twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಗೆ ಜಾಮೀನು ಕೊಟ್ಟಿದ್ದು ತಪ್ಪಲ್ವ

    By Mahesh
    |

    Darshan
    'ಹೆಂಡ್ರಿಗೆ ಹೊಡೆಯೋ ಇಂಥ ನನ್ಮಕ್ಕಳಿಗೆ ಯಾಕ್ ಸಾರ್ ಬೇಲ್ ಕೊಡ್ತಾರೆ. ಒಂದಷ್ಟು ವರ್ಷ ಜೈಲಲ್ಲಿ ಇದ್ದಿದ್ದೇ ಆಗ ಹೆಂಡತಿರನ್ನು ಪೀಡಿಸೋರಿಗೆಲ್ಲ ಒಳ್ಳೆ ಪಾಠ ಆಗ್ತಿತ್ತು ....'

    ದರ್ಶನ್ ಗೆ ಷರತ್ತುಬದ್ಧ ಜಾಮೀನು ಸಿಕ್ಕ ಸುದ್ದಿ ಕೇಳಿದ ತಕ್ಷಣ ಬಂದ ಪ್ರತಿಕ್ರಿಯೆ.

    ದರ್ಶನ್ ಮೇಲೆ ಹೊರೆಸಿದ ಆರೋಪಗಳನ್ನು ವಿಜಯನಗರ ಪೊಲೀಸರು ಅಹೋರಾತ್ರಿ ಹಾಕಿದ ಚಾರ್ಜ್ ಶೀಟ್ ನೋಡಿದರೆ ಕನಿಷ್ಠ ಏಳು ವರ್ಷವಾದರೂ ಜೈಲು ಗ್ಯಾರಂಟಿ ಎನ್ನಲಾಗಿತ್ತು.

    ಮುಖ್ಯವಾಗಿ ಕೊಲೆ ಪ್ರಯತ್ನ ಐಪಿಸಿ ಸೆಕ್ಷನ್ 307 ನಿಂದ ದರ್ಶನ್ ಬಚಾವಾಗಿದ್ದಾರೆ. ಇದು ಸಾಮಾನ್ಯ ಕೌಟುಂಬಿಕ ಕಲಹ ಅಷ್ಟೇ, ಕೊಲೆ ಪ್ರಯತ್ನ ನಡೆದಿಲ್ಲ ಎಂದು ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮಿ ಕೋರ್ಟ್ ಗೆ ಸಾರಿದ್ದಾರೆ.

    ಉಳಿದಂತೆ 323(ಹಲ್ಲೆ), 498 ಎ, 506 ನಿಂದ ಬಚಾವಾದರೂ ಗನ್ ಹಿಡಿದು ಪೌರುಷ ತೋರಿಸಿದ್ದ ಚಾಲೆಂಜಿಂಗ್ ಸ್ಟಾರ್ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 27ರ ಆರೋಪದಿಂದ ಬಚಾವಾಗಿದ್ದು ಹೇಗೆ ಎಂಬುದನ್ನು ಪೊಲೀಸರೇ ಹೇಳಬೇಕು.

    ದರ್ಶನ್ ಉಳಿಸಿದ್ದು ಪುತ್ರ ವಿನೀಶ್: ದರ್ಶನ್ ಹಾಗೂ ವಿಜಯಲಕ್ಷ್ಮಿ ಪ್ರಕರಣವನ್ನು ಕೌಟುಂಬಿಕ ಕಲಹ ಎಂದು ಹೈಕೋರ್ಟ್ ನ್ಯಾಯಾಧೀಶ ಬಿವಿ ಪಿಂಟೋ ಪರಿಗಣಿಸಿದ್ದಾರೆ. ದರ್ಶನ್ ಪುತ್ರ ವಿನೀಶ್ ಹೆತ್ತವರ ಆರೈಕೆ ಇಲ್ಲದೆ ಪ್ರತಿದಿನ ಕೊರಗುತ್ತಿರುವುದನ್ನು ನ್ಯಾಯಮೂರ್ತಿಗಳು ಗಮನದಲ್ಲಿಟ್ಟುಕೊಂಡು ದರ್ಶನ್ ಗೆ ಜಾಮೀನು ಮಂಜೂರು ಮಾಡಿದ್ದಾರೆ ಎನ್ನಲಾಗಿದೆ.

    ಅ.13 ರಂದು ದರ್ಶನ್ ದಂಪತಿ ಕೋರ್ಟ್ ಗೆ ಹಾಜರಾಗಿ ತಮ್ಮ ತಪ್ಪೊಪ್ಪಿಗೆ ಹೇಳಿಕೆ ನೀಡಿ, ಮುಚ್ಚಳಿಕೆ ನೀಡುವ ಸಾಧ್ಯತೆಯಿದೆ. ಚಿತ್ರರಂಗದ ಲಾಭ, ಸ್ವಹಿತಾಸಕ್ತಿಯ ಫಲವಾಗಿ 28 ದಿನಗಳ ದರ್ಶನ್ ಜೈಲುಪರ್ವ ಕೊನೆಗೊಂಡಿದೆ. ಪತ್ನಿ ಪೀಡಕರಿಗೆ ಈ ಕೇಸ್ ನಿಂದ ಯಾವುದೇ ಪಾಠ ದೊರೆತಿಲ್ಲವಾದರೂ ದರ್ಶನ್ ಗೆ ಬೇಲ್ ಸಿಕ್ಕಿರುವುದರಿಂದ ನಿರ್ಮಾಪಕರುಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಸೆಲೆಬ್ರಿಟಿ ಜೈಲಿಗೋಗಿ ಬಂದ್ರೆ ಸ್ಟಾರ್ ವ್ಯಾಲ್ಯೂ ಹೆಚ್ಚಾಗುತ್ತಂತೆ ಆದರೆ, ನ್ಯಾಯಾಂಗ ವ್ಯವಸ್ಥೆ ಬದಲಾಗುತ್ತಿದೆಯಂತೆ.. ಎನಿವೇ ದರ್ಶನ್ ಗೆ ಲಕ್ ಚೆನ್ನಾಗಿದೆ.

    English summary
    Wife beating star Darshan finally gets bail.But public responds asking why he is given bail even charge sheeted in arms act. Is court is misguided by lawyers by proving Darshan act as pure domestic violence
    Friday, October 7, 2011, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X