For Quick Alerts
  ALLOW NOTIFICATIONS  
  For Daily Alerts

  ಯುವರತ್ನ 2ನೇ ಹಾಡಿನ ಬಗ್ಗೆ ಮಾಹಿತಿ ನೀಡಿದ ಎಸ್ ಎಸ್ ತಮನ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳಿಗೆ ಅವಕಾಶ ಸಿಗಲಿ ಎಂದು ಕಾಯುತ್ತಿರುವ ಚಿತ್ರತಂಡ ಸದ್ಯಕ್ಕೆ ಹಾಡುಗಳನ್ನು ರಿಲೀಸ್ ಮಾಡುತ್ತಿದೆ.

  ಡಿಸೆಂಬರ್ 2 ರಂದು ಯುವರತ್ನ ಸಿನಿಮಾದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಅಪ್ಪು ಅಭಿಮಾನಿಗಳು ಈ ಹಾಡಿಗೆ ಫುಲ್ ಫಿದಾ ಆಗಿದ್ದಾರೆ.

  'ಪವರ್ ಆಫ್ ಯೂತ್': ಯುವರತ್ನ ಸಿನಿಮಾದ ಪವರ್‌ಫುಲ್ ಹಾಡು ಬಿಡುಗಡೆ

  'ಪವರ್ ಆಫ್ ಯೂತ್' ಹಾಡಿನ ಅಬ್ಬರಕ್ಕೆ ಅಪ್ಪು ಹುಡುಗರು ಖುಷ್ ಆಗಿದ್ದಾರೆ. ಸಂತೋಷ್ ಆನಂದ್ ರಾಮ್ ಸಾಹಿತ್ಯ, ಎಸ್ ಎಸ್ ತಮನ್ ಅವರ ಮ್ಯೂಸಿಕ್ ಬೀಟ್ಸ್ ಸೇರಿ ಪವರ್ ಸ್ಟಾರ್ ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ.

  ಇದೀಗ, ಯುವರತ್ನ ಚಿತ್ರದ ಎರಡನೇ ಹಾಡಿನ ಸಮಯ. 'ಊರಿಗೊಬ್ಬ ರಾಜ' ಎಂಬ ಹಾಡನ್ನು ರಿಲೀಸ್ ಮಾಡುವ ಬಗ್ಗೆ ಸಂಗೀತ ನಿರ್ದೇಶಕ ತಮನ್ ಸುಳಿವು ನೀಡಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನು ಸ್ವತಃ ಪುನೀತ್ ಹಾಡಿದ್ದಾರೆ. ಆ ಫೋಟೋವನ್ನು ಸಹ ತಮನ್ ಹಂಚಿಕೊಂಡಿದ್ದು, ಕನ್ನಡ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ.

  ಇದು ಮಾಸ್ ಸಾಂಗ್ ಆಗಿದ್ದು, ಭರ್ಜರಿ ಡ್ಯಾನ್ಸ್ ಸಹ ಇದೆ. ಈ ಹಾಡಿಗೆ ತೆಲುಗಿನ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಅಂದ್ಹಾಗೆ, ಪವರ್ ಆಫ್ ಯೂತ್ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡಿದ್ದು, ಕನ್ನಡದಲ್ಲಿ 3 ಮಿಲಿಯನ್ ವೀಕ್ಷಣೆ ಕಂಡಿದೆ. ತೆಲುಗಿನಲ್ಲಿ 2.1 ಮಿಲಿಯನ್ ವೀಕ್ಷಣೆ ಕಂಡಿದೆ.

  Salaar ಫಸ್ಟ್ ಲುಕ್ ನೋಡಿ ಥ್ರಿಲ್ ಆದ Puneeth Rajkumar | Filmibeat Kannada

  ಇನ್ನುಳಿದಂತೆ ಸಂತೋಷ್ ಆನಂದ್ ರಾಮ್ ಯುವರತ್ನ ಸಿನಿಮಾ ನಿರ್ದೇಶಿಸಿದ್ದು, ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದಾರೆ. ಸಯೇಶಾ ಹಾಗು ಸೋನು ಗೌಡ ನಾಯಕಿಯಾಗಿ ನಟಿಸಿದ್ದು, ಧನಂಜಯ್, ಪ್ರಕಾಶ್ ರೈ, ವಸಿಷ್ಠ ಸಿಂಹ ಹಾಗು ದಿಗಂತ್ ಸಹ ಕಾಣಿಸಿಕೊಂಡಿದ್ದಾರೆ.

  English summary
  Powerstar Puneeth rajkumar starrer Yuvarathnaa movie second song to be released Soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X