»   »  ಜಂಗ್ಲಿ,ಬಿರುಗಾಳಿ ನಡುವೆ ಐಡ್ಯಾ ಮಾಡ್ಯಾರ

ಜಂಗ್ಲಿ,ಬಿರುಗಾಳಿ ನಡುವೆ ಐಡ್ಯಾ ಮಾಡ್ಯಾರ

Posted By:
Subscribe to Filmibeat Kannada
Junglee movie still
ಶುಕ್ರವಾರ ಫೆಬ್ರವರಿ 6ರಂದು ಮೂರು ಕನ್ನಡ ಚಿತ್ರಗಳು ತಮ್ಮ ಅದೃಷ್ಟವನ್ನು ಪಣಕ್ಕಿಡಲಿವೆ. ಸಾಲು ಸಾಲು ಸೋಲುಣ್ಣುತ್ತಿರುವ ಕನ್ನಡ ಚಿತ್ರಗಳ ಹಣೆಬರಹದಲ್ಲಿ ಈ ಚಿತ್ರಗಳನ್ನು ಪ್ರೇಕ್ಷಕ ಹೇಗೆ ಸ್ವಾಗತಿಸುತ್ತಾನೋ ಗೊತ್ತಿಲ್ಲ. ಚಿತ್ರಗಳು ಓಡುತ್ತವೋ, ನಡೆಯುತ್ತವೋ ಅಥವಾ ತೆವಳುತ್ತವೋ ಎನ್ನುವುದನ್ನು ಪರೀಕ್ಷಿಸಲು ಚಿತ್ರೋದ್ಯಮ ಕಳವಳದಿಂದಲೇ ಎದುರು ನೋಡುತ್ತಿದೆ.

ದುನಿಯಾ, ಜಂಗ್ಲಿ ಮತ್ತು ಐಡ್ಯಾ ಮಡ್ಯಾರ ಈ ವಾರ ತೆರೆ ಕಾಣುತ್ತಿರುವ ಮೂರು ಚಿತ್ರಗಳು. ದುನಿಯಾ ವಿಜಯ್ ಪಾಲಿಗೆ 'ಜಂಗ್ಲಿ' ಚಿತ್ರ ನಿರ್ಣಾಯಕ ಪಾತ್ರ ವಹಿಸಲಿದೆ. ನಿರ್ದೇಶಕ ಸೂರಿ ಮತ್ತು ನಿರ್ಮಾಪಕ ರಾಕ್ ಲೈನ್‌ಗೂ ಜಂಗ್ಲಿಯ ಗೆಲುವು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ತಮ್ಮ ಚಿತ್ರ ಜಂಗ್ಲಿ ಸೋತರೆ ಇನ್ನು ಮುಂದೆ ಚಿತ್ರ ನಿರ್ಮಾಣಕ್ಕೆ ಕೈ ಹಾಕುವುದಿಲ್ಲ ಎಂದು ಸೂರಿ ಪ್ರತಿಜ್ಞೆ ಮಾಡಿರುವುದರಿಂದ ಜಂಗ್ಲಿ ಚಿತ್ರ ಹಲವು ಬಗೆಯ ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ ಆದರ್ಶ ಎಂಟರ್ ಪ್ರೈಸಸ್ ನ 'ಬಿರುಗಾಳಿ'. ನೃತ್ಯ ನಿರ್ದೇಶಕ ಹರ್ಷ ನಿರ್ದೇಶನದ ಈ ಚಿತ್ರದಲ್ಲಿ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕನಾಗಿದ್ದಾರೆ. ಕೇಶವಿನ್ಯಾಸ ಒಳಗೊಂಡಂತೆ ಹಲವು ವಿಭಿನ್ನಗಳೊಡನೆ ಚೇತನ್ 'ಬಿರುಗಾಳಿ'ಯಲ್ಲಿ ಅಭಿನಯಿಸಿದ್ದಾರೆ. ಚೇತನ್‌ಗೆ ಈ ಚಿತ್ರ ಯಶಸ್ಸು ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಅಚಲ ವಿಶ್ವಾಸ ನಿರ್ದೇಶಕರಿಗಿದೆ.

ಅರ್ಜುನ್ ರಾಗಸಂಯೋಜನೆಯಲ್ಲಿ ಮೂಡಿಬಂದಿರುವ ಬಿರುಗಾಳಿ ಹಾಡುಗಳಂತೂ ಬಿಡುಗಡೆಯ ಪೂರ್ವದಲ್ಲೇ ಜನಪ್ರಿಯವಾಗಿದೆ. ಚಿತ್ರದ ಹೆಸರು 'ಬಿರುಗಾಳಿ'ಯಾದರೂ ನೋಡುಗನಿಗೆ ತಂಗಾಳಿ ಬೀಸಿದ ಅನುಭವ ನೀಡಲಿದೆ ಎಂದು ನಿರ್ಮಾಪಕ ಮನೋಜ್‌ಪಾಟೀಲ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಈಗಾಗಲೇ ಇಂದ್ರಜಿತ್ ಲಂಕೇಶ್, ಉಮೇಶ್ ಬಣಕಾರ್, ಎನ್. ಕುಮಾರ್‌ರಂಥ ಸಿನಿಮಾ ದಿಗ್ಗಜರು ಚಿತ್ರ ವೀಕ್ಷಿಸಿ ಭೇಷ್ ಎಂದಿದ್ದಾರೆ. ಅಲ್ಲದೇ ಸುಖಾಸುಮ್ಮನೆ ಬಿರುಗಾಳಿಯ ಬಗ್ಗೆ ಆರೋಪ ಮಾಡಿದ್ದ ದಿನೇಶ್ ಗಾಂಧಿಗೂ ಛೇಂಬರ್‌ನವರ ಮಂಗಳಾರತಿಯಾಗಿದೆ. ಹೀಗಾಗಿ ಬಿರುಗಾಳಿಯ ಬಗೆಗಿನ ನಿರೀಕ್ಷೆ ಹೆಚ್ಚಿದೆ.

ಈ ಎರಡೂ ದೊಡ್ಡ ಬಜೆಟ್‌ನ ಚಿತ್ರಗಳ ಮಧ್ಯೆ ಸ್ಮಾಲ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಯಶವಂತ ಸರದೇಶ ಪಾಂಡೆಯವರ 'ಐಡ್ಯಾ ಮಾಡ್ಯಾರ ನಗಲಿಕ್ಕ' ಎಂಬ ಹಾಸ್ಯ ಚಿತ್ರವೂ ಬಿಡುಗಡೆಯಾಗುತ್ತಿದೆ. ಈ ಮೂರು ಚಿತ್ರಗಳಲ್ಲಿ ಯಾವ್ಯಾವುದರ ಕಥೆ ಏನಾಗುತ್ತದೋ ಕಾದುನೋಡಬೇಕು.

***
ಕನ್ನಡ ಚಲನಚಿತ್ರದ ಅಮೃತ ಮಹೋತ್ಸವವನ್ನು ಆಚರಿಸಲು ವಾಣಿಜ್ಯ ಮಂಡಳಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಉತ್ಸವದ ವಿವರಗಳು ನಾಳೆ ಹೊರಬೀಳಲಿವೆ. ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಮತ್ತು ಪದಾಧಿಕಾರಿಗಳು ಶುಕ್ರವಾರ ಮಧ್ಯಾನ್ಹ ಸುದ್ದಿಗೋಷ್ಠಿ ಕರೆದಿದ್ದು ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ವಿಡಿಯೋಗಳು

ಆ ದಿನಗಳು ಚೇತನ್ ರ ಬಿರುಗಾಳಿ ಟ್ರೈಲರ್
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್

ಪೂರಕ ಓದಿಗೆ

ಮತ್ತೊಂದು ದುನಿಯಾದ ನಿರೀಕ್ಷೆಯಲ್ಲಿ ಸೂರಿ
ಬಿರುಗಾಳಿಯಾದ ಆ ದಿನಗಳು ಖ್ಯಾತಿಯ ಚೇತನ್
ಬಟ್ಟಲು ಕಣ್ಗಳ ಚೆಲುವೆ ಅಂದ್ರಿತಾ ರೇ ಚಿತ್ರಪಟಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada