For Quick Alerts
  ALLOW NOTIFICATIONS  
  For Daily Alerts

  ಚಿನ್ನದ ತಾರೆ ಗಣೇಶ್ ಗೆ ಹುಟ್ಟುಹಬ್ಬದ ಸಂಭ್ರಮ

  By Mahesh
  |

  ಗೋಲ್ಡನ್ ಸ್ಟಾರ್ ಗಣೇಶ್ ಗೆ ತನ್ನ ಪತ್ನಿ ನಿರ್ದೇಶಿಸುವ ಚಿತ್ರದಲ್ಲಿ ನಟಿಸುವ ಆಸೆಯಂತೆ. ಇಂದು 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗಣೇಶ್ ಮಾಧ್ಯಮದ ಮುಂದೆ ಈ ಆಸೆ ತೋಡಿಕೊಂಡರು. ತಮ್ಮದೇ ಸ್ವಂತ ನಿರ್ಮಾಣದ ಗೋಲ್ಡನ್ ಮೂವೀಸ್ ಆರಂಭವಾಗಿ 'ಮಳೆಯಲಿ ಜೊತೆಯಲಿ' ಉತ್ತಮ ಪ್ರತಿಕ್ರಿಯೆಯೊಂದಿಗೆ ಹಿಟ್ ಚಿತ್ರವಾಗಿ ಹೊರಹೊಮ್ಮಿ, ಶಿಲ್ಪಾ ಕೂಡಾ ಸಮರ್ಥ ನಿರ್ಮಾಪಕಿ ಎನಿಸಿದ್ದು ಗಣೇಶ್ ಸಂತಸವನ್ನು ಹೆಚ್ಚಿಸಿದೆ.

  ಜನ ಈಗಲೂ ನಿಮ್ಮನ್ನು ಯಾಕೆ ಇಷ್ಟಪಡುತ್ತಾರೆ ಎಂದು ಪ್ರಶ್ನಿಸಿದರೆ, ನನ್ನ ನಗುವೇ ಕಾರಣ. ತೆರೆ ಮೇಲೆ ಹಾಗೂ ಹೊರಗೂ ಪಕ್ಕದ್ಮನೆ ಹುಡ್ಗನ ಇಮೇಜ್ ಇರೋದು ನನ್ನ ದೊಡ್ಡ Strength. ನಾನು ಎಷ್ಟೇ ಹಿಟ್ ಸಿನಿಮಾ ಕೊಟ್ಟಿರಬಹುದು. ಸಾಕಷ್ಟು ಹಣ ಗಳಿಸಿರಬಹುದು. ಆದರೆ, ಜನ ಈಗಲೂ ನನ್ನನ್ನು ಗುರಿತಿಸೋದು ಪ್ರೀತಿಯ ಗಣೇಶನಾಗಿ, ಗೋಲ್ಡನ್ ಸ್ಟಾರ್ ಎಂದಲ್ಲ.

  ಈ ವರ್ಷದ ಆಚರಣೆ ಹೇಗೆ ಎಲ್ಲಿ? : ನಾನು ಈ ಸಮಯದಲ್ಲಿ ಅಮೆರಿಕದಲ್ಲಿರಬೇಕಾಗಿತ್ತು. ಅಲ್ಲಿನ ನಾವಿಕ ಸಮ್ಮೇಳನಕ್ಕೆ ಆಹ್ವಾನ ಬಂದಿತ್ತು. ಆದರೆ, ನನ್ನ ಕುಟುಂಬದೊಂದಿಗೆ ಅಮೆರಿಕಾ ಯಾತ್ರೆ ಮಾಡುವುದಕ್ಕಿಂತ ಇಲ್ಲೇ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಬುದ್ಧಿಮಾಂಧ್ಯ ಮಕ್ಕಳೊಡನೆ ಹಾಡಿ ನಲಿದು ಕಾಲ ಕಳೆದೆ. ಮಗಳು ಚಾರಿತ್ರ್ಯ ಜೊತೆಯಲ್ಲಿ ಕೇಕ್ ಕತ್ತರಿಸಿ, ಮಕ್ಕಳಿಗೆ ಹಂಚಿದ್ದು ಸಂತೋಷದ ಕ್ಷಣ ಎಂದರು.

  ಮುಂದಿನ ಯೋಜನೆಗಳು: ಆರಂಭದಲ್ಲಿ ಹೇಳಿದಂತೆ, ಶಿಲ್ಪಾ ನಿರ್ಮಾಪಕಿಯಾಗಿ ಯಶಸ್ವಿಯಾಗಿದ್ದಾಳೆ. ಮುಂದೆ ನಿರ್ದೇಶನಕ್ಕಿಳಿಯುವ ಸಾಧ್ಯತೆಯೂ ಇದ್ದು, ಗೋಲ್ಡನ್ ಸ್ಟಾರ್ ಬ್ಯಾನರ್ ಮೂಲಕ ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.

  ಈ ತಿಂಗಳ ಅಂತ್ಯಕ್ಕೆ ಕೂಲ್-ಸಕತ್ ಹಾಟ್ ಮಗಾ ಚಿತ್ರ ಸೆಟ್ಟೇರಲಿದೆ. ಏನೋ ಒಂಥರಾ ರೆಡಿಯಾಗಿದೆ. ಮದುವೆ ಮನೆ ಯಾಕೋ ಕುಂಟುತ್ತಾ ಸಾಗಿದೆ. ವರ್ಷಕ್ಕೊಂದು ಯಶಸ್ವಿ ಚಿತ್ರಗಳನ್ನು ನೀಡುತ್ತಿರುವ ಗಣೇಶ್ ಗೆ ಬೇಡಿಕೆ ಏನು ಕಮ್ಮಿಯಾಗಿಲ್ಲ. ಸಂಗಮ ಚಿತ್ರದ ಸೋಲು ಮರೆತರೆ ನಾಯಕರಾಗಿ ಶೇ. 90ರಷ್ಟು ಚಿತ್ರಗಳಲ್ಲಿ ಯಶಸ್ಸು ಕಂಡಿದ್ದಾರೆ. ಚಿತ್ರ ನಿರ್ಮಾಣಕ್ಕೂ ಕೈ ಹಾಕಿ ಸೈ ಎನಿಸಿಕೊಂಡಿದ್ದು, ಗೆಲುವಿನ ನಗೆ ಮುಂದುವರೆಸಿದ್ದಾರೆ.

  English summary
  Golden Star Ganesh celebrated his 33rd birthday today. He spent happy time with family members and blind children in Rajarajeshwari Nagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X