For Quick Alerts
  ALLOW NOTIFICATIONS  
  For Daily Alerts

  ಕಾರು ಅಪಘಾತದಲ್ಲಿ ತಾರೆ ಐಶ್ವರ್ಯ ರೈ ಚಿಕ್ಕಪ್ಪ ಸಾವು

  By Rajendra
  |

  ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ಅವರ ಚಿಕ್ಕಪ್ಪ ರವಿರಾಜ್ ಶೆಟ್ಟಿ (60) ಕಾರು ಅಪಘಾತದಲ್ಲಿ ಸಾವಪ್ಪಿದ್ದಾರೆ. ಅಂಕೋಲಾ ಬಳಿ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ (ಮೇ 4) ನಡೆದಿದೆ.

  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರವಿರಾಜ್ ಶೆಟ್ಟಿ ಮತ್ತವರ ಸಂಬಂಧಿಕರಾದ ಜಯಾ, ಕನಕ, ಸುಲತಾ ಹಾಗೂ ಕಾರಿನ ಚಾಲಕ ರಹಮತುಲ್ಲಾ ಅವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಕಾರ್ಕಳದ ಬೈಲೂರಿನವರಾದ ರವಿರಾಜ್ ಶೆಟ್ಟಿ ಕುಟುಂಬ ಮಹಾರಾಷ್ಟ್ರದ ಪುಣೆಗೆ ಪ್ರಯಾಣ ಬೆಳಸಿತ್ತು ಎನ್ನಲಾಗಿದೆ. ಅಪಘಾತದ ಬಗ್ಗೆ ದೂರು ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

  English summary
  Bollywood actress Aishwarya Rai Bachchan's uncle Raviraj Shetty (60) dies in a devastating road collision of vehicles (a car and a Tanker) on Thursday, at Ankola. And 4 others including car driver were severely injured.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X