»   » ಗಣೇಶ್ ಚಿತ್ರಕ್ಕೆ ಎರಡು ದೈತ್ಯ ಕಂಪನಿಗಳ ಪ್ರಚಾರ

ಗಣೇಶ್ ಚಿತ್ರಕ್ಕೆ ಎರಡು ದೈತ್ಯ ಕಂಪನಿಗಳ ಪ್ರಚಾರ

Subscribe to Filmibeat Kannada

'ಮಳೆಯಲಿ ಜೊತೆಯಲಿ' ಚಿತ್ರದ ಪ್ರಚಾರಕ್ಕಾಗಿ ಎರಡು ದೈತ್ಯ ಕಂಪನಿಗಳು ಗಣೇಶನ ನೆರವಿಗೆ ಬಂದಿವೆ! ಕೋಕಾ ಕೋಲಾ ಮತ್ತು ರಿಲಯನ್ಸ್ ಕಂಪನಿಗಳು ಒಟ್ಟಿಗೆ ಕೈಜೋಡಿಸಿ 'ಮಳೆಯಲಿ ಜೊತೆಯಲಿ' ಚಿತ್ರದ ಪ್ರಚಾರದಲ್ಲಿ ತೊಡಗಿವೆ. ಈ ಮೂಲಕ ಮಳೆಯಲಿ ಜೊತೆಯಲಿ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ.

ಡಿಸೆಂಬರ್ 11ರಂದು ಗಣೇಶ್, ಅಂಜನಾ ಸುಖಾನಿ ನಟನೆಯ ಮಳೆಯಲಿ ಜೊತೆಯಲಿ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ವಿಷಯ ಗೊತ್ತೆ ಇದೆ. ಬೃಹತ್ ಜಾಹೀರಾತು ಫಲಕಗಳ ಮೂಲಕ ಚಿತ್ರಕ್ಕೆ ರಿಲಯನ್ಸ್ ಮತ್ತು ಕೋಕಾ ಕೋಲಾ ಕಂಪನಿಗಳು ಪ್ರಚಾರ ನೀಡುತ್ತಿವೆ. ಸರಿಸುಮಾರು 150 ಬೃಹತ್ ಜಾಹೀರಾತು ಫಲಕಗಳು ಗರುಡ ಮಾಲ್ ಮತ್ತು ಫೋರಂ ಬಳಿ ರಾರಾಜಿಸಲಿವೆ.

ರಿಲಯನ್ಸ್ ಮೊಬೈನ್ ಫೋನ್ ನ ರಾಯಭಾರಿಯೂ ಆಗಿರುವ ಗಣೇಶ್ ಈ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಎರಡು ದೈತ್ಯ ಕಂಪನಿಗಳು ಚಿತ್ರದ ಪ್ರಚಾರಕ್ಕೆ ಮುಂದೆ ಬಂದಿರುವ ಬಗ್ಗೆ ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...