»   » 'ಉಪ್ಪು ಹುಳಿ ಖಾರ': ರುಚಿ ಹೆಚ್ಚಿಸಲು ಗ್ಲಾಮರ್ ಗೊಂಬೆ ಎಂಟ್ರಿ..!

'ಉಪ್ಪು ಹುಳಿ ಖಾರ': ರುಚಿ ಹೆಚ್ಚಿಸಲು ಗ್ಲಾಮರ್ ಗೊಂಬೆ ಎಂಟ್ರಿ..!

Posted By:
Subscribe to Filmibeat Kannada

ಸ್ಯಾಂಡಲ್‌ ವುಡ್‌ ನ ಖ್ಯಾತ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿರುವ 'ಉಪ್ಪು ಹುಳಿ ಖಾರ' ಚಿತ್ರ ಆಗಾಗ ರುಚಿ ತಪ್ಪಿ ಸೆಪ್ಟೆಂಬರ್ 5 ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಇನ್ನೂ ಸಹ ಶೂಟಿಂಗ್‌ ಹಂತದಲ್ಲೇ ಇದೆ. ಈ ಸಿನಿಮಾದ ರುಚಿ ಹೆಚ್ಚಿಸಲು ಈಗ ಇಮ್ರಾನ್‌ ಸರ್ದಾರಿಯಾ ಕನ್ನಡದ ಗ್ಲಾಮರ್ ಗೊಂಬೆ ಒಬ್ಬರನ್ನು ಸೇರ್ಪಡೆ ಮಾಡಿದ್ದಾರೆ.[ಮಾಲಾಶ್ರೀ 'ಉಪ್ಪು-ಹುಳಿ-ಖಾರ' ಚಿತ್ರದ ಶೂಟಿಂಗ್ ಮತ್ತೆ ನಿಂತ್ಹೋಯ್ತು.!]

ಹೌದು 'ಉಪ್ಪು ಉಳಿ ಖಾರ' ಸಿನಿಮಾ ತಂಡದ ಕಡೆಯಿಂದ ಬಂದ ಇತ್ತೀಚಿನ ಮಾಹಿತಿ ಪ್ರಕಾರ ಸಿನಿಮಾದ ರುಚಿ ಹೆಚ್ಚಿಸಲು ಇಮ್ರಾನ್ ಗ್ಲಾಮರ್ ಗೊಂಬೆ ರಾಗಿಣಿ ದ್ವಿವೇದಿ ರವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮೂರು ಶ್ರೀ ಗಳು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ರಾಗಿಣಿ ಎನ್ ಮಾಡೋದಿಕ್ಕೆ ಬಂದ್ರು ಇಲ್ಲಿದೆ ನೋಡಿ ಮಾಹಿತಿ.[ಇಮ್ರಾನ್ 'ಉಪ್ಪು-ಹುಳಿ'ಗೆ 'ಖಾರ' ಹಾಕಲಿರುವ ಹೊಸ ಹೀರೋ ಯಾರು.?]

'ಉಪ್ಪು ಹುಳಿ ಖಾರ' ದಲ್ಲಿ ರಾಗಿಣಿ ಪಾತ್ರವೇನು?

ಇಮ್ರಾನ್‌ ಸರ್ದಾರಿಯಾ ಆಕ್ಷನ್‌ ಕಟ್ ಹೇಳುತ್ತಿರುವ 'ಉಪ್ಪು ಹುಳಿ ಖಾರ' ಚಿತ್ರದಲ್ಲಿ ರಾಗಿಣಿ ದ್ವಿವೇದಿ ರವರು ಹಾವು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.['ಮಶಿನ್' ಜೊತೆ ಬಿಟೌನ್ ನಲ್ಲಿ ಪತ್ತೆಯಾದ ಇಮ್ರಾನ್ ಸರ್ದಾರಿಯಾ]

ಇಮ್ರಾನ್‌ ಹೇಳಿದ್ದೇನು?

ಈಗಾಗಲೇ ರಾಗಿಣಿ ಹಾಗೂ ಇಮ್ರಾನ್ ಸರ್ದಾರಿಯಾ ರವರ ಕಾಂಬಿನೇಷನ್‌ ನಲ್ಲಿ ಹಲವು ಸಾಂಗ್‌ ಗಳು ಈ ವರೆಗೆ ಹಿಟ್ ಆಗಿವೆ. ಆದ್ದರಿಂದ ಇಮ್ರಾನ್‌ ತಮ್ಮ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ವಿಶೇಷವಾಗಿ ರಾಗಿಣಿ ರವರನ್ನು ತೋರಿಸಲು ಡಿಸೈಡ್ ಮಾಡಿ ಅಪ್ರೋಚ್ ಮಾಡಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಏನ್‌ ಮಾಡ್ತಾರೆ? ಮುಂದೆ ಓದಿ..

ರಾಗಿಣಿ ದ್ವಿವೇದಿ

ಹೌದು, ರಾಗಿಣಿ ದ್ವಿವೇದಿ ರವರು 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ನಾಗರಹಾವಿನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮೊದಲು ಇಮ್ರಾನ್ ಈ ಪಾತ್ರದ ಬಗ್ಗೆ ಹೇಳಿದ ತಕ್ಷಣ ಗ್ಲಾಮರ್ ಗೊಂಬೆ ಸಿಕ್ಕಾಪಟ್ಟೆ ವರಿ ಮಾಡ್ಕೋಂಡಿದ್ರಂತೆ. ನಂತರ ಒಂದು ದಿನ ಹಾವಿನ ಪಾತ್ರ ತರಬೇತಿ ಪಡೆದು, ಮೂರು ದಿನಗಳ ಕಾಲ ಚಿತ್ರ ಶೂಟಿಂಗ್ ಮಾಡಲಾಯಿತು. ರಾಗಿಣಿ ಸ್ನೇಕ್ ಡ್ಯಾನ್ಸ್ ಮಾಡುವುದು ಸಿನಿಮಾದಲ್ಲಿಯೇ ಹೈಲೆಂಟ್ ಆಗಿದೆ ಎಂದು ಇಮ್ರಾನ್ ಹೇಳಿದ್ದಾರೆ.

ಉಪ್ಪು ಹುಳಿ ಖಾರ

'ಉಪ್ಪು ಹುಳಿ ಖಾರ' ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ನಟಿ ಅನುಶ್ರೀ ಮತ್ತು ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಅವರು ಕೂಡ ಮುಖ್ಯ ನಾಯಕಿಯರಾಗಿ ಮಿಂಚಿದ್ದಾರೆ. ಈಗ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ವಿಶೇಷ ಪಾತ್ರದಲ್ಲಿ ನಾಲ್ಕನೇ ಸ್ತ್ರಿ ಆಗಿ ರಾಗಿಣಿ ರವರು ಕಾಣಿಸಿಕೊಳ್ಳುತ್ತಿದ್ದಾರೆ.

English summary
Actress ragini became a snake in the movie uppi huli khara directed by Imran Saradaria. She took practice for a day and did three days shooting which will be one of the highlight in the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada