For Quick Alerts
ALLOW NOTIFICATIONS  
For Daily Alerts

ಅನಂತನಾಗ್ ಕೊಟ್ಟ ಪಂಚ್, ಒಂದು ಫ್ಲ್ಯಾಶ್ ಬ್ಯಾಕ್

By Rajendra
|

ಅನಂತನಾಗ್ ಮೂಡಿ, ಅನಂತನಾಗ್ ಸೈಲೆಂಟು, ಅನಂತನಾಗ್ ಒಂಥರಾ ಫೀಲಿಂಗ್ ವ್ಯಕ್ತಿಎನ್ನುವ ಬಗ್ಗೆ ಹೆಚ್ಚಿನವರಿಗೆ ಗೊತ್ತು. ಅವರು ಸೆಟ್ಟಲ್ಲಿದ್ದಾಗ ಒಮ್ಮೊಮ್ಮೆ ಖುಷಿಯಿಂದ ಬೀಗುತ್ತಿರುತ್ತಾರೆ. ಕೆಲವೊಮ್ಮೆ ಸಣ್ಣ ವಿಷಯಕ್ಕೂ ರೇಗಿಬಿಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಸಣ್ಣ ಉದಾಹರಣೆ ಕೇಳಿ...

ಇಪ್ಪತ್ತು ವರ್ಷದ ಹಿಂದಿನ ಮಾತು. ಹೊಸ ನೀರು ಚಿತ್ರದ ಶೂಟಿಂಗ್. ಮೈಸೂರಿನ ಹಾರಂಗಿ ಡ್ಯಾಮ್ ಎದುರು ಸೆಟ್ ಹಾಕಲಾಗಿತ್ತು. ಫೈಟಿಂಗ್ ಸೀನು. ಅನಂತನಾಗ್‌ಗೆ ಮೊದಲೇ ಹೊಡೆದಾಡುವುದೆಂದರೆ ಅಲರ್ಜಿ ಆಫ್‌ಇಂಡಿಯಾ. ಬೇಕಾದರೆ ಚಂದನದ ಗೊಂಬೆ ಸಿನಿಮಾದಲ್ಲಿ "ಆಕಾಶದಿಂದಾ..ಧರೆಗಿಳಿದ ಗೊಂಬೆ" ಎಂದು ಹಾಡುತ್ತಾ ಕಿಲೋಮೀಟರ್‌ಗಟ್ಟಲೇ ನಡೆದು ಹೋಗುತ್ತಾರೆ, ಫೈಟಿಂಗ್ ವಿಷಯದಲ್ಲಿ ಮಾತ್ರ ನೋ ಬಾಬಾ ನೋ!

ಸರಿ, ಆ ಕಾಲದ ಸೂಪರ್‌ಹಿಟ್ ಸಾಹಸ ನಿರ್ದೇಶಕ ವೈ ಶಿವಯ್ಯ ಅನಂತ್‌ಗೆ ಗೈಡ್ ಮಾಡುತ್ತಿದ್ದಾರೆ. ಅನಂತ್ ಅವರನ್ನೇ ನೋಡುತ್ತಿದ್ದಾರೆ. ಶಿವಯ್ಯ ತಮ್ಮ ವರಸೆ ಶುರು ಹಚ್ಚಿಕೊಂಡಿದ್ದಾರೆ- "ಅನಂತನಾಗ್ ಜೀ.. ಮೊರು ಪಂಚು ಫಿಫ್ಟೀಡೇಸ್.. ವೊರು ಕಿಕ್ಕು ಹಂಡ್ರೆಡ್ ಡೇಸ್..!"

ಅನಂತ್‌ಗೆ ಎಲ್ಲಿತ್ತೋ ನೋಡಿ ಸಿಟ್ಟು, ಅಲ್ಲಿಂದ ಎದ್ದು ನಿಂತವರೇ... "ಒಂದ್ ಪಂಚಿಗೆ ಐವತ್ತು ದಿನ ಓಡೋಡಾದ್ರೆ ನಾವ್‌ಯಾಕ್ ಇಷ್ಟೆಲ್ಲಾ ಕಷ್ಟಪಟ್ಟು ಆಕ್ಟ್ ಮಾಡ್ಬೇಕು? ನೀವೇ ಮಾಡ್ಕೊಳ್ಳಿ.."ಅಷ್ಟು ಹೇಳಿ ಅಲ್ಲಿಂದ ಹೊರಟ ಅನಂತನಾಗ್ ಹಿಂದೆತಿರುಗಿ ನೋಡಲೇ ಇಲ್ಲ.

ಅಲ್ಲಿದ್ದ ಸುಹಾಸಿನಿ, ಲೋಕನಾಥ್ ಅಂಕಲ್, ಲೋಹಿತಾಶ್ವ, ನಿರ್ದೇಶಕ ಕೆ.ವಿ.ಜಯರಾಮ್, ನಿರ್ಮಾಪಕ ಸಚ್ಚಿದಾನಂದ ಎಲ್ಲರಿಗೂ ಶಾಕೋಶಾಕು!ಅಲ್ಲಿಂದ ಬರೊಬ್ಬರಿ ಒಂದು ವಾರ ಅನಂತನಾಗ್ ತಿರುಗಿ ಬರಲೇ ಇಲ್ಲ. ಕೊನೆಗೆ ಕೆ.ವಿ. ಜಯರಾಮ್ ಕಾಡಿಬೇಡಿ ಅವರನ್ನು ಕರೆಸಿಕೊಂಡು ಕೊನೆಗೂ "ಹೊಸನೀರು" ಹರಿಸಿದರು! (ದಟ್ಸ್‌ಕನ್ನಡ ಸಿನಿಬ್ಯೂರೋ)

English summary
An interesting anecdote about Kannada actor Anant Nag. What most of us know about him is that he is a moody and a silent person apart from his brilliant acting skills. Here is an exception that happened on the sets of Hosa Neeru(1986). He flew into a rage on fight master Y Shivaiah and left the place.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more