ 'ರಣವಿಕ್ರಮ' ಆಡಿಯೋ ವಿಮರ್ಶೆ]


Watch Puneeth Rajkumar starrer Ranavikrama 'Airdellu Airchillu' song

ಏರ್ ಟೆಲ್, ಏರ್ ಸೆಲ್ ಅಂತಹ ನೆಟ್ ವರ್ಕ್ ಕಂಪನಿಗಳು ಸುಮಾರಿದ್ದರೂ, ನೆಟ್ ವರ್ಕ್ ಸಿಗದೆ ಹೋದರೆ ಪ್ರೇಮಿಗಳ ಕನವರಿಕೆ ಹೇಗಿರುತ್ತೆ ಅನ್ನುವ ಕುರಿತು 'ರಣವಿಕ್ರಮ' ಚಿತ್ರದಲ್ಲಿ ಒಂದು ಮಜವಾದ ಹಾಡಿದೆ. ಪುರಾತನ ಕಮ್ ಮಾರ್ಡನ್ ಸ್ಟೈಲ್ ನಲ್ಲಿ ನೃತ್ಯ ಸಂಯೋಜಿಸಿರುವ ''ಏರ್ ಡೆಲ್ಲು...ಏರ್ ಚೆಲ್ಲು...'' ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. [ಪುನೀತ್ ಕೋಗಿಲೆ ಕಂಠದಲ್ಲಿ 'ರಣವಿಕ್ರಮ' ಪ್ರೇಮಗೀತೆ]


ರಾಜರ ಗೆಟಪ್ ನಲ್ಲಿ 'ವೀರ ಕೇಸರಿ' ಮತ್ತು 'ಮಯೂರ'ನಂತೆ ಮಿಂಚುವ 'ರಣವಿಕ್ರಮ' ಅಪ್ಪು, ನೆಟ್ ವರ್ಕ್ ಇಲ್ಲದೆ ಗೊಣಗುತ್ತಾ ನಾಯಕಿ ಅದಾ ಶರ್ಮಾ ಜೊತೆ ಹೇಗೆ ಸ್ಟೆಪ್ ಹಾಕಿದ್ದಾರೆ ಅಂತ ನೀವೇ ನೋಡಿ....


Watch Puneeth Rajkumar starrer Ranavikrama 'Airdellu Airchillu' song

ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡು ಕೇಳುವುದಕ್ಕೂ, ನೋಡುವುದಕ್ಕೂ ಡಿಫರೆಂಟ್ ಆಗಿದೆ. ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಇದೇ ವಾರ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಅಲ್ಲಿವರೆಗೂ, ವಾಟ್ಸ್ ಆಪ್ ನ ಕೊಂಚ ಸೈಡಿಗಿಟ್ಟು, ಹಾಡು ಕೇಳಿ...


ಏರ್ ಡೆಲ್ಲು, ಏರ್ ಚಿಲ್ಲು, ಈ ಮೇಲು, ಜಿ ಮೇಲು, ನೆಟ್ ವರ್ಕು ಸಿಗುತ್ತಿಲ್ಲ ಏನ್ ಮಾಡಲಿ....
ವಾಟ್ಸ್ ಆಪ್, ವೀ ಚಾಟ್, ಜಿ ಟಾಕ್, ಸ್ಕೈ ಪೂಲು ಕೈಕೊಡ್ತು ಸರಿಯಾಗಿ ಏನ್ ಮಾಡಲಿ....
ಯಾಹೂ ನು ಇಲ್ಲ...ಊಹ್ಹೂಂ..ನು ಇಲ್ಲ...ಕರೆನ್ಸಿ ಇದ್ರೂನೂ ವರ್ಕ್ ಆಗುತ್ತಿಲ್ಲ...
ಹೈಟೆಕ್ಕು ವನವಾಸ ಏನ್ ಮಾಡಲಿ....ಬರೆದನೂ ಒಂದು ಪ್ರೇಮದಾ ಪತ್ರ, ಸೇರಿಸಲೇ ಬೇಕು ಲವ್ವರ್ ಹತ್ರ
ಅದಕ್ಕೇನೇ ಬಿಳಿ ಡವ್ವು ತಂದಾಯಿತು, ಅದರ ಕಾಲ್ ಗೆ ಲವ್ ಲೆಟರ್ ಲಾಕ್ ಆಯಿತು
ಬಿಳಿ ಡವ್ವು ರಾಕೆಟ್ ಹಂಗೆ ಹಾರಿಬಿಟ್ಟಿತು, ಆನ್ ದಿ ವೇ ಕರಿ ಡವ್ವು ಕಣ್ ಹೊಡೆಯಿತು
ಹೀಗಾಗಿ ನನ್ನ ಲವ್ವು ನೀರು ಪಾಲಾಯಿತುಬರುತ್ತಿದೆ ರೆಡ್ ಕಲರ್ ಕೆಂಡದ ಕೋಪ, ಅಯ್ಯಯೋ ನಾನೇನು ಮಾಡಿದೆ ಪಾಪ
ಪ್ರೇಯಸಿಯು ವೇಯ್ಟಿಂಗು ಟೆಲಿಗ್ರಾಮ್ ಇದೆ, ಟೆಲಿಗ್ರಾಮ್ ಸರ್ವೀಸು ಶೆಡ್ ಆಗಿದೆ
ಹೀಗಾಗಿ ನನ್ನ ಲವ್ವು ಸ್ಟಾಪ್ ಆಗಿದೆ.
ಆದ್ರೆ, ಕನಸಲ್ಲಿ ನನ್ನವಳ ಮೊಗವು ಕಂಡಿದೆ
ಕನಸನ್ನೋ ನೆಟ್ ವರ್ಕ್ಕು, ಮನಸ್ಸನ್ನೋ ಮೊಬೈಲು ಕನೆಕ್ಟ್ ಆಗೋಯ್ತು ನೀವು ಕೇಳಿರಿ
ಟ್ರೂ ಲವ್ವು ಎಂದೆಂದೂ ನಾನ್ ಸ್ಟಾಪು ಟ್ರೇನೆಂದು ಹಾಡ್ಕೊಂಡು ಎಲ್ಲಾರು ಕಣ್ಮುಚ್ಚಿರಿ

English summary
Power Star Puneeth Rajkumar starrer 'Ranavikrama' is all set to release on April 10th. Meanwhile, Ranavikrama's special 'Airdellu Airchillu' song is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada