ಅಮಿತಾಬ್ ಜತೆ ನಟಿಸಬೇಕೆಂಬ ಆಸೆ: ಶಿವಣ್ಣ

*ನಾನು 12 ವರ್ಷದವನಾಗಿದ್ದಾಗ ಉತ್ತಮ ಕ್ರಿಕೆಟರ್ ಆಗಿದ್ದೆ. ಭಾರತ ಕ್ರಿಕೆಟ್ ತಂಡ ಸೇರಬೇಕೆಂದು ಕನಸು ಕಂಡಿದ್ದೆ. ಆದರೆ ಯಾವುದೇ ಶಿಫಾರಸು ಇಲ್ಲದ ಕಾರಣ ಆಯ್ಕೆಯಾಗಲಿಲ್ಲ.
*40 ಸದಸ್ಯರಿದ್ದ ಅವಿಭಕ್ತ ಕುಟುಂಬ ನಮ್ಮದು. ನಮ್ಮ ಮನೆ ಹಕ್ಕಿ ಗೂಡಿನಂತೆ ಇತ್ತು.
*ಆರಂಭದಲ್ಲಿ ನನಗೆ ಕನ್ನಡ ಗೊತ್ತಿರಲಿಲ್ಲ. ಚಿತ್ರಕತೆಗಳ ಬಗ್ಗೆ ಚರ್ಚಿಸುತ್ತಾ ಕಲಿತೆ.
*ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ರ ದೊಡ್ಡ ಅಭಿಮಾನಿ ನಾನು. ಅಮಿತಾಬ್ ಜತೆ ನಟಿಸಬೇಕು ಎಂಬುದು ನನ್ನ ಕನಸು.
*ಅಮೃತ ಮಹೋತ್ಸವದ ಕೆಟ್ಟ ನಿರ್ವಹಣೆಯಿಂದ ನನಗೂ ಬೇಸರವಾಗಿದೆ.
*ರಾಜಕೀಯದಲ್ಲಿ ನಂಬಿಕೆ ಇಲ್ಲ. ರಾಜಕೀಯ ನಮ್ಮ ಕುಟುಂಬದ ಭಾಗವೂ ಅಲ್ಲ.
ರಾಜ್ ಕುಮಾರ್ ಬಗ್ಗೆ
*ಆರಂಭದಲ್ಲಿ ಅಪ್ಪಾಜಿ ಅವರೇ ನನ್ನ ಸಿನಿಮಾಗಳಿಗೆ ಚಿತ್ರಕತೆ ಆಯ್ಕೆ ಮಾಡುತ್ತಿದ್ದರು.
*ಶ್ರೀಕೃಷ್ಣದೇವರಾಯ, ಬಂಗಾರದ ಮನುಷ್ಯ, ಭಕ್ತ ಕುಂಬಾರ, ಎರಡು ಕನಸು, ಕಸ್ತೂರಿ ನಿವಾಸ ಮತ್ತು ಆಕಸ್ಮಿಕ ಇವು ಅಪ್ಪಾಜಿ ನಟಿಸಿದ ನನ್ನ ಮೆಚ್ಚಿನ ಚಿತ್ರಗಳು.
*ಅಪ್ಪಾಜಿ ಮನೆ ಒಂದು ರೀತಿಯಲ್ಲಿ ಚರ್ಚು, ಮಸೀದಿ, ಗುರುದ್ವಾರ ಮತ್ತು ಮಂದಿರ ಎಲ್ಲವೂ ಆಗಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ ಓದಿ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್


Click it and Unblock the Notifications











