For Quick Alerts
  ALLOW NOTIFICATIONS  
  For Daily Alerts

  ಅಂಬಾರಿ ಯೋಗೀಶ್, ಮೊಗ್ಗಿನ ಮನಸು ರಾಧಿಕಾ ಶ್ರೇಷ್ಠ

  By Mahesh
  |

  2008 ಹಾಗೂ 2009ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ನಿರ್ದೇಶಕ ಭಾರ್ಗವ ಇಂದು ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದರು. ಅಂಬಾರಿ ಚಿತ್ರದ ಅಭಿನಯಕ್ಕಾಗಿ ಲೂಸ್ ಮಾದ ಯೋಗೀಶ್ ಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ. ಫಿಲ್ಮ್ ಫೇರ್ ಗಳಿಸಿ ಮುಖವರಳಿಸಿದ್ದ ರಾಧಿಕಾ ಪಂಡಿತ್ ಮತ್ತೆ ಮೊಗ್ಗಿನ ಮನಸು ಮೂಲಕ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಪ್ರತಿಷ್ಠಿತ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಬಿ ಸರೋಜಾದೇವಿ ಆಯ್ಕೆಯಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಗಿರೀಶ್ ಕಾರ್ನಾಡ್ ಅವರನ್ನು ಆರಿಸಿರುವುದಾಗಿ ಭಾರ್ಗವ ಘೋಷಿಸಿದರು. (ಪ್ರಶಸ್ತಿ ಪಟ್ಟಿಯಲ್ಲಿ ಕೆಎಸ್ ಆರ್ ದಾಸ್ ಅವರ ಹೆಸರು ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು) ಪ್ರಶಸ್ತಿ ಪಡೆದವರ ಪೂರ್ಣ ವಿವರ ಇಲ್ಲಿದೆ:

  ಪ್ರಶಸ್ತಿ ಹೆಸರು ಪ್ರಶಸ್ತಿ ಪಡೆದವರು ಪ್ರಶಸ್ತಿ ಮೊತ್ತ
  ಡಾ. ರಾಜ್ ಕುಮಾರ್ ಪ್ರಶಸ್ತಿ ಡಾ. ಬಿ. ಸರೋಜಾದೇವಿ 2,00,000 ರು ಹಾಗೂ ಚಿನ್ನದ ಪದಕ
  ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಗಿರೀಶ್ ಕಾರ್ನಾಡ್ 2,00,000 ರು ಹಾಗೂ ಚಿನ್ನದ ಪದಕ
  ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಅಜಂತಾ ರಾಜ್ ಹಾಗು ಆರ್ ಎನ್ ಕೆ ಪ್ರಸಾದ್ 2,00,000 ರು ಹಾಗೂ ಚಿನ್ನದ ಪದಕ
  ಮೊದಲ ಶ್ರೇಷ್ಠ ಚಿತ್ರ ಕಬಡ್ಡಿ, ನಿರ್ಮಾಪಕರು : ಆಶಾ ಹಾಗು ಕಿಶೋರ್,

  ನಿರ್ದೇಶಕ: ನರೇಂದ್ರ ಬಾಬು

  1 ಲಕ್ಷ ರು ಹಾಗೂ 50 ಗ್ರಾಂ ಚಿನ್ನದ ಪದಕ ಎರಡನೇ ಶ್ರೇಷ್ಠ ಚಿತ್ರ ಜೋಶ್, ಎಸ್ ವಿ ಬಾಬು ನಿರ್ಮಾಪಕ, ಶಿವಮಣಿ ನಿರ್ದೇಶಕ 75 ಸಾವಿರ ಹಾಗೂ 100ಗ್ರಾಂ ಬೆಳ್ಳಿ ಪದಕ ಮೂರನೆ ಶ್ರೇಷ್ಠ ಚಿತ್ರ ಶಂಕರ ಪುಣ್ಯಕೋಟಿ, ಅಮರನಾಥ್, ಶ್ರೀನಿವಾಸ್ ಎಸ್, ಜಿ ಮೂರ್ತಿ 50 ಸಾವಿರ ಹಾಗೂ 100ಗ್ರಾಂ ಬೆಳ್ಳಿ ಪದಕ ಸಾಮಾಜಿಕ ಕಳಕಳಿ ಚಿತ್ರ ಮುಖಪುಟ, ನಿರ್ಮಾಣ ಹಾಗೂ ನಿರ್ದೇಶನ ರೂಪ ಅಯ್ಯರ್ 75 ಸಾವಿರ ರು ಹಾಗೂ 100 ಗ್ರಾಂ ಬೆಳ್ಳಿ ಪದಕ ಪ್ರಾದೇಶಿಕ ಚಿತ್ರ ಪೊನ್ನದ ಮನದು(ಕೊಡವ) ಹಾಗೂ ಸೊನಾ(ಲಂಬಾಣಿ) 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಮಕ್ಕಳ ಚಿತ್ರ ಚೈತನ್ಯ, ನಿರ್ದೇಶಕ ಶಿವರಾಮ್ ಕ್ರೈಸ್ಟ್ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಸುಬ್ಬಯ್ಯ ನಾಯ್ಡು ಪ್ರಶಸ್ತಿ ಶ್ರೇಷ್ಠ ನಟ ಯೋಗೀಶ್, ಅಂಬಾರಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ನಟಿ ರಾಧಿಕಾ ಪಂಡಿತ್, ಮೊಗ್ಗಿನ ಮನಸು 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಪೋಷಕ ನಟ ಎಂಕೆ ಮಠ, ಗಗ್ಗರ ಚಿತ್ರ 10,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಪೋಷಕ ನಟಿ ಲಕ್ಷ್ಮಿ, ವಂಶಿ ಚಿತ್ರ 10,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಡಬ್ಬಿಂಗ್ ಕಲಾವಿದ ರವೀಂದ್ರನಾಥ್, ಅಂತರಗಂಗೆ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಡಬ್ಬಿಂಗ್ ಕಲಾವಿದೆ ಆಶಾ, ಶಂಕರ ಪುಣ್ಯಕೋಟಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಕಥೆಗಾರ ಬರಗೂರು ರಾಮಚಂದ್ರಪ್ಪ, ಉಗ್ರಗಾಮಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಚಿತ್ರಕಥೆ ಸೂರಿ, ಜಂಗ್ಲಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಸಂಭಾಷಣೆಗಾರ ಹೂ ಪಟ್ಟಣಶೆಟ್ಟಿ, ನರೇಂದ್ರಬಾಬು, ಕಬಡ್ಡಿ ಚಿತ್ರ 10,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಛಾಯಾಗ್ರಾಹಕ ಕೆಎಂ ವಿಷ್ಣುವರ್ಧನ್, ನೀನ್ಯಾರೇ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಸಂಗೀತ ನಿರ್ದೇಶಕ ಆಭಿಮಾನ್, ತಾಜ್ ಮಹಲ್ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಧ್ವನಿಗ್ರಹಣ ಸೈಕೊ ಚಿತ್ರ ತಂಡ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಸಂಕಲನ ದೀಪು ಎಸ್ ಕುಮಾರ್, ಜಂಗ್ಲಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಕಲೆ ಕೆ ರಾಜು, ನೀನ್ಯಾರೇ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಬಾಲ ಕಲಾವಿದ ಮಾಸ್ಟರ್ ಮನೋಜ್, ನಂದಾದೀಪ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಬಾಲ ಕಲಾವಿದೆ ಸನಿಯ ಅಯ್ಯರ್, ವಿಮುಕ್ತಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಸಾಹಿತ್ಯ ಕೆ ರಾಜು, ನೀನ್ಯಾರೇ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಹಿನ್ನೆಲೆ ಗಾಯಕ ಚೇತನ್, ಅಂಬಾರಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ಶ್ರೇಷ್ಠ ಹಿನ್ನೆಲೆ ಗಾಯಕಿ ನಂದಿತಾ, ಮಂದಾಕಿನಿ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ ವಿಶೇಷ ಜ್ಯೂರಿ ಪ್ರಶಸ್ತಿ ರವಿವರ್ಮ, ಸ್ಟಂಟ್ ಮಾಸ್ಟರ್ ಚಿತ್ರ 20,000 ರು ಹಾಗೂ 100ಗ್ರಾಂ ಬೆಳ್ಳಿ ಪದಕ
  English summary
  Karnataka State Film Awards 2008-2009 have been announced. Yogish has been selected as the best actor for his role in Ambaari and Radhika Pandit is the best actress for Moggina Manasu. B Sarojadevi bags prestigious Dr Rajkumar Award. Narendra Babu directed Kabaddi as been selected as First best film followed by Josh and Shankara Punyakoti.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X