For Quick Alerts
  ALLOW NOTIFICATIONS  
  For Daily Alerts

  ರಾಖಿ ಸಾವಂತ್ ಅಂಗಸೌಷ್ಟವಕ್ಕೆ ಹೋಲ್ಸೇಲ್ ವಿಮೆ

  |

  ಈಕೆಗೆ ಇದೊಂದು ಬಾಕಿ ಇತ್ತು ಅನ್ಕೊಂಡ್ರಾ? ಎಲ್ಲೇ ಹೋಗ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿ ಪಡ್ಡೆಗಳ ನಿದ್ದೆ ಕದ್ದು ಮತ್ತು ಕನಸುಗಳನ್ನು ಕೆಡಿಸಿರುವ ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ತನ್ನ ಅದ್ಭುತ ಅಂಗಸೌಷ್ಟವಕ್ಕೆ ವಿಮೆ ಮಾಡಿಸಿಕೊಳ್ಳುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾಳೆ.

  ಹಾಲಿವುಡ್ ನಟಿಯರು ತಮ್ಮ ತಮ್ಮ ಮೈಮಾಟಕ್ಕೆ ವಿಮೆ ಮಾಡಿಸಿಕೊಳ್ಳುತ್ತಾರೆ ನಾನು ಯಾಕೆ ಮಾಡಿಕೊಳ್ಳಬಾರದು ಎನ್ನುವುದು ಈಕೆಯ ಪ್ರಶ್ನೆ. ತನ್ನ ಜೀವಕ್ಕೆ 'ಜೀವವಿಮೆ' ಮಾಡಿಸಿ ಕೊಂಡಿರುವ ರಾಖಿ, ತನ್ನ ಮುಖಕ್ಕೆ ಮತ್ತು ದೇಹದ ಇತರ ಉಬ್ಬುತಗ್ಗುಗಳಿಗೆ ವಿಮೆ ಮಾಡಿಸಿ ಕೊಳ್ಳಲು ತೀರ್ಮಾನಿಸಿದ್ದಾಳೆ ಕುಂಭ ರಾಶಿಯ ರಾಖಿ.

  "ನನ್ನ ಸುಂದರ ಮುಖ, ಕೇಶರಾಶಿ ಮತ್ತು ಇತರ ಅಂಗಾಂಗಗಳೇ ನನ್ನನ್ನು ಇಷ್ಟು ಗ್ಲಾಮರಸ್ ಕ್ವೀನ್ ಆಗಿಸಿದ್ದು. ಇದೇ ನನಗೆ ದೈನಂದಿನ ರೋಟಿ. ಅದಕ್ಕಾಗಿ ದೇಹವಿಮೆ ಮಾಡಿಸುತ್ತಿದ್ದೇನೆ" ಎಂದು ಯಾವುದೇ ಹಮ್ಮುಬಿಮ್ಮು ಇಲ್ಲದೆ ಬಿಚ್ಚುನುಡಿಗಳನ್ನಾಡಿದ್ದಾಳೆ ರಾಖಿ. ರಾಖಿಕಾ ಸ್ವಯಂವರ, ಗಜಬ್ ದೇಶ್ ಕಿ ಅಜಬ್ ಕಹಾನಿಯಾ.. ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ರಸಿಕ ಶಿಖಾಮಣಿಗಳ ಪಾಲಿಗೆ ಡ್ರೀಮ್ ಐಟಂ ಗರ್ಲ್ ಆಗಿರುವ ರಾಖಿ ಸಾವಂತ್ ಏನು ಮಾಡಿದರೂ ಸುದ್ದಿನೇ.

  ಭಾರತದಲ್ಲಿ 'ಸಿ' ಸ್ಟ್ರಿಂಗ್ ಬಿಕಿನಿಯನ್ನು ಇಂಟ್ರೊಡ್ಯೂಸ್ ಮಾಡಿದ್ದೇ ನಾನು ಎಂದು ಬೋಲ್ಡಾಗಿ ಹೇಳಿದ್ದ ರಾಖಿಗೆ ಭಾರತೀಯ ಜೀವ ವಿಮಾ ಕಂಪನಿಗಳ ಮೇಲೆ ಯಾಕೆ ವಿಶ್ವಾಸ ಇಲ್ಲವೋ ತಿಳಿಯದು. ದೇಹವಿಮೆಗೆ ವಿದೇಶಿ ಜೀವ ವಿಮಾ ಕಂಪನಿಗಳ ಮೊರೆ ಹೋಗಲು ರಾಖಿ ನಿರ್ಧರಿಸಿದ್ದಾಳೆ. ನಮ್ಮ ದೇಶದ ವಿಮಾ ಕಂಪನಿಗಳು ಈಕೆಯ ನೆರವಿಗೆ ಬರತ್ತವೆ ಎನ್ನುವ ನಂಬಿಕೆ ಈಕೆಗೆ ಇದ್ದಂತಿಲ್ಲ.

  ಅಂದ ಹಾಗೆ, ದೇಹದ ಯಾವ ಭಾಗಕ್ಕೆ ಎಷ್ಟು ವಿಮೆ? ಎಂಥ ಕಂಪನಿ ಈ ರಿಸ್ಕ್ ತೆಗೆದುಕೊಂಡಿದೆ. ಬಲ್ಲವರಿದ್ದರೆ ಬರೆದು ತಿಳಿಸಬಹುದು.

  English summary
  Bollywood actress, item girl Rakhi Sawant has decided to insure some parts of her body. The bold and beautiful actress does not hesitate to admit that curvacious parts are her big assets including face and boobs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X