»   » ಅಂಜಲಿಯ ಸೋದರನ ದುರಂತ ಸಾವು

ಅಂಜಲಿಯ ಸೋದರನ ದುರಂತ ಸಾವು

Posted By:
Subscribe to Filmibeat Kannada

ಅಜಗಜಾಂತರ, ತರ್ಲೆ ನನ್ಮಗ ಸೇರಿದಂತೆ 87ಕ್ಕೂ ಹೆಚ್ಚು ಚಿತ್ರಗಳಲ್ಲಿ ತನ್ನ ಗ್ಲಾಮರ್ ನಟನೆಯಿಂದ ಚಿತ್ರರಸಿಕರ ಮನತಣಿಸಿದ್ದ ನಟಿ ಅಂಜಲಿ ಅವರ ಸೋದರ ನಾಗರಾಜ್ ಇತ್ತೀಚೆಗೆ ದುರಂತ ಸಾವಿಗೀಡಾಗಿದ್ದಾರೆ.

ಮದುವೆ ಆದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಕರ್ನಾಟಕ ಮೂಲದ ಉದ್ಯಮಿ ಸುಧಾಕರ್ ಅವರನ್ನು ವರಿಸಿ ದುಬೈನಲ್ಲಿ ನೆಮ್ಮದಿಯ ನೆಲೆ ಕಂಡುಕೊಂಡಿದ್ದರು. ಕಳೆದ ವರ್ಷ ಅವರ ಸೋದರ ನಾಗರಾಜ್ ಕೂಡ ದುಬೈಗೆ ಹೋಗಿ ನೆಲೆಸಿದ್ದರು. ಆದರೆ, ಇತ್ತೀಚೆಗೆ ವಾರಾಂತ್ಯಾದ ವಿಹಾರಕ್ಕೆಂದು ಅಕ್ಕನ ಸಂಸಾರದೊಡನೆ ಹೋಟೆಲ್ ಹೋಗಿದ್ದಾಗ ಆಕಸ್ಮಿಕವಾಗಿ ನಾಗರಾಜ್ ಅವರ ಮೇಲೆ ದೊಡ್ಡ ಜಾಹೀರಾತು ಫಲಕ ಎರಗಿ ಸಾವಿಗೆ ಕಾರಣವಾಯಿತು.

ಸುಮಾರು 14 ತಿಂಗಳ ಹಿಂದೆ ದುಬೈ ಸೇರಿದ್ದ ನಾಗರಾಜ್ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಲಾಬ್ ಟೆಕ್ನಿಷನ್ ಆಗಿ ಕೆಲಸನಿರ್ವಹಿಸುತ್ತಿದ್ದರು. ಕಳೆದ ವಾರ ದುಬೈನ ಹೋಟೆಲೊಂದಕ್ಕೆ ಅಕ್ಕನ ಜೊತೆ ಹೋಗಿದ್ದಾಗ,ಹೋಟೆಲ್ ಮೇಲಿದ್ದ ಸುಮಾರು 45ಕೆಜಿ ತೂಕದ ದೊಡ್ಡ ವಿನೈಲ್ ಬೋರ್ಡ್ ಕೆಳಗುರುಳಿದೆ ಅಂಜಲಿ ಕೂದಳೆಲೆ ಅಂತರದಿಂದ ಪಾರಾಗಿದ್ದಾರೆ ಆದರೆ, ದುರದೃಷ್ಟಶಾಲಿ ನಾಗರಾಜ್ ಅವರ ತಲೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಅಕಾಲಿಕ ಮರಣಕ್ಕೀಡಾದ ತಮ್ಮನ ಅಂತಿಮ ಸಂಸ್ಕಾರವನ್ನು ಕರ್ನಾಟಕದಲ್ಲೇ ಮಾಡಲು ನಿರ್ಧರಿಸಿದ ಅಂಜಲಿ ಅವರ ಕುಟುಂಬ ಹರ ಸಾಹಸ ಪಟ್ಟು ನಾಗರಾಜ್ ಅವರ ಕಳೇಬರವನ್ನು ನಾಲ್ಕು ದಿನಗಳ ನಂತರ ಬೆಂಗಳೂರಿಗೆ ಕರೆತಂದರು. ಬುಧವಾರ ಹೆಬ್ಬಾಳದ ಚಿತಾಗಾರದಲ್ಲಿ ಅಂತಿಮ ಸಂಸ್ಕಾರವನ್ನು ಪೂರೈಸಲಾಯಿತು.ದುಬೈನಿಂದ ನಗರಕ್ಕೆ ಕಳೇಬರವನ್ನು ತರಲು ನಾಲ್ಕಾರು ದಿನ ಕಾದು,ಐದಾರು ಲಕ್ಷರು ಖರ್ಚು ಮಾಡಿ ತಮ್ಮನಿಗೆ ಅಂತಿಮ ವಿದಾಯ ಹೇಳಿದ್ದಾರೆ ಅಂಜಲಿ. ಗ್ಲಾಮರ್ ಬದುಕಿನ ಹಿಂದೆ ಅಗಾಧ ನೋವಿರುವುದು ಸಾಮಾನ್ಯ ಎಂಬ ಮಾತು ಸುಳ್ಳಲ್ಲ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada