For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಚಿಂಗಾರಿ' ಮೊದಲ ದಿನ ಟಿಕೆಟ್ ಸೋಲ್ಡ್ ಔಟ್

  By Mahesh
  |

  ಸಾರಥಿ ಯಶಸ್ಸನ್ನು ಹೆಗಲ ಮೇಲೆ ಹೊತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿಂಗಾರಿ ಚಿತ್ರಕ್ಕೆ ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ಸಿಗದ ಅಭಿಮಾನಿಗಳು ನಿರಾಶೆಯಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರಿನ ಅಪರ್ಣ ಚಿತ್ರಮಂದಿರದ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿರುವ ಅಭಿಮಾನಿಗಳು ಮಾರ್ನಿಂಗ್ ಶೋ ಟಿಕೆಟ್ ಸಿಗದೆ ಪರದಾಡುತ್ತಿದ್ದರು. ಆದರೆ, ಬರೀ ಇದು ಮಾರ್ನಿಂಗ್ ಶೋ ಕಥೆ ಮಾತ್ರವಲ್ಲ. ಮೊದಲ ದಿನದ ಪೂರ್ತಿ ಟಿಕೆಟ್ ಸೋಲ್ಡ್ ಔಟ್ ಎಂದು ತಿಳಿದಾಗ ಅಭಿಮಾನಿಗಳು 'ಟಿಕೇಟ್ ಬೇಕು, ದರ್ಶನ್ ನೋಡ್ಬೇಕು' ಎಂದು ಕೂಗುತ್ತಾ ಥೇಟರ್ ಕಡೆಗೆ ಮುನ್ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪೊಲೀಸರು, ಮುಂದಿನ ಶೋ ಟಿಕೇಟ್ ಕೊಡಿಸುವ ಭರವಸೆ ನೀಡಿದ್ದಾರೆ.

  ತುಮಕೂರಿನ ಗಾಯಿತ್ರಿ ಚಿತ್ರಮಂದಿರದ ಕಥೆಯೂ ಇದಕ್ಕಿಂತ ಹೊರತಾಗಿಲ್ಲ. ಥೇಟರ್ ಮಾಲೀಕರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಜಟಾಪಟಿ ನಡೆದಿದೆ. ರಾಜ್ಯದ ನೂರಕ್ಕೂ ಅಧಿಕ ಚಿತ್ರಮಂದಿರಗಳ ಮುಂದೆ ಇದೇ ಪರಿಸ್ಥಿತಿ ಮುಂದುವರೆದಿದ್ದು, ಬಿರುಗಾಳಿ ಹರ್ಷ ನಿರ್ದೇಶನದ ಚಿಂಗಾರಿ ಹೊಸ ದಾಖಲೆ ಬರೆಯುವ ಲಕ್ಷಣಗಳು ಕಂಡು ಬಂದಿದೆ. ದರ್ಶನ್ ಮತ್ತೊಮ್ಮೆ ಬಾಕ್ಸಾಫೀಸ್ ಸುಲ್ತಾನ್ ಎನಿಸುವ ದಿನ ದೂರವಿಲ್ಲ ಎಂದು ಅಭಿಮಾನಿಗಳ ಉತ್ಸಾಹ ನೋಡಿದರೆ ಹೇಳಬಹುದು.

  ಚಿಂಗಾರಿ ಚಿತ್ರದ 'ಚಿತ್ರವಿಮರ್ಶೆ' ಮಧ್ಯಾಹ್ನದ ನಂತರ ನಿರೀಕ್ಷಿಸಿ..

  English summary
  Challenging Star Darshan movie Chingari Released today with bang. Chingari getting huge response from all over Karnataka as first day tickets are sold out already. Darshan fans demanding for film tickets in Aparna, Bangalore and Gayathri theater in Tumkur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X