»   »  ಸದ್ದಿಲ್ಲದಂತೆ ಯುಗಾದಿ ದಿನ ಸೆಟ್ಟೇರಿದ ಹುಚ್ಚಿ ಚಿತ್ರ

ಸದ್ದಿಲ್ಲದಂತೆ ಯುಗಾದಿ ದಿನ ಸೆಟ್ಟೇರಿದ ಹುಚ್ಚಿ ಚಿತ್ರ

Posted By:
Subscribe to Filmibeat Kannada
ಪಂಚಾಂಗಂ ಚಿತ್ರ ಲಾಂಛನದಲ್ಲಿ ವೆಂಕಟೇಶ ಪಂಚಾಂಗಂ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಕಾಳಿದಾಸ ಲವ್ವಲ್ ಬಿದ್ದ' ಚಿತ್ರ ಈಗಾಗಲೇ ಡಿ.ಟಿ.ಎಸ್. ಅಳವಡಿಸಿಕೊಂಡು ಪ್ರಥಮ ಪ್ರತಿ ಹೊರಬರುವ ಸಿದ್ಧತೆಯಲ್ಲಿರುವಾಗಲೇ ಪೂಜಾ ಗಾಂಧಿ ನಾಯಕಿಯಾಗಿ ಅಭಿನಯಿಸಲಿರುವ 'ಹುಚ್ಚಿ' ಚಿತ್ರದ ಚಿತ್ರೀಕರಣವನ್ನು ಕಳೆದ ಯುಗಾದಿಯಂದು ಪ್ರಾರಂಭಿಸಿದ್ದಾರೆ.

ಆಕಸ್ಮಿಕವಾಗಿ ನಡೆದಂತಹ ಒಂದು ಘಟನೆಯಲ್ಲಿ ನೊಂದು ಬಳಲಿದ ಯುವತಿಯೋರ್ವಳು ಜೀವನದಲ್ಲಿ ತುಂಬಾ ನಿರಾಸೆಯಿಂದ ಮಾನಸಿಕ ಆಘಾತಕ್ಕೊಳಗಾಗುತ್ತಾಳೆ. ನಂತರ ಆಕೆ ಜೀವನದಲ್ಲಿ ಏನೇ ಮಾಡಲೂ ಸಹ ಭಯಪಡುತ್ತಾಳೆ. ತನ್ನ ಸುತ್ತಲಿನ ಎಲ್ಲರೂ ತನಗೆ ಮೋಸಮಾಡುತ್ತಾರೆಂದು ಕಲ್ಪಿಸಿಕೊಂಡು ಈಕೆ ಚಿತ್ರವಿಚಿತ್ರವಾಗಿ ವರ್ತಿಸುತ್ತಾಳೆ. ಈ ಹುಚ್ಚಿ ಹಿನ್ನೆಲೆ ಏನು ? ಆಕೆಯ ಜೀವನದಲ್ಲಿ ನಡೆದಂತಹ ಘಟನೆ ಯಾವುದು ಎಂಬುದನ್ನು ಸದ್ಯ ಗುಪ್ತವಾಗಿಟ್ಟುಕೊಂಡಿರುವ ನಿರ್ದೇಶಕರು ಬೆಂಗಳೂರು ಸುತ್ತಮುತ್ತ25 ದಿನಗಳ ಕಾಲ ಸತತವಾಗಿ ಒಂದೇ ಹಂತದಲ್ಲಿ ಚಿತ್ರೀಕರಿಸಲಿದ್ದಾರೆ.

ನವೀನ್ ಸುವರ್ಣ ಅವರು ಛಾಯಾಗ್ರಾಹಕರಾಗಿದ್ದು, ನಿರ್ಮಾಪಕ ಗಿರಿ ಪಂಚಾಂಗಂ ಅವರೇ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಕಪಾಲಿ ಅವರ ನಿರ್ಮಾಣ ನಿರ್ವಹಣೆ, ನಾಗೇಂದ್ರ ಅರಸ್‌ರ ಸಂಕಲನ ಈ ಚಿತ್ರಕ್ಕಿದೆ. ಗಂಡ-ಹೆಂಡತಿ, ಆಕ್ಸಿಡೆಂಟ್ ಖ್ಯಾತಿಯ ತಿಲಕ್ ನಾಯಕನ ಪಾತ್ರ ನಿರ್ವಹಿಸಲಿದ್ದು, ಅನಂತ್‌ನಾಗ್, ಸುಧಾರಾಣಿ, ಧರ್ಮ, ವೆಂಕಟೇಶ್ ಪ್ರಸಾದ್, ಮನ್‌ದೀಪ್‌ರಾಯ್ ಹಾಗೂ ವಿಶೇಷ ಪಾತ್ರವೊಂದರಲ್ಲಿ ಬೇಬಿ ಸೌಂದರ್ಯ (ಸೋನು) ಅಭಿನಯಿಸಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕಾಳಿದಾಸ ಲವ್ವಲ್ ಬಿದ್ದ ಚಿತ್ರದಲ್ಲಿ ಪೂಜಾಗಾಂಧಿ
ಅಂತಿಮ ಹಂತದಲ್ಲಿ ಪೂಜಾಗಾಂಧಿ ಮಿನುಗು
ಪೂಜಾಗಾಂಧಿ ನಟನೆಯ ಅನು ಟ್ರೈಲರ್
ಪೂಜಾಗಾಂಧಿ, ಅಜಯ್ ಅವರ ತಾಜ್ ಮಹಲ್ ಟ್ರೈಲರ್

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X