»   »  ಬೆಂಗಳೂರಿನಲ್ಲಿ ಮಳೆಯಲಿ ಜೊತೆಯಲಿ

ಬೆಂಗಳೂರಿನಲ್ಲಿ ಮಳೆಯಲಿ ಜೊತೆಯಲಿ

Subscribe to Filmibeat Kannada

ಬೆಂಗಳೂರು ಈಗ ಚಿರಾಪುಂಜಿಯಂತಾಗಿದೆ. ಮುಸಲಧಾರೆ ಸುರಿಯುತ್ತ್ತಲೇ ಇದೆ. ಮಳೆಯಲ್ಲೇ ಮಿಂದು ಹೋಗಿದೆ ಉದ್ಯಾನ ನಗರಿ. ಇದೇ ಸಂದರ್ಭದಲ್ಲಿ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾಗಣೇಶ್ ಅವರು ನಿರ್ಮಿಸುತ್ತಿರುವ 'ಮಳೆಯಲಿ ಜೊತೆಯಲಿ' ಚಿತ್ರದ ಹಾಡುಗಳ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ.

ನಾಯಕ ಗಣೇಶ್ ಹಾಗೂ ಅಂಜನಾ ಸುಖಾನಿ ಅವರ ಅಭಿನಯದಲ್ಲಿ ಚಿತ್ರದ ಗೀತೆಯೊಂದರ ಚಿತ್ರೀಕರಣ ನಗರದ ಗ್ಲೋಬಲ್ ವಿಲೇಜ್‌ನಲ್ಲಿ ಚಿತ್ರೀಕರಣಗೊಳ್ಳುವ ಮೂಲಕ ಹಾಡುಗಳ ಚಿತ್ರೀಕರಣಕ್ಕೆ ಚಾಲನೆ ದೊರಕಿದೆ. ಉಳಿದ ಗೀತೆಗಳ ಚಿತ್ರೀಕರಣ ಕೇರಳ, ಮಂಗಳೂರು ಹಾಗೂ ಗೋವಾದಲ್ಲಿ ನಡೆಯಲಿದೆ ಹಾಗೂ ಈ ತಿಂಗಳ ಎರಡನೇ ವಾರದಲ್ಲಿ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಲಿದೆ ಎಂದು ನಿರ್ದೇಶಕ ಪ್ರೀತಂಗುಬ್ಬಿ ತಿಳಿಸಿದ್ದಾರೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಾಹಕರಾಗಿದ್ದಾರೆ. ವಿ.ಹರಿಕೃಷ್ಣ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದೇವಶೆಟ್ಟಿ ಮಹೇಶ್ ಸಂಭಾಷಣೆ, ಕವಿರಾಜ್, ಜಯಂತ್ ಕಾಯ್ಕಿಣಿ ಗೀತರಚನೆ ಹಾಗೂ ಮೋಹನ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಸಿಹಿಕಹಿಚಂದ್ರು, ಸಿಹಿಕಹಿಗೀತಾ, ರಂಗಾಯಣ ರಘು, ಶರಣ್, ದತ್ತಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada