»   » ಹೆಲಿಕಾಫ್ಟರ್ ನಲ್ಲಿ ಜಗ್ಗೇಶ್ 'ಲಿಫ್ಟ್ ಕೋಡ್ಲಾ'

ಹೆಲಿಕಾಫ್ಟರ್ ನಲ್ಲಿ ಜಗ್ಗೇಶ್ 'ಲಿಫ್ಟ್ ಕೋಡ್ಲಾ'

Subscribe to Filmibeat Kannada

ಒಂದು ತಂಡದ ನಾಯಕ ಹಾಗೂ ಆತನ ಸಹಚರರು ಸಾಯುವುದಕ್ಕಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೊರಟಿದ್ದಾರೆ ಎಂಬ ಅನುಮಾನ ಪೊಲೀಸ್‌ನವರಿಗೆ. ಈ ತಂಡದ ಸದಸ್ಯರನ್ನು ಪತ್ತೆ ಮಾಡಿ ಅವರನ್ನು ಪಾರು ಮಾಡಲು ವಿಶೇಷ ಅಧಿಕಾರಿಯ ನೇಮಕ ಆಗುತ್ತದೆ. ರಸ್ತೆಮಾರ್ಗ ಬಳಸಿ ಎಷ್ಟು ಹುಡಕಿದ್ದರೂ ಸಿಕ್ಕದ ಈ ತಂಡದವರ ಅನ್ವೇಷಣೆಗಾಗಿ ವಿಶೇಷ ಅಧಿಕಾರಿ ಹೆಲಿಕಾಪ್ಟರ್ ಬಳಸುತ್ತಾರೆ.

ಚಿಕ್ಕಮಗಳೂರಿನ ಬೆಟ್ಟ, ಕಾಡುಗಳನ್ನು ಸುತ್ತು ಹಾಕುತ್ತಾರೆ. ಈ ಸನ್ನಿವೇಶವನ್ನು 'ಲಿಫ್ಟ್ ಕೊಡ್ಲಾ' ಚಿತ್ರಕ್ಕಾಗಿ ನಿರ್ದೇಶಕ ಅಶೋಕ್ ಕಶ್ಯಪ್ ಚಿತ್ರೀಕರಿಸಿಕೊಂಡರು. ನಾಯಕನ ಪಾತ್ರದಲ್ಲಿ ಜಗ್ಗೇಶ್ ಹಾಗೂ ವಿಶೇಷ ಅಧಿಕಾರಿಯ ಪಾತ್ರದಲ್ಲಿ ಶಶಿಕುಮಾರ್ ಅಭಿನಯಿಸಿದ್ದರು. ಸಿಎಂಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಶೋಕ್‌ಕಶ್ಯಪ್ ಅವರ ಛಾಯಾಗ್ರಹಣವಿದೆ.

ವಿ.ಮನೋಹರ್ ಸಂಗೀತ, ರಾಂನಾರಾಯಣ್ ಸಂಭಾಷಣೆ ಬರೆದಿರುವ ಚಿತ್ರದ ತಾರಾಬಳಗದಲ್ಲಿ ಜಗ್ಗೇಶ್, ಕೋಮಲ್, ಶಶಿಕುಮಾರ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada