For Quick Alerts
  ALLOW NOTIFICATIONS  
  For Daily Alerts

  ಸಮೀರಾ ರೆಡ್ಡಿ ಕನ್ನಡ ಕೇಳಲು ಸ್ವಲ್ಪ ದಿನ ತಾಳಿ!

  |

  ಬಾಲಿವುಡ್ ನಲ್ಲಿಯೂ ಮಿಂಚುತ್ತಿರುವ ನಟಿ ಸಮೀರಾ ರೆಡ್ಡಿ ದಕ್ಷಿಣ ಭಾರತ ಮೂಲದವರು ಎಂಬುದು ಎಲ್ಲರಿಗೂ ಗೊತ್ತು. ಅವರ ತಾಯಿ ನಕ್ಷತ್ರ ಕರ್ನಾಟಕದ ಮಡಿಕೇರಿಯವರು, ಕೊಂಕಣಿ ಮಾತನಾಡುವ ಕನ್ನಡತಿ. ಆಕೆ ತಂದೆ ಆಂಧ್ರದವರಾದ್ದರಿಂದ ಸಮೀರಾ ತೆಲುಗಿನ ಹುಡುಗಿ. ಆದರೆ ಬಾಲಿವುಡ್ ನಲ್ಲಿ ಕೆರಿಯರ್ ಪ್ರಾರಂಭಿಸಿ ಸೌತ್ ಇಂಡಿಯಾದಲ್ಲಿ ಪ್ರಸಿದ್ಧರಾದವರು ಸಮೀರಾ ರೆಡ್ಡಿ.

  ಇಂತಹ ಸಮೀರಾಗೆ ಈಗ ಕನ್ನಡ ಬಾಷೆಯ ಬಗ್ಗೆ ಅಭಿಮಾನ ಉಕ್ಕಿ ಬಂದಿದೆ. ಕಾರಣ ಅವರೀಗ ಕನ್ನಡ ಚಿತ್ರ ವರದನಾಯಕದಲ್ಲಿ ಸುದೀಪ್ ಸಂಗಾತಿಯಾಗಿ ನಟಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ಚಿತ್ರೀಕರಣದಲ್ಲಿರುವ ಸಮೀರಾ ತಮ್ಮ ತಾಯಿಯ ಮೂಲಕ ತಾವು ಕನ್ನಡ ಕಲಿಯುತ್ತೇನೆ ಎಂಬ ಸಂದೇಶ ನೀಡಿದ್ದಾರೆ. ಅವರಮ್ಮ ಅಪರೂಪಕ್ಕೆ ಮನೆಯಲ್ಲಿ ಕನ್ನಡ ಮಾತನಾಡುತ್ತಾರಂತೆ.

  "ನನ್ನ ತಾಯಿ ನಕ್ಷತ್ರ ಕನ್ನಡದವರು, ಮಡಿಕೇರಿಯವರು ಕೊಂಕಣಿ ಕನ್ನಡತಿ. ನಮ್ಮಮ್ಮನಿಗೆ ಕನ್ನಡ ಚೆನ್ನಾಗಿ ಗೊತ್ತು. ಆದರೆ ನನಗೆ ಮಾತ್ರ ಬರೋದಿಲ್ಲ. ಈಗ ಕಲಿಯುವ ಮನಸ್ಸಾಗಿದೆ. ಅಮ್ಮನಿಂದಲೇ ಕಲಿಯುತ್ತೇನೆ. ಹಾಗೆ ಸಾಧ್ಯವಾದಷ್ಟು ಬೇಗ ಕಲಿತು ಕನ್ನಡ ಮಾತನಾಡುತ್ತೇನೆ ಎಂದು ನನ್ನ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ" ಎಂದು ಇಂಗ್ಲೀಷಿನಲ್ಲೇ ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ ಸಮೀರಾ ರೆಡ್ಡಿ.

  ವರದ ನಾಯಕ ಚಿತ್ರದಲ್ಲಿ ಸಮೀರಾ ಸುದೀಪ್ ಪತ್ನಿಯ ಪಾತ್ರವನ್ನು ಮಾಡುತ್ತಿದ್ದಾರೆ. ಇದರಲ್ಲಿ ಚಿರಂಜೀವಿ ಸರ್ಜಾ ಮತ್ತು ನಿಕೇಶಾ ಪಟೇಲ್ ನಾಯಕ-ನಾಯಕಿ. ಈ ಚಿತ್ರದ ಹೊರತಾಗಿ ಬೇರೆ ಯಾವ ಕನ್ನಡ ಚಿತ್ರವನ್ನೂ ಸದ್ಯಕ್ಕೆ ಒಪ್ಪಿಕೊಂಡಿಲ್ಲ ಸಮೀರಾ. ಆದರೂ ಕನ್ನಡದ ಹಲವು ನಿರ್ಮಾಪಕರು ಸಂಪರ್ಕಿಸಿರುವುದನ್ನು ಸಮೀರಾ ದೃಢಪಡಿಸಿದ್ದಾರೆ. ಅಯ್ಯಪ್ಪ ಶರ್ಮಾ ನಿರ್ದೇಶನದ ವರದ ನಾಯಕ, ತೆಲುಗಿನ 'ಲಕ್ಷ್ಯಂ' ಚಿತ್ರದ ರಿಮೇಕ್. (ಒನ್ ಇಂಡಿಯಾ ಕನ್ನಡ)

  English summary
  Actress Sameera Reddy told that she |earns Kannada Language very soon, Now, she is acting with sudeep in Kannada Movie Varadanayaka. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X