ಒಂದು ಗಂಟೆಯೊಳಗೆ ರಮ್ಯಾ ದುಡ್ಡು ಬಿಸಾಕಬಲ್ಲೆ, ನಿರ್ಮಾಪಕ ಮಂಜು

ನಿರ್ಮಾಪಕ ಮಂಜು ಮೇಲೆ ನಟಿ ರಮ್ಯಾ ಅಸಮಾಧಾನ ವ್ಯಕ್ತ ಪಡಿಸಿದರೆ, ಮಂಜು ನಟಿಯ ಮೇಲೆ ಹರಿಹಾಯ್ದಿದ್ದಾರೆ. 'ಯಾರಿಗೆ ಬಾಕಿ ಉಳಿಸಿಕೊಂಡಿದ್ದರು ಒಂದು ಗಂಟೆಯ ಒಳಗೆ ಅವರ ದುಡ್ಡನ್ನು ಅವರಿಗೆ ಬಿಸಾಕಬಲ್ಲೆ. ಪೇಮೆಂಟ್ ಬಗ್ಗೆ ಮಾತನಾಡುವ ರಮ್ಯಾ ನನ್ನ ಸಿನಿಮಾದ ವೇಳೆ ಹೊತ್ತೊಯ್ದಿರುವ ಕಾಸ್ಟ್ಯೂಮ್ಸ್ ಬಗ್ಗೆ ಯಾಕೆ ಮಾತನಾಡುವುದಿಲ್ಲ?
ಕಠಾರಿವೀರ ಮತ್ತು ಗಾಡ್ ಫಾದರ್ ವಿವಾದ ನಿರ್ಮಾಪಕರಿಬ್ಬರ ನಡುವಣ ಜಗಳ. ಅದಕ್ಕೆ ಸಂಬಂಧವೇ ಇಲ್ಲದ ರಮ್ಯಾ ಮೂಗು ತೋರಿಸುವುದು ವಿಚಿತ್ರ ಮತ್ತು ಮೂರ್ಖತನ' ಎಂದು ಕೊಬ್ಬರಿ ಮಂಜು ನಟಿ ರಮ್ಯಾರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
ಇಷ್ಟೆಲ್ಲಾ ರಾದ್ದಾಂತ ನಡೆಸುವ ಮೊದಲು ಮಂಜು ತನ್ನ ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ತಾವು ಬಾಕಿ ಉಳಿಸಿಕೊಂಡಿರುವ ಪೇಮೆಂಟ್ ಕೊಡುವುದರ ಬಗ್ಗೆ ಆಲೋಚಿಸಲಿ. ಕಿಚ್ಚಹುಚ್ಚ ಚಿತ್ರದ ಸಂಪೂರ್ಣ ಪೇಮೆಂಟ್ ಇನ್ನೂ ನನ್ನ ಕೈಗೆ ಬಂದಿಲ್ಲ. ಅಂಥವರು ಕಠಾರಿವೀರ ಚಿತ್ರಕ್ಕೆ ಇಲ್ಲಸಲ್ಲದ ಆಕ್ಷೇಪ ವ್ಯಕ್ತಪಡಿಸಿ ಅಡ್ಡಿ ಉಂಟುಮಾಡುತ್ತಿರುವುದು ಬಾಲಿಶ ಎನ್ನುವ ದಾಟಿಯಲ್ಲಿ ರಮ್ಯಾ ಮಂಜು ವಿರುದ್ದ ಪ್ರತಿಕ್ರಿಯಿಸಿದ್ದರು.
ಕಠಾರಿವೀರ ಚಿತ್ರತಂಡದ ಜೊತೆ ಟಿವಿ9 ನಡೆಸಿದ್ದ ಕಾರ್ಯಕ್ರಮದಲ್ಲಿ ರಮ್ಯಾ ಕೆ ಮಂಜು ವಿರುದ್ದ ಬೇಸರ ವ್ಯಕ್ತ ಪಡಿಸಿದ್ದರು. ರಮ್ಯಾ ಹೇಳಿಕೆಗೆ ಮಂಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











