»   »  ಹೋರಿಯಾಗಿ ಟೈಗರ್ ಪ್ರಭಾಕರ್ ಮಗ ವಿನೋದ್!

ಹೋರಿಯಾಗಿ ಟೈಗರ್ ಪ್ರಭಾಕರ್ ಮಗ ವಿನೋದ್!

Subscribe to Filmibeat Kannada

ಟೈಗರ್ ಪ್ರಭಾಕರ್ ಅವರ ಜೊತೆ ಹಲವಾರು ಚಿತ್ರಗಳಿಗೆ ಕೆಲಸ ಮಾಡಿದಂತಹ ನಾಗೇಂದ್ರ ಮಾಗಡಿ (ಪಾಂಡು) ಸಾಹಸ ನಿರ್ದೇಶಕನಾಗಲು ಚಿತ್ರರಂಗಕ್ಕೆ ಬಂದವರು. ಆದರೆ, ಚಿತ್ರನಿರ್ದೇಶಕರಾಗಿ ಗೆಲುವು ಸಾಧಿಸಿದರು. ಟಾಟಾ ಬಿರ್ಲಾ, ಹನಿಮೂನ್ ಎಕ್ಸ್‌ಪ್ರೆಸ್‌ನಂತಹ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ ಪಾಂಡು ಈಗ ಆಕ್ಷನ್-ಕಾಮಿಡಿ ವಿಷಯದ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ.

'ಹೋರಿ' ಹೆಸರಿನ ಈ ಚಿತ್ರದಲ್ಲಿ ಪಾಂಡು ಅವರ ಗುರು ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಂದಿನಿ ಲೇ ಔಟ್‌ನಲ್ಲಿರುವ ರೇಣುಕುಮಾರ್‌ಅವರ ರೇಣು (ಅಣ್ಣಾ) ಸ್ಟುಡಿಯೋದಲ್ಲಿ ಈ ಚಿತ್ರದ ಆರು ಹಾಡುಗಳನ್ನು ಕಳೆದ ಯುಗಾದಿ ಹಬ್ಬದಂದು ಧ್ವನಿಮುದ್ರಿಸಿಕೊಳ್ಳಲಾಯಿತು. ರೇಣು ವಾದ್ಯವೃಂದದ ಮೂಲಕ ರಾಜ್ಯಾದ್ಯಂತ ಹೆಸರಾದ ರೇಣುಕುಮಾರ್ ಎಸ್.ನಾರಾಯಣ್ ಅವರ ಜೊತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದವರು. ಸಂಗೀತದ ಮೂಲಕ ನವರಸಗಳನ್ನು ತುಂಬುವ ಮಹದಾಸೆಯಿಂದ ಈ ಚಿತ್ರದ ಸಂಗೀತ ಸಂಯೋಜನೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಎಂ.ಆರ್. ಸೀನು ಅವರ ಛಾಯಾಗ್ರಹಣ, ಕೆ. ರಾಮನಾರಾಯಣ್ ಅವರ ಸಾಹಿತ್ಯ, ರವಿವರ್ಮರ ಸಾಹಸ ಸಂಯೋಜನೆ ಈ ಚಿತ್ರಕ್ಕಿದ್ದು, ಬಹಳ ದಿನಗಳಿಂದ ಒಂದು ಸದಭಿರುಚಿಯ ಚಿತ್ರ ನಿರ್ಮಿಸುವ ಆಸೆ ಹೊತ್ತಿದ್ದ ಲಿಂಗೇಗೌಡರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗೇಂದ್ರ ಮಾಗಡಿ ಅವರ ಚಿತ್ರಕಥೆ ಹಾಗೂ ನಿರ್ದೇಶನ ಇದ್ದು, ಏಪ್ರಿಲ್ ಮೊದಲ ವಾರ ಪ್ರಾರಂಭಿಸಿ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಿದ್ದಾರೆ. ನಮ್ಮ ಬಸವ, ಗಂಡನ ಮನೆ ಖ್ಯಾತಿಯ ಗೌರಿ ಮಂಜಾಲ್ ಈ ಚಿತ್ರದ ನಾಯಕಿಯಾಗಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
ಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?
ಅನಂತ್ ಪರ ನಟಿ ತಾರಾ ಖಡಕ್ ಪ್ರಚಾರ!
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್
ಶಂಕರನಾಗ್ ಚಿತ್ರಮಂದಿರಕ್ಕೆ ಮರುಹುಟ್ಟು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada