For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ರಿಯಲ್ ಸ್ಟಾರ್ ಅಲ್ಲ ಕರ್ನಾಟಕದ ಅಧಿಪತಿ

  By Rajendra
  |

  ಉಪೇಂದ್ರ ಇನ್ನು ಮುಂದೆ ರಿಯಲ್ ಸ್ಟಾರ್ ಅಲ್ಲ! ಅವರು ಇನ್ನೇನಿದ್ದರೂ ಕರ್ನಾಟಕದ ಅಧಿಪತಿ. ಹೌದು ಹಾಗಂತ ಅವರಿಗೆ ಹೊಸ ಬಿರುದನ್ನು ಪ್ರಸಾದಿಸಿದ್ದಾರೆ ಉಪೇಂದ್ರ ಅಭಿಮಾನಿಗಳ ಸಂಘ. ಅವರ ಅಭಿನಯದ ಸೂಪರ್ ಚಿತ್ರದ 125 ದಿನಗಳ ಸಂಭ್ರಮದಲ್ಲಿ ಉಪ್ಪಿ ಅಭಿಮಾನಿಗಳ ಸಂಘ ಈ ಹೊಸ ಬಿರುದನ್ನು ನೀಡಿ ಗೌರವಿಸಿದೆ.

  ತಮ್ಮ ನೆಚ್ಚಿನ ನಾಯಕ ನಟನಿಗೆ ಅಭಿಮಾನಿಗಳು ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದಿಸುವ ಮೂಲಕ ಕರ್ನಾಟಕದ ಅಧಿಪತಿ ಬಿರುದು ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಉಪೇಂದ್ರ ಅವರ ತಂದೆ ಮಂಜುನಾಥ್, ತಾಯಿ ಅನಸೂಯ ಹಾಗೂ ಪತ್ನಿ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.

  ದಕ್ಷಿಣ ಭಾರತದ ಜನಪ್ರಿಯ ನಟ,ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಅವರು ಉಪೇಂದ್ರ ಅವರಿಗೆ ಸ್ಮರಣ ಸಂಚಿಕೆಯನ್ನು ನೀಡಿದರು. ಸೂಪರ್ ಚಿತ್ರದಲ್ಲಿ ಅಭಿನಯಿಸಿದ್ದ ನಯನತಾರಾ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಮಾನ್ಯವಾಗಿ ಸಿನಿಮಾ ತಾರೆಗಳಿಗೆ ನೀಡುವ ಬಿರುದು ಬಾವಲಿಗಳು ಇಂಗ್ಲಿಷ್‌ನಲ್ಲೇ ಇರುತ್ತವೆ. ಆದರೆ ಈಗ ಉಪೇಂದ್ರ ಅವರಿಗೆ ನೀಡಿರುವ ಬಿರುದು ಮಾತ್ರ ಕನ್ನಡದಲ್ಲೇ ಇರುವುದು ವಿಶೇಷ.

  English summary
  Kannada actor Upendra is popularly known as Real Star of Sandalwood. But his have honored him with another title as Karnatakada Adhipathi at the function of 125 days celebration of Super. Meanwhile, they have also honored Upendra's father Manjunath, mother Anasuya and wife Priyanaka on the occasion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X