»   »  ಚಿತ್ರೋದ್ಯಮದಲ್ಲಿ ರು.15 ಕೋಟಿ ಹರಿಸಿದ ಮಂಜು!

ಚಿತ್ರೋದ್ಯಮದಲ್ಲಿ ರು.15 ಕೋಟಿ ಹರಿಸಿದ ಮಂಜು!

Subscribe to Filmibeat Kannada
Kannada film producer K Manju
ಆರ್ಥಿಕ ಹಿಂಜರಿತದ ಕಾರಣ ಕನ್ನಡ ಚಿತ್ರೋದ್ಯಮದ ನಿರ್ಮಾಣ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ. ಆದರೆ ಕೊಬ್ಬರಿ ಮಂಜು ರೀತಿಯ ನಿರ್ಮಾಪಕರಿಗೆ ಇದರ ಬಿಸಿ ಎಳ್ಳಷ್ಟೂ ತಟ್ಟಿಲ್ಲ. ಪ್ರಸ್ತುತ ಅವರ ಈಗ ಅರ್ಧ ಡಜನ್ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ನಾಗತಿಹಳ್ಳಿಯ ಒಲವೇ ಜೀವನ ಲೆಕ್ಕಾಚಾರ, ಯೋಗೀಶ್ ರ ಯೋಗಿ, ವಿಷ್ಣುವರ್ಧನ್ ಅವರ ಬಳ್ಳಾರಿ ನಾಗ, ಗುರುದತ್ ಅವರ ಕಿಚ್ಚ ಹುಚ್ಚ, ವಿಜಯ್ ನಾಯಕ ನಟನಾಗಿ ಎಂ ಎಸ್ ರಮೇಶ್ ನಿರ್ದೇಶನದ ಚಿತ್ರ ಹಾಗೂ ಶಿವಣ್ಣ ಅವರೊಂದಿಗಿನ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಇಷ್ಟು ಚಿತ್ರಗಳಿಗೆ ಸರಿ ಸುಮಾರು ರು.15 ಕೋಟಿ ಬಂಡವಾಳ ತೊಡಗಿಸಿದ್ದಾರೆ ಮಂಜು.

ಈ ಬಗ್ಗೆ ಕೇಳಿದರೆ, ಮನರಂಜನೆಯನ್ನೇ ಗುರಿಯಾಗಿಸಿಕೊಂಡು ಚಿತ್ರ ನಿರ್ಮಿಸುತ್ತಿರುವುದರಿಂದ ನನಗೇನು ಅಷ್ಟು ಸಮಸ್ಯೆಯಾಗದು ಎನ್ನುತ್ತಾರೆ ಮಂಜಣ್ಣ. ಚಿತ್ರ ನಿರ್ಮಾಣದ ಜತೆಗೆ ಖಳ ನಟನ ಪಾತ್ರವನ್ನು ಮಂಜು ಪೋಷಿಸುತ್ತಿದ್ದಾರೆ. ರಮ್ಯ, ಸುದೀಪ್ ನಟನೆಯ ಕಿಚ್ಚ ಹುಚ್ಚ ಚಿತ್ರದಲ್ಲಿ ಖಳ ನಟನಾಗಿ ಬಣ್ಣಹಚ್ಚಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಿರ್ಮಾಪಕ ಕೆ.ಮಂಜು ಹೇಳಿದ ಲಾಸು ಕಥೆ
ಇದು ಮೂರನೆ ದರ್ಜೆ ಪ್ರಶಸ್ತಿ: ಚಂದ್ರು ಮಂಜು
ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!
ಮೀಟ್ ದಿ ಪ್ರೆಸ್‌ನಲ್ಲಿ ಕಥೆಗಾರ ಮಂಜಣ್ಣ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada