»   » 'ಉಪ್ಪು ಹುಳಿ ಖಾರ'ಕ್ಕೆ ಮಸಾಲೆ ಮಿಕ್ಸ್ ಮಾಡಿದ ಸಾಧು-ಭಟ್ರು

'ಉಪ್ಪು ಹುಳಿ ಖಾರ'ಕ್ಕೆ ಮಸಾಲೆ ಮಿಕ್ಸ್ ಮಾಡಿದ ಸಾಧು-ಭಟ್ರು

Posted By:
Subscribe to Filmibeat Kannada

ಚಂದನವನದ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಬಿಡುಗಡೆ ಆಗುವುದು ತಡವಾಗುತ್ತಿದ್ದರೂ ತಾರಾಬಳಗ, ಚಿತ್ರದಲ್ಲಿನ ಹಾಡುಗಳು ಮತ್ತೆ ಇತರೆ ವಿಷಯಗಳಿಂದ ಸ್ಯಾಂಡಲ್ ವುಡ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿನ ವಿಶೇಷತೆ ಬಗ್ಗೆ ಈಗ ಇನ್ನೊಂದು ಹೊಸ ವಿಷಯ ಹೊರಬಿದ್ದಿದೆ.['ಉಪ್ಪು ಹುಳಿ ಖಾರ': ರುಚಿ ಹೆಚ್ಚಿಸಲು ಗ್ಲಾಮರ್ ಗೊಂಬೆ ಎಂಟ್ರಿ..!]

'ಉಪ್ಪು ಹುಳಿ ಖಾರ' ಚಿತ್ರಕ್ಕೆ ತುಪ್ಪದ ಬೆಡಗಿ ನಟಿ ರಾಗಿಣಿ ರವರಿಂದ ಸ್ನೇಕ್ ಡ್ಯಾನ್ಸ್ ಮಾಡಿಸಿ ಚಿತ್ರತಂಡ ಸುದ್ದಿ ಆಗಿತ್ತು. ಈಗ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ, ಸಂಗೀತ ನಿರ್ದೇಶಕರಾದ ಯೋಗ್ ರಾಜ್ ಭಟ್ ಮತ್ತು ಸಾಧು ಕೋಕಿಲ ರವರ ಕಾಂಬಿನೇಷನ್ ನಲ್ಲಿ ಹಾಡೊಂದು ಮೂಡಿಬಂದಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿದೆ.

Yogaraj Bhat and Sadhu Kokila combination song in 'Uppu Huli Khara'

ಪಡ್ಡೆ ಹುಡುಗರ ಹಾಟ್ ಫೇವರಿಟ್ ಸಬ್ಜೆಕ್ಟ್ 'ಕಿಸ್' ಕುರಿತು ಯೋಗರಾಜ್ ಭಟ್ ಬರೆದಿರುವ ಸಾಹಿತ್ಯಕ್ಕೆ ಸಾಧು ಕೋಕಿಲ ರವರು ಧ್ವನಿ ನೀಡಿದ್ದಾರೆ. ಆ ಸಾಂಗ್ ಮೇಕಿಂಗ್ ವಿಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

'ಸಾಧು ಕೋಕಿಲ ರವರು ಹಾಡಿರುವ ಆ ಸ್ಪೆಷಲ್ ಸಾಂಗ್ "ಲಿಪ್ಪು ಲಿಪ್ಪು ಸೇರಿ ತಪ್ಪಾಗೋಯ್ತು ಕಣ್ರಿ.. ಬೇಕು ಬಾಳಿಗೊಂದು ಪ್ರಥಮ ಚುಂಬನ. ಉಪ್ಪು ಹುಳಿ ಖಾರ ತಿಂದ್ರು ತುಟಿ ಸ್ವೀಟು ಸ್ವೀಟು ಯಾಕಾಗ್ತದೆ.. ತಂಪು ತಂಪಾಗಿದ್ರು ಮುತ್ತು ಬಾಡಿ ಹೀಟು ಹೀಟು ಯಾಕಾಗ್ತದೆ" ಎಂಬುದು. ಈ ಹಾಡಿಗೆ Judah Sandhy ಸಂಗೀತ ಸಂಯೋಜನೆ ಮಾಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ಇರುವ ಸಾಧು ಕೋಕಿಲ ರವರು ಹಾಡಿರುವ ಮೇಕಿಂಗ್ ವಿಡಿಯೋ ನೋಡಲು ಕ್ಲಿಕ್ ಮಾಡಿ

English summary
Music Director Sadhu Kokila sung a song 'Lippu Lippu Seri' penned by Yograj Bhat for 'Uppu Huli Khara' movie. 'Uppu Huli Khara' movie directed by Imran Sardhariya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada