»   »  ಕಲಾತ್ಮಕ ಚಿತ್ರಗಳ ಕಡೆಗೆ ಜ್ಯೋತಿ ರೈ ಒಲವು

ಕಲಾತ್ಮಕ ಚಿತ್ರಗಳ ಕಡೆಗೆ ಜ್ಯೋತಿ ರೈ ಒಲವು

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಕಿರುತೆರೆಯಲ್ಲಿ ಇವರು ಈಗಾಗಲೇ ಪ್ರಬುದ್ಧ ಪಾತ್ರಗಳನ್ನುಪೋಷಿಸಿದ್ದಾರೆ ಮನೆಮಾತಾಗಿದ್ದಾರೆ. ಬೆಳ್ಳಿತೆರೆಯಲ್ಲೂ ಇದೇ ರೀತಿಯ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ಜ್ಯೋತಿ ಅವರ ಒಲವು.

ಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿಯಲ್ಲಿ ದೇವಕಿಯಾಗಿ ಹಲವು ಮಹಿಳೆಯರ ಮನಗೆದ್ದಿದ್ದಾರೆ ಜ್ಯೋತಿ. ಈ ಧಾರಾವಾಹಿಯಲ್ಲಿ ಜ್ಯೋತಿ ಅವರದು ಬಾಡಿಗೆ ತಾಯಿಯ ಪಾತ್ರ. ಅದನ್ನು ಅವರು ಮನಮಿಡಿಯುವಂತೆ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಹಾಗಾಗಿ ಈ ಧಾರಾವಾಹಿ 200 ಕಂತುಗಳನ್ನು ಪೂರೈಸಿದೆ.

ಈಟಿವಿ ಕನ್ನಡ ವಾಹಿನಿಯ 'ಶಾಂತಲಾ' ಮತ್ತು 'ಬಂದೇ ಬರತಾವ ಕಾಲ' ಧಾರಾವಾಹಿಗಳಲ್ಲೂ ಜ್ಯೋತಿ ರೈ ಅಭಿನಯಿಸಿದ್ದಾರೆ. ಜೋಗುಳದಲ್ಲಿನ ಅವರ ಅಭಿನಯಕ್ಕೆ ಮನಸೋತಿರುವ ಪ್ರೇಕ್ಷಕರು ಅವರನ್ನು 'ದೇವಕಿ' ಎಂದೇ ಗುರುತಿಸುತ್ತಿರುವುದೇ ಇದಕ್ಕೆ ಸಾಕ್ಷಿ.

ಮಂಗಳೂರು ಮೂಲದ ಈ ಕಿರುತೆರೆ ಬೆಡಗಿ ಬೆಳೆದದ್ದು ಮಡಿಕೇರಿಯಲ್ಲಿ. ಓದಿದ್ದು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ಸಿ ಪದವಿ. ನೆಟ್ ವರ್ಕಿಂಗ್ ಇಂಜಿನಿಯರ್ ಆಗಿರುವ ಪದ್ಮನಾಭ ರೈ ಅವರ ಕನಸುಗಳಿಗೆ ನೀರೆಯುತ್ತಿದ್ದಾರೆ. ಕಮರ್ಷಿಯಲ್ ಚಿತ್ರಗಳಿಗಿಂತ ಅಸಾಂಪ್ರದಾಯಿಕ ಚಿತ್ರಗಳ ಕಡೆಗೆ ಜ್ಯೋತಿ ಅವರ ಒಲವು ಹರಿದಿದೆ.

ಹಲವಾರು ಕಮರ್ಷಿಯಲ್ ಚಿತ್ರಗಳು ಜ್ಯೋತಿ ಅವರನ್ನು ಹುಡುಕಿಕೊಂಡು ಬಂದಿವೆ. ಆದರೆ ಅವರ ಒಲವು ಅಸಾಂಪ್ರದಾಯಿಕಚಿತ್ರಗಳ ಕಡೆಗೆ ಇರುವ ಕಾರಣ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಲು ಒಪ್ಪಲಿಲ್ಲ. ಕಮರ್ಷಿಯಲ್ ಚಿತ್ರಗಳಲ್ಲಿ ಬಲವಂತವಾಗಿ ಹೇರುವ ಉಡುಗೆ ತೊಡುಗೆಗಳನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ 'ಮೊಗ್ಗಿನ ಮನಸು' ಚಿತ್ರದಲ್ಲಿ ರಾಧಿಕಾ ಪಂಡಿತ್ ನಿರ್ವಹಿಸಿದಂತಹ ಪಾತ್ರದಲ್ಲಿ ಅಭಿನಯಿಸಬೇಕು ಎನ್ನುತ್ತಾರೆ ಜ್ಯೋತಿ ರೈ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada