For Quick Alerts
  ALLOW NOTIFICATIONS  
  For Daily Alerts

  ಮ್ಯಾಗಝಿನ್ ಮುಖಪುಟದಲ್ಲಿ 'ಹಲೋ' ಎಂದ ಸೈಫ್ ಮಗಳು

  |

  ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮಗಳು 'ಸಾರಾ' ಹಲೋ ಮ್ಯಾಗಝಿನ್ ಮುಖಪುಟಕ್ಕೆ ತನ್ನ ತಾಯಿ ಅಮೃತಾ ಸಿಂಗ್ ಜೊತೆ ಫೋಟೋ ಫೋಸ್ ನೀಡಿದ್ದಾಳೆ. ಅಬು ಜಾನಿ ಮತ್ತು ಸಂದೀಪ್ ಕೋಸ್ಲಾ ಸಂಗಮದ ಕ್ರಿಯೇಷನ್ಸ್ 'ಹೆಲೋ'ಗೆ ಫೋಟೋ ಕ್ಲಿಕ್ಕಿಸಿಕೊಂಡು ಮಾಧ್ಯಮ ಪ್ರಪಂಚದಲ್ಲಿ ಸುದ್ದಿಯಾಗಿದ್ದಾರೆ ಸಾರಾ.

  ಸಾರಾ ತನ್ನ ತಾಯಿ ಅಮೃತಾ ಸಿಂಗ್ ರೀತಿಯಲ್ಲೇ ಆಕರ್ಷಕವಾಗಿದ್ದು ಈಗತಾನೇ ಹದಿನಾರನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ತಾಯಿಯಂತೆ ಕ್ರೀಮ್ ಕಲರ್ ಬಣ್ಣ ಹಾಗೂ ಗೋಲ್ಡ್ ಕಲರ್ ಅಂಚು ಹೊಂದಿರುವ ಡ್ರೆಸ್ ನಲ್ಲಿ ಮಿರಿಮಿರಿ ಮಿಂಚುತ್ತಿರುವ ಸಾರಾ ಫೋಟೋದಲ್ಲೇ ಎಲ್ಲರ ಗಮನಸೆಳೆಯುತ್ತಿದ್ದಾಳೆ.

  ಇದೇ ವಯಸ್ಸಿನಲ್ಲಿ ಅಮೃತಾ ಸಿಂಗ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಸಾರಾ ಕಥೆಯೇ ಬೇರೆ. ಇದೀಗ ವಿದ್ಯಾಭ್ಯಾಸ ಪೂರೈಸುತ್ತಿರುವ ಸಾರಾ ಇನ್ನೆರಡು ವರ್ಷದ ನಂತರ ತನ್ನ ಕೆರಿಯರ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾಳೆ ಎಂದಿದ್ದಾರೆ ತಾಯಿ ಅಮೃತಾ ಸಿಂಗ್. ಆದರೆ ಈ ಫೋಟೋ ನೋಡಿದ ಮೇಲೆ ಬಹಳಷ್ಟು ಆಫರ್ ಬರುವುದಂತೂ ಖಾತ್ರಿ. ನಿರ್ಧಾರ ಬದಲಾದರೆ ಆಶ್ಚರ್ಯವೇನೂ ಇಲ್ಲ. (ಏಜೆನ್ಸೀಸ್)

  English summary
  Description: Sara Ali Khan, the daughter of actor and Nawab of Pataudi, Saif Ali Khan and Amrita Singh recently made her debut on the magazine cover of Hello! magazine along with her mom Amrita Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X