»   » ನ್ಯಾನೋ ಕಥೆ: ರಕ್ಷಿತಾ ಸ್ವಯಂವರಕ್ಕೆ ರಮೇಶ!

ನ್ಯಾನೋ ಕಥೆ: ರಕ್ಷಿತಾ ಸ್ವಯಂವರಕ್ಕೆ ರಮೇಶ!

By: ಹ ಚ ನಟೇಶ ಬಾಬು
Subscribe to Filmibeat Kannada

ರಕ್ಷಿತಾ ಮೇಡಂ ನಡೆಸಿಕೊಡುವ 'ಸ್ವಯಂವರ'ಕ್ಕೆ ರವೀಂದ್ರನ ಜತೆಗೆ ಎಸ್.ಆರ್.ರಮೇಶನೂ ಹೋಗಿದ್ದ. ಹುಡುಗಿಯನ್ನು ಇಂಪ್ರೆಸ್ ಮಾಡಲು ಇಬ್ಬರೂ ನಾನಾ ಪ್ರಯತ್ನ ಮಾಡಿದರು. ಏನಾದರೂ ಸರಿ, ರಮೇಶ ಒಂದು ಮಾಡಿದರೆ ರವೀಂದ್ರ ಎರಡು ಮಾಡುತ್ತಿದ್ದ.

ರವೀಂದ್ರನಿಗೆ ಹುಡುಗಿ ಒಲಿಯುತ್ತಾಳೆ ಎಂದೇ ವೀಕ್ಷಕರೆಲ್ಲರೂ ಭಾವಿಸಿದ್ದರು. ಅಚ್ಚರಿಯೆಂದರೆ ರಮೇಶನ ಕುತ್ತಿಗೆಗೆ ಹಾರಬಿತ್ತು. ಆಗವನು ನಾಚಿ ನೀರಾದ. 'ಅಡುಗೆಯಲ್ಲಿ ನಾನು ಭೀಮನ ವಂಶಸ್ಥ. ಪಾತ್ರೆ ತೊಳೆಯೋದು, ಬಟ್ಟೇ ಒಗೆಯೋದು, ಸೀರೆ ಐರನ್ ಮಾಡೋದೆಲ್ಲವನ್ನೂ ನಾನೇ ಮಾಡ್ತೀನಿ...'

ಎಂದು ಆತ ವಧು ಕಿವಿಯಲ್ಲಿ ಪಿಸುಗುಟ್ಟಿದ್ದ. ರವೀಂದ್ರ ಅದರಲ್ಲೆಲ್ಲ ಪಿಎಚ್ ಡಿ ಮಾಡಿ ಹೆಚ್ಚಿನ ಅನುಭವ ಹೊಂದಿದ್ದರೂ, ಹೇಳೋದನ್ನು ಮರೆತುಬಿಟ್ಟಿದ್ದ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada