»   » ಪುನೀತ್ ಕೋಗಿಲೆ ಕಂಠದಲ್ಲಿ 'ರಣವಿಕ್ರಮ' ಪ್ರೇಮಗೀತೆ

ಪುನೀತ್ ಕೋಗಿಲೆ ಕಂಠದಲ್ಲಿ 'ರಣವಿಕ್ರಮ' ಪ್ರೇಮಗೀತೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಮೈಕ್ ಮುಂದೆ ಬಂದಿದ್ದಾರೆ. ಫುಲ್ ಫೀಲಿಂಗ್ ನಲ್ಲಿ ''ನೀನೇ...ನೀನೇ..'' ಅಂತ ಹಾಡು ಹಾಡಿದ್ದಾರೆ. ಆದ್ರೆ, ಈ ಬಾರಿ ಅಪ್ಪು ಬೇರೆ ನಟರ ಚಿತ್ರಕ್ಕಾಗಿ ಗಾನ ಸುಧೆ ಹರಿಸಿಲ್ಲ. ಬದಲಾಗಿ, ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ರಣವಿಕ್ರಮ'ಗಾಗಿ ದನಿಯಾಗಿದ್ದಾರೆ.

ಯೆಸ್, ಅಪ್ಪು ಅಭಿಮಾನಿಗಳಿಗೆ ಡಬಲ್ ಧಮಾಕಾ ನ್ಯೂಸ್ ಅಂದ್ರೆ ಇದೆ. ಕೆಲ ದಿನಗಳ ಹಿಂದೆಯಷ್ಟೇ 'ಫಿಲ್ಮಿಬೀಟ್'ಗೆ ನಿರ್ದೇಶಕ ಪವನ್ ಒಡೆಯರ್ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿಯನ್ನ ಹೊರಹಾಕಿದ್ದರು. ['ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು]


Watch 'Ranavikrama' making song sung by Puneeth Rajkumar

'ರಣವಿಕ್ರಮ' ಚಿತ್ರದ ಎರಡು ಹಾಡುಗಳನ್ನ ಪುನೀತ್ ಹಾಡಲಿದ್ದಾರೆ ಅಂತ ಪವನ್ ಒಡೆಯರ್ ಬಹಿರಂಗಗೊಳಿಸಿದ್ದರು. ಅದರಂತೆ ಒಂದು ರೋಮ್ಯಾಂಟಿಕ್ ಸಾಂಗ್ ಗೆ ಅಪ್ಪು ದನಿ ನೀಡಿದ್ದಾರೆ. ಅದರ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ.....


ಗೀತ ಸಾಹಿತಿ ಕವಿರಾಜ್ ಬರೆದಿರುವ ಮನಮುಟ್ಟುವ ಸಾಹಿತ್ಯಕ್ಕೆ, ಅಷ್ಟೇ ಮನಮಿಡಿಯುವ ಹಾಗೆ ಗಾನಸುಧೆ ಹರಿಸಿದ್ದಾರೆ ಅಪ್ಪು. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ''ನೀನೇ...ನೀನೇ...'' ಹಾಡು ಸೊಗಸಾಗಿ ಮೂಡಿಬಂದಿದೆ. [ಗುಂಡಿಗೆ ಗಟ್ಟಿಮಾಡಿಕೊಂಡು ನೋಡಿ 'ರಣವಿಕ್ರಮ' ಟೀಸರ್]


Watch 'Ranavikrama' making song sung by Puneeth Rajkumar

ಸದ್ಯಕ್ಕೆ ಈ ಡ್ಯುಯೆಟ್ ನಂಬರ್ ಗೆ ಮಾತ್ರ ಪುನೀತ್ ಹಾಡಿರುವ ವಿಡಿಯೋ ಔಟ್ ಆಗಿದೆ. ಇದರೊಂದಿಗೆ ಅಪ್ಪು ಹಾಡಿರುವ ಮತ್ತೊಂದು ಗೀತೆ ಹೇಗಿರುತ್ತೆ ಅನ್ನುವ ಝಲಕ್ ಸದ್ಯದಲ್ಲೇ ರಿಲೀಸ್ ಆಗಲಿದೆ. ['ಧೀರ ರಣವಿಕ್ರಮ'ದ ವಿಲನ್ ಆಗಿ ಬಾಲಿವುಡ್ ವಿಕ್ರಮ್ ಸಿಂಗ್]


Watch 'Ranavikrama' making song sung by Puneeth Rajkumar

ಈಗಾಗಲೇ ರೀರೆಕಾರ್ಡಿಂಗ್ ಗೆ ಚಿತ್ರತಂಡ ಚಾಲನೆ ನೀಡಿದ್ದು, ಸದ್ಯದಲ್ಲೇ 'ರಣವಿಕ್ರಮ' ಆಡಿಯೋ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪುನೀತ್ ರಾಜ್ ಕುಮಾರ್ ಜೊತೆ ಅದಾ ಶರ್ಮಾ ಮತ್ತು ಅಂಜಲಿ ಜೋಡಿಯಾಗಿರುವ 'ರಣವಿಕ್ರಮ' ಏಪ್ರಿಲ್ ಹೊತ್ತಿಗೆ ತೆರೆಗೆ ಅಪ್ಪಳಿಸಲಿದೆ. ಅಲ್ಲಿವರೆಗೂ, ನೀನೇ...ನೀನೇ ಗುಂಗಿನಲ್ಲಿರಿ....(ಫಿಲ್ಮಿಬೀಟ್ ಕನ್ನಡ)


Watch 'Ranavikrama' making song sung by Puneeth Rajkumar

ನೀನೇ ನೀನೇ ನೀನೇ ನೀನೇ...
ಕಣ್ಣ ತುಂಬಾ ನೀನೇ ತಾನೇ...
ಮನಸ್ಸು ಮುಟ್ಟೋ ಚೆನ್ನೆ ನೀನೇ
ಕೋಟಿ ಕೋಟಿ ಹುಡುಗೀರಲ್ಲಿ ನಿನ್ನಂತೆ ಯಾರೂ ಇಲ್ಲ
ನನ್ನ ಕಣ್ಣು ನಿನ್ನ ಬಿಟ್ಟು ಯಾರನ್ನೂ ನೋಡೋದಿಲ್ಲ...

English summary
Power Star Puneeth Rajkumar has sung a song for his upcoming flick 'Ranavikrama'. V.Harikrishna has composed the music for 'Ranavikrama', which is directed by Pawan Wadeyar. Watch the making video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada