»   »  ಬ್ಯಾಂಕಾಕ್ ನಲ್ಲಿ ಮಿಥುನ್ ತೇಜಸ್ವಿ 'ಅಂತರಾತ್ಮ'

ಬ್ಯಾಂಕಾಕ್ ನಲ್ಲಿ ಮಿಥುನ್ ತೇಜಸ್ವಿ 'ಅಂತರಾತ್ಮ'

Subscribe to Filmibeat Kannada
Umashree plays a tantrik in 'Antaratma'!
ಪ್ರಪಂಚದಲ್ಲಿ ಎಲ್ಲಾ ಸಂಬಂಧಗಳಿಗಿಂತ ಸ್ನೇಹ ಸಂಬಂಧ ದೊಡ್ದದು ಎಂಬ ಮಾತು ರೂಢಿಯಲ್ಲಿದೆ. ಮನೆಯವರ ಹತ್ತಿರ ಹೇಳಲಾಗದ ಎಷ್ಟೋ ವಿಷಯಗಳನ್ನು ಗೆಳೆಯನ ಕಿವಿಯಲ್ಲಿ ಊದುವುದುಂಟು. ಇಂತಹ ಪರಿಶುದ್ದ ಸ್ನೇಹವೂ ಹಣದ ವಿಷಯ ಬಂದಾಗ ಹಾಳಾಗುತ್ತದೆ ಎನ್ನುವುದ್ದಕ್ಕೆ ಒಂದು ನಿದರ್ಶನ ಇಲ್ಲಿದೆ.

ಮಿಥುನ್ ತೇಜಸ್ವಿ ಹಾಗೂ ರೋಹನ್ ಗೌಡ 'ಅಂತರಾತ್ಮ' ಚಿತ್ರದಲ್ಲಿ ಉತ್ತಮ ಸ್ನೇಹಿತರು. ಸ್ನೇಹಿತನ ಕಷ್ಟಕ್ಕೆ ಸ್ಪಂದಿಸಿದ ಮಿಥುನ್ ಹಣದ ಸಹಾಯ ಮಾಡಿರುತ್ತಾರೆ. ಕಷ್ಟ ಕಾಲದಲ್ಲಿ ನೆರವಾದ ಗೆಳೆಯನ ಹಣವನ್ನು ಬಳಸಿಕೊಂಡ ರೋಹನ್‌ನಿಂದ ಅದ್ದನ್ನು ಹಿಂತಿರುಗಿಸುವ ಲಕ್ಷಣಗಳೇ ಕಂಡು ಬರುವುದಿಲ್ಲ. ಆತನ ನಡುವಳಿಕೆಯಿಂದ ನೊಂದ ಮಿಥುನ್, ರೋಹನ್ ಕಾರ್ಯ ನಿರ್ವಹಿಸುವ ಬ್ಯಾಂಕ್‌ಗೆ ಆಗಮಿಸಿ ಅವನೊಂದಿಗೆ ಜಗಳವಾಡುವ ಸನ್ನಿವೇಶವನ್ನು ಮಾರತಹಳ್ಳಿ ರಿಂಗ್ ರಸ್ತೆಯಲ್ಲಿರುವ ಪ್ರಥಮ್ ಮೋಟಾರ್‍ಸ್‌ನಲ್ಲಿ ನಿರ್ದೇಶಕ ಬಿ.ಶಂಕರ್ ಚಿತ್ರೀಕರಿಸಿಕೊಂಡರು. ಮಿಥುನ್ ತೇಜಸ್ವಿ, ರೋಹನ್ ಗೌಡ ಹಾಗೂ ಸಹ ಕಲಾವಿದರು ಇಲ್ಲಿನ ಸನ್ನಿವೇಶಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಿ.ಶಂಕರ್ ಅವರು ಚಿತ್ರಕತೆ ಬರೆದು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸುಂದರನಾಥ್ ಸುವರ್ಣರ ಛಾಯಾಗ್ರಹಣ, ಗಿರಿಧರ ದಿವಾನ್ ಸಂಗೀತ, ವಿ.ಮನೋಹರ್, ಚೇತನ್, ಆರ್ಯ ಗೀತರಚನೆ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್ ನೃತ್ಯ, ರಾಮಣ್ಣನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಮಿಥುನ್ ತೇಜಸ್ವಿ, ವಿಶಾಖ ಸಿಂಗ್(ಬಾಂಬೆ), ರೋಹನ್ ಗೌಡ, ಸುಮನ್ ರಂಗನಾಥ್, ಉಮಾಶ್ರೀ, ಹರೀಶ್ ರಾಯ್, ಮೈಕಲ್ ಮಧು, ರೇಖಾದಾಸ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಂತ್ರವಾದಿ ಪಾತ್ರದಲ್ಲಿ ಮಿಂಚಲಿರುವ ಉಮಾಶ್ರೀ
ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು
ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!
ಚಿತ್ರೋದ್ಯಮದಲ್ಲಿ ರು.15 ಕೋಟಿ ಹರಿಸಿದ ಮಂಜು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada