»   »  ಏನಾಯ್ತು ರಾಜ್ ಪುತ್ರರ ಓಂ ಸಿನಿಮಾ ಕಥೆ?

ಏನಾಯ್ತು ರಾಜ್ ಪುತ್ರರ ಓಂ ಸಿನಿಮಾ ಕಥೆ?

Posted By:
Subscribe to Filmibeat Kannada

*ಜಯಂತಿ

What happened to Dr.Raj sons Om movie?
ಶಿವರಾಜ್ ಕುಮಾರ್, ರಾಘಣ್ಣ ಹಾಗೂ ಪುನೀತ್ ಮೂವರೂ ನಟಿಸುತ್ತಾರೆ ಎಂಬ ಕಾರಣಕ್ಕೆ ಸುದ್ದಿಯಾಗಿದ್ದ 'ಓಂ" ಚಿತ್ರ ಸೆಟ್ಟೇರುವ ಸಾಧ್ಯತೆ ಕ್ಷೀಣಿಸಿದೆ. ಇದಕ್ಕೆ ಕಾರಣಗಳು ಎರಡು. ಮೊದಲನೆಯದ್ದು- ಪಿರಮಿಡ್ ಸಾಯಿಮಿರಾ ನಿರ್ಮಾಣ ಸಂಸ್ಥೆ ಇನ್ನು ಕನ್ನಡ ಸಿನಿಮಾಗಳ ಮೇಲೆ ಒಂದೂ ಕಾಸು ಹಾಕೋಲ್ಲ ಅಂತ ನಿರ್ಧರಿಸಿರುವುದು. ಎರಡನೆಯದ್ದು ಮಾದೇಶ ಚಿತ್ರ ಮಕಾಡೆಯಾದ ಕಾರಣ ನಿರ್ದೇಶಕ ರವಿ ಶ್ರೀವತ್ಸ ಮೇಲಿನ ನಂಬಿಕೆ ಮುರಿದುಬಿದ್ದಿರುವುದು.

ಇಷ್ಟಾದ ಮೇಲೂ ರಾಘವೇಂದ್ರ ರಾಜ್‌ಕುಮಾರ್ ಮಾತ್ರ ಸಿನಿಮಾ ಕಥೆ ಮುಗಿದಿದೆ ಅಂತ ಒಪ್ಪಿಕೊಳ್ಳುವುದೇ ಇಲ್ಲ. ಮೂವರೂ ನಟಿಸುವ ಚಿತ್ರದ ಕಥೆ ಏನಾಯಿತು ಅಂತ ಕೇಳಿದಾಗ, ಅವರು ಹೇಳಿದ್ದಿಷ್ಟು-

'ರವಿ ಶ್ರೀವತ್ಸ ಅವರು ಆಗ ಸಣ್ಣ ಎಳೆ ಹೇಳಿದ್ದರು. ಈಗ ಅದು ಇಷ್ಟವಾಗುತ್ತಿಲ್ಲ. ಬೇರೆ ಇನ್ನೊಂದು ಎಳೆ ಇಟ್ಟುಕೊಂಡು ಸಬ್ಜೆಕ್ಟ್ ಮಾಡ್ತಾ ಇದಾರೆ. ನಮ್ಮ ಮೂವರಿಗೂ ಅದು ಹಿಡಿಸಬೇಕು. ಜೀವನದಲ್ಲಿ ಒಟ್ಟಾಗಿ ಮಾಡಿದರೆ ಇದೊಂದನ್ನು ಮಾಡಬಹುದು. ಅಬ್ಬಬ್ಬಾ ಅಂದರೆ, ಇನ್ನೊಂದು ಸಿನಿಮಾದಲ್ಲಿ ಮೂರೂ ಜನ ನಟಿಸಲಾದೀತು. ಮಾಡಿದರೆ, ನೆನಪಲ್ಲಿ ಉಳಿಯುವ ಸಿನಿಮಾ ಮಾಡೋಣ. ಏನಪ್ಪಾ ಮೂರೂ ಜನ ಇಂಥ ಸಿನಿಮಾದಲ್ಲಿ ಆಕ್ಟ್ ಮಾಡಿದರು ಅಂತ ಅನ್ನಿಸಿಕೊಳ್ಳೋದು ನಮಗ್ಯಾರಿಗೂ ಇಷ್ಟವಿಲ್ಲ. ಹಾಗೆ ಅನ್ನಿಸಿಕೊಳ್ಳುವುದಕ್ಕಿಂತ ಮೂರೂ ಜನ ಒಂದೇ ಸಿನಿಮಾದಲ್ಲಿ ನಟಿಸದೇ ಇದ್ದರೂ ತೊಂದರೆಯಿಲ್ಲ. ಹಾಗಾಗಿ ಈ ವಿಷಯದಲ್ಲಿ ಸಾಕಷ್ಟು ಯೋಚಿಸ್ತಾ ಇದ್ದೇವೆ".

'ಓಂ" ಚಿತ್ರಕ್ಕೆ ಓನಾಮ ಹೇಳುವುದು ಅನುಮಾನ ಅನ್ನೋದಕ್ಕೆ ರಾಘಣ್ಣನ ಮಾತಿನ ಕೊನೆಯ ವಾಕ್ಯ ಪುಷ್ಟಿ ಕೊಡುತ್ತದಲ್ಲವೇ?

ಪೂರಕ ಓದಿಗೆ
ಅಣ್ಣ ಮತ್ತು ತಮ್ಮ ಮತ್ತು ಅವನ ತಮ್ಮ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada