»   » ಲಂಗ ದಾವಣಿಯ ಮುಗ್ಧ ಹುಡುಗಿ ಭಾವನಾ

ಲಂಗ ದಾವಣಿಯ ಮುಗ್ಧ ಹುಡುಗಿ ಭಾವನಾ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಯಶಸ್ವಿ ನಿರ್ದೇಶಕ 'ದುನಿಯಾ' ಸೂರಿ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ 'ಜಾಕಿ'. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಭಾವನಾ ಇದೀಗ ಕನ್ನಡಕ್ಕೆ 'ಜಾಕಿ'ಯ ರಾಣಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ 'ಜಾಕಿ' ಇತ್ತೀಚೆಗೆ ಸೆಟ್ಟೇರಿದ್ದು ಗೊತ್ತೆ ಇದೆ. ಚಿತ್ರದಲ್ಲಿ ಹೊಸ ರೀತಿಯ ಸಾಹಸ ಸನ್ನಿವೇಶಗಳಿವೆ. ಅವು ಹೇಗಿವೆ ಎಂಬುದನ್ನು ನೋಡಬೇಕಾದರೆ ಚಿತ್ರ ಬಿಡುಗಡೆಯಾಗುವುವರೆಗೂ ಕಾಯಬೇಕು ಎಂದು ಪುನೀತ್ ಪ್ರತಿಕ್ರಿಯಿಸಿದ್ದರು. ಆದರೆ ಭಾವನಾ ತಮ್ಮ ಪಾತ್ರದ ಬಗ್ಗೆ ಒಂಚೂರು ಸುಳಿವು ನೀಡಿದ್ದಾರೆ.

'ಜಾಕಿ' ಚಿತ್ರದಲ್ಲಿ ತಮ್ಮದು ಸರಳ ಮತ್ತು ಮುಗ್ಧ ಹುಡುಗಿಯ ಪಾತ್ರ.ತಮಿಳಿನ 'ವೆಯಿಲ್' ಚಿತ್ರದಲ್ಲಿನ ಪಾತ್ರಕ್ಕೆ ಹತ್ತಿರವಾದದ್ದು. ಲಕ್ಷ್ಮಿ ಪಾತ್ರಧಾರಿಯಾಗಿ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಪಾತ್ರಕ್ಕೆ ತಕ್ಕಂತೆ ಉಡುಗೆ ತೊಡುಗೆಗಳಿರುತ್ತವೆ. ಲಂಗ ದಾವಣಿ, ಚೂಡಿದಾರ್ ಮುಂತಾದ ಕಾಸ್ಟ್ಯೂಮ್ಸ್ ಬಳಸಿಕೊಳ್ಳಲಾಗಿದೆ ಎಂದು ಭಾವನಾ ವಿವರ ನೀಡಿದರು.

ನನ್ನ ವೃತ್ತಿ ಜೀವನಕ್ಕೆ ತಿರುವು ಕೊಟ್ಟಂತಹ ಚಿತ್ರ ತಮಿಳಿನ 'ಅಸಲ್'. ಒಂದೇ ತೆರನಾದ ಪಾತ್ರಗಳಿಗೆ ಅಂಟಿಕೊಂಡಿದ್ದ ನನ್ನನ್ನು ಗ್ಲಾಮರಸ್ ಪಾತ್ರಗಳ ಕಡೆಗೆ ಕರೆದೊಯ್ದ ಚಿತ್ರ ಅದು. ಇದೀಗ ಅದೇ ರೀತಿಯ ಸತ್ವಭರಿತ ಪಾತ್ರ 'ಜಾಕಿ' ಚಿತ್ರದ ಮೂಲಕ ನನಗೆ ದೊರಕಿದೆ. ಅದಕ್ಕಿಂತಲೂ ಮುಖ್ಯವಾಗಿ ಪುನೀತ್ ರಾಜ್ ಕುಮಾರ್ ಅವರಂತಹ ಜನಪ್ರಿಯ ನಟನೊಂದಿಗೆ ನಟಿಸುತ್ತಿರುವುದು ಸಂತಸ ತಂದಿದೆ ಎಂದು ಭಾವನಾ ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada