»   »  'ಕೀಚಕ'ನ ರಾಣಿಯಾಗಿ ಕನ್ನಡಕ್ಕೆ ನಯನತಾರಾ

'ಕೀಚಕ'ನ ರಾಣಿಯಾಗಿ ಕನ್ನಡಕ್ಕೆ ನಯನತಾರಾ

Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ನಯನತಾರಾ ಕನ್ನಡಕ್ಕೆ ಬರುತ್ತಿದ್ದಾರೆ. ಈಕೆಯನ್ನು ಕನ್ನಡಕ್ಕೆ ಕರೆತರುತ್ತಿರುವುದು ಕ್ರೇಜಿ ಸ್ಟಾರ್ ರವಿಚಂದ್ರನ್. ಸ್ವತಃ ಅಭಿನಯಿಸುವುದರೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು 'ಕೀಚಕ' ಚಿತ್ರಕ್ಕಾಗಿ ರವಿಚಂದ್ರನ್ ಹೊತ್ತಿರುವುದು ವಿಶೇಷ.

'ಕೀಚಕ'ನಿಗೆ ಇಬ್ಬರು ನಾಯಕಿಯರು. ನಯನತಾರಾ ಜೊತೆಗೆ ಮತ್ತೊಬ್ಬ್ಬ ಹೆಸರಾಂತ ನಟಿ ಜಯಪ್ರದಾ ಸಹಾ ಅಭಿನಯಿಸುತ್ತಿದ್ದಾರೆ. ಕ್ರೇಜಿಸ್ಟಾರ್ ಜತೆ ಜಯಪ್ರದಾ ನಟಿಸುತ್ತಿರುವ ಮೊದಲ ಚಿತ್ರ 'ಕೀಚಕ' ಚಿತ್ರವಾಗಲಿದೆ. ಮುನಿರತ್ನಂ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರವಿ ಅವರದ್ದು ದ್ವಿಪಾತ್ರವಂತೆ. ಏಕಾಂಗಿ ನಂತರ ಅಪ್ಪ ಮಗನಾಗಿ ರವಿ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು.

ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತರುವ ಸಂಪ್ರದಾಯವನ್ನು ಹುಟ್ಟುಹಾಕಿದ್ದೇ ರವಿಚಂದ್ರನ್. ಜ್ಯೂಹಿ ಚಾವ್ಲಾ (ಪ್ರೇಮಲೋಕ), ಖುಷ್ಬು (ರಣಧೀರ), ಪೂನಂ ಧಿಲ್ಲಾನ್(ಯುದ್ಧಕಾಂಡ), ನಮಿತಾ (ನೀಲಕಂಠ, ಹೂ). ಇದೀಗ ಈ ಪಟ್ಟಿಗೆ ಹೊಸದಾಗಿ ನಯನತಾರಾ ಸೇರ್ಪಡೆಯಾಗಿದ್ದಾರೆ.

ಪ್ರಸ್ತುತ 'ಮಂಜಿನ ಹನಿ'ಯಲ್ಲಿ ರವಿಚಂದ್ರನ್ ಮುಳುಗಿದ್ದಾರೆ. ಅಕ್ಟೋಬರ್ 18ರಿಂದ ಕೀಚಕ ಚಿತ್ರೀಕರಣ ಆರಂಭವಾಗಲಿದೆ. ಅಪ್ಪನಿಗೆ ಜೋಡಿ ಜಯಪ್ರದಾ ಅಭಿನಯಿಸುತ್ತಿದ್ದರೆ, ಮಗನೊಂದಿಗೆ ನಯನತಾರಾ ಡ್ಯುಯೆಟ್ ಹಾಡಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...