»   »  'ಜೊತೆಗಾರ'ನಿಗೆ ರು.1.50 ಲಕ್ಷ ಬಿಟ್ಟುಕೊಟ್ಟ ರಮ್ಯಾ!

'ಜೊತೆಗಾರ'ನಿಗೆ ರು.1.50 ಲಕ್ಷ ಬಿಟ್ಟುಕೊಟ್ಟ ರಮ್ಯಾ!

Posted By:
Subscribe to Filmibeat Kannada
Jothegara movie still
ಒಪ್ಪಂದ ಪ್ರಕಾರ ಕಲಾವಿದರಿಗೆ ಸಂಭಾವನೆ ಕೊಡದಿದ್ದರೆ ಡಬ್ಬಿಂಗ್ ಗೆ , ಚಿತ್ರೀಕರಣಕ್ಕೆ ಕೈಕೊಡುವುದು ವಾಡಿಕೆ. ಸಂಭಾವನೆ ವಿಚಾರದಲ್ಲಿ ಕಲಾವಿದರೆಲ್ಲಾ ಒಂದೇ ಎಂಬ ಮಾತಿದೆ, ಆದರೆ ಈ ಮಾತನ್ನ್ನು ನಟಿ ರಮ್ಯಾ ಹುಸಿ ಮಾಡಿದ್ದಾರೆ. 'ಜೊತೆಗಾರ' ಚಿತ್ರದ ಕೊನೆಯ ಕಂತಿನ ಸಂಭಾವನೆಯನ್ನು ಕೊಡುವುದು ಬಿಡುವುದು ಅಶ್ವಿನಿ ರಾಮ್ ಪ್ರಸಾದ್ ಅವರಿಗೇ ಬಿಟ್ಟ ವಿಚಾರ ಎಂದು ಅವರು ವಿರಮಿಸಿಕೊಂಡಿದ್ದಾರೆ.

'ಜೊತೆಗಾರ' ಚಿತ್ರ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ತಮಗೆ ಅಪಮಾನ ಮಾಡಿದರು ಎಂದು ಆರೋಪಿಸುವ ಮೂಲಕ ಚಿತ್ರದ ನಾಯಕ ಪ್ರೇಮ್ ಕುಮಾರ್ ಮೊನ್ನೆ ಚಿತ್ರತಂಡದಿಂದ ದೂರ ಸರಿದಿದ್ದಾರೆ. ಈಗ ನಟಿ ರಮ್ಯಾ ತಮ್ಮ ಕೊನೆ ಕಂತಿನ ಸಂಭಾವನೆ ವಿಚಾರದಲ್ಲಿ ಬಿಗಿತನವನ್ನು ಬದಿಗಿಟ್ಟಿದ್ದಾರೆ. ಒಟ್ಟಿನಲ್ಲಿ ವ್ಯತಿರಿಕ್ತ ಘಟನೆಗಳು ಜೊತೆಗಾರ ಚಿತ್ರದ ಪಾಲಾಗಿವೆ.

ರಮ್ಯಾ ಅವರಿಗೆ ನಿರ್ಮಾಪಕ ರಾಮ್ ಪ್ರಸಾದ್ ರು.1.50 ಲಕ್ಷ ಬಾಕಿ ಉಳಿಸಿಕೊಂಡಿದ್ದರು. ಕಾರಣ ಚಿತ್ರದ ನಿರ್ಮಾಣ ನಿಗದಿತ ಬಜೆಟ್ ಮೀರಿ ರು.3.5 ಕೋಟಿಗೆ ಬಂದು ನಿಂತಿತ್ತು. ಜೊತೆಗಾರ ಚಿತ್ರ ಬಿಡುಗಡೆಯಾದ ನಂತರ ಬಾಕಿ ಸಂಭಾವನೆ ಕೊಡುವುದಾಗಿ ತಿಳಿಸಿದ್ದರಂತೆ. ಆದರೆ ರಮ್ಯಾ ಹಠಮಾಡದೆ ''ನಿಮಗೆ ಯಾವಾಗ ಸಾಧ್ಯವಾಗುತ್ತದೋ ಆಗ ಕೊಟ್ಟರಾಯ್ತು ಬಿಡಿ'' ಎಂದು ರಾಮ್ ಪ್ರಸಾದ್ ಗೆ ಹೇಳಿದ್ದಾರಂತೆ. ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಬಜೆಟ್ ಸಾಲದ ಕಾರಣ ಚಿತ್ರದ ಒಂದು ಹಾಡನ್ನು ರಾಮ್ ಪ್ರಸಾದ್ ಕೈಬಿಟ್ಟಿದ್ದಾರೆ.

ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳಿಂದ 'ಜೊತೆಗಾರ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ. ಅಂದಹಾಗೆ ಈ ಚಿತ್ರದ ತಾರಾಗಣದಲ್ಲಿ ಪ್ರೇಮ್ ಕುಮಾರ್, ಆಶೀಶ್ ವಿದ್ಯಾರ್ಥಿ, ಲಕ್ಷ್ಮಿ, ರಾಜೇಂದ್ರ ಕಾರಂತ್, ಸಾಧು ಕೋಕಿಲ, ದೊಡ್ಡಣ್ಣ, ಪದ್ಮಜಾ ರಾವ್, ಸುಧಾ ಬೆಳವಡಿ, ಪ್ರತಾಪ್, ಸುನಿಲ್, ಲಯೇಂದ್ರ ಮುಂತಾದವರು ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು
ರಮ್ಯಾ ಜೊತೆಗಾರನಿಗೆ ಹಾಡೊಂದು ಬಾಕಿ
ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹಾರಾಟ,ಹೋರಾಟ!
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?
ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!
ಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada