»   » ಮಾಲಾಶ್ರೀ ಮನೆ ಹಾದಿ ಹಿಡಿದ ನಟಿ ರಾಗಿಣಿ ದ್ವಿವೇದಿ

ಮಾಲಾಶ್ರೀ ಮನೆ ಹಾದಿ ಹಿಡಿದ ನಟಿ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada
<ul id="pagination-digg"><li class="next"><a href="/news/04-actress-ragini-dwivedi-action-tips-malashri-aid0172.html">Next »</a></li></ul>

ಕನ್ನಡದಲ್ಲಿ ಅದೆಷ್ಟೋ ನಾಯಕಿಯರು ಬಂದು ಹೋಗಿದ್ದಾರೆ, ಈಗಲೂ ಇದ್ದಾರೆ. ಆದರೆ ಈ ಸ್ಯಾಂಡಲ್ ವುಡ್ ಗೆ ಒಬ್ಬರೇ ಆಕ್ಷನ್ ಕ್ವೀನ್, ಅದು ಮಾಲಾಶ್ರೀ. ಕೆಲವು ನಟಿಯರು ಪ್ರಯತ್ನಿಸುತ್ತಿದ್ದಾರಾದರೂ ಮಾಲಾಶ್ರೀ ಸಮೀಪಕ್ಕೂ ಹೋಗಲಾಗಲಿಲ್ಲ. ಹಾಗಾಗಿ ನಟಿ ರಾಗಿಣಿ ಸಮೇತ ಎಲ್ಲರೂ, ಮಾಲಾಶ್ರೀ ಕನ್ನಡದ 'ಒನ್ ಅಂಡ್ ಓನ್ಲೀ ಆಕ್ಷನ್ ಕ್ವೀನ್' ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.

ನಟಿ ರಾಗಿಣಿ ಸಹ ಇದನ್ನು ಒಪ್ಪಿಕೊಳ್ಳುವುದರ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸದ್ಯದಲ್ಲೇ ಆನಂದ್ ಪಿ ರಾಜು ನಿರ್ದೇಶನದ ಸಾಹಸ ಪ್ರಧಾನ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿರುವ ರಾಗಿಣಿ, ತಾನೂ ಅವರಂತೆ ಆಕ್ಷನ್ ಕ್ವೀನ್ ಆಗಲು ಹೊರಟಿದ್ದಾರೆ. ಅದಕ್ಕಾಗಿ ಆಕೆ ಸ್ವತಃ ಮಾಲಾಶ್ರೀಯವರಿಂದಲೇ 'ಟಿಪ್ಸ್' ಪಡೆಯಲು ನಿರ್ಧರಿಸಿದ್ದಾರೆ. ಅವರಿಂದ ಕಲಿಯುತ್ತೇನೆ, ಆದರೆ ಅನುಕರಣೆ ಮಾಡುವುದಿಲ್ಲ ಎಂದಿದ್ದಾರೆ ರಾಗಿಣಿ.

ಆನಂದ್ ಪಿ. ರಾಜು ನಿರ್ದೇಶನದ ಮುಂಬರುವ ಚಿತ್ರದಲ್ಲಿ ರಾಗಿಣಿಯೇ ಹೀರೋ, ಹೀರೋಯಿನ್ ಎಲ್ಲವೂ. ಇಷ್ಟು ದಿನವೂ ಗ್ಲಾಮರ್ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ರಾಗಿಣಿ, ಇದೀಗ ರಫ್ ಎಂಡ್ ಟಫ್ ಪಾತ್ರಕ್ಕೂ ಸೈ ಎಂದಿದ್ದಾರೆ. ಅದರಲ್ಲೂ ಹೇಳಿಕೇಳಿ ಪೊಲೀಸ್ ಅಧಿಕಾರಿ ಪಾತ್ರ. ಫುಲ್ ಫೈಟಿಂಗ್, ಆಕ್ಷನ್ ದೃಶ್ಯಗಳು ಚಿತ್ರದಲ್ಲಿದೆ. ಹಾಗಾಗಿ ರಾಗಿಣಿಗೆ ಖುಷಿಯ ಜತೆ ಆತಂಕವೂ ಇದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/04-actress-ragini-dwivedi-action-tips-malashri-aid0172.html">Next »</a></li></ul>

English summary
Actress Ragini Dwivedi became ready to take action queen Malashri's Tips for her upcoming action based movie.&#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X