For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಆಚರಣೆಯಲ್ಲಿ ಗೀತ ಸಾಹಿತಿ ಕೆ ಕಲ್ಯಾಣ್

  |
  ಪ್ರೇಮ ಕವಿ ಎಂದೇ ಖ್ಯಾತರಾಗಿರುವ ಕನ್ನಡ ಚಿತ್ರರಂಗದ ಗೀತ ಸಾಹಿತಿ ಕೆ ಕಲ್ಯಾಣ್ ಇಂದು (ಜನವರಿ 01) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1975 ಜನವರಿ 01 ರಂದು ಬೆಂಗಳೂರಿನಲ್ಲಿ ಇವರ ಜನನ. ಇದೀಗ 37ನೇ ವರ್ಷಕ್ಕೆ ಕಾಲಿಡುತ್ತಿರುವ ಕಲ್ಯಾಣ ತಮ್ಮ 16ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದರು.

  ಇದುವರೆಗೆ ಸುಮಾರು 2400 ಹಾಡುಗಳನ್ನು ಬರೆದಿರುವ ಕಲ್ಯಾಣ್, 46 ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅವರು ಬರೆದಿರುವ ಅಮೃತವರ್ಷಿಣಿ ಹಾಗೂ ಚಂದ್ರಮುಖಿ ಪ್ರಾಣಸಖಿ ಚಿತ್ರಗಳ ಹಾಡುಗಳಂತೂ ಬಹು ಜನಪ್ರಿಯ. ಹುಚ್ಚ, ನಮ್ಮೂರ ಮಂದಾರ ಹೂವೆ ಅವರ ಇತರ ಜನಪ್ರಿಯ ಗೀತೆಗಳ ಚಿತ್ರಗಳು.

  ಮಾಧುರ್ಯ ಪ್ರಧಾನ ಗೀತೆಗಳನ್ನು ನೀಡುವುದರಲ್ಲಿ ಸದಾ ಸಿದ್ಧಹಸ್ತರಾಗಿರುವ ಇವರನ್ನು ಮಧುರ ಕವಿ ಎನ್ನುತ್ತಾರೆ. ಇವರ ಹಾಡುಗಳಲ್ಲಿ ಮನಸ್ಸು ಪದಬಳಕೆ ಸಾಮಾನ್ಯವಾಗಿರುವುದರಿಂದ ಮನಸ್ಸಿನ ಕವಿ ಎಂದೂ ಕರೆಯುವವರಿದ್ದಾರೆ. ಈ ಮಧುರ ಮನಸ್ಸಿನ ಕವಿಗೆ ಒನ್ ಇಂಡಿಯಾದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

  English summary
  Lyricist K Kalyan's Birthday Today. His Birth Date is Jan 01 1975. He took birth in Bangalore. 
 
  Sunday, January 1, 2012, 12:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X