Don't Miss!
- Finance
ಪಿಜಿಐಎಂ ಎಎಂಸಿ ಸಿಇಒ ಅಜಿತ್ ಮೆನನ್ ಸೇರಿ ನಾಲ್ವರಿಗೆ 36 ಲಕ್ಷ ರೂ. ದಂಡ ವಿಧಿಸಿದ ಸೆಬಿ
- Lifestyle
ಜುಲೈ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
- News
ಮಲೆನಾಡಿನಲ್ಲಿ ಧಾರಾಕಾರ ಮಳೆ: ಮುಳುಗಡೆ ಭೀತಿಯಲ್ಲಿದೆ ಹೆಬ್ಬಾಳೆ ಸೇತುವೆ
- Automobiles
ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ
- Sports
120 ವರ್ಷಗಳಲ್ಲಿ ಇದೇ ಮೊದಲು!: ಸ್ಪೋಟಕ ಶತಕ ಸಿಡಿಸಿ ಪಂತ್ ಮುರಿದ ದಾಖಲೆ ಒಂದೆರಡಲ್ಲ!
- Technology
ಸ್ಯಾಮ್ಸಂಗ್ ಟಿವಿ ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್ ಟೈಂ ಸಿಗೋದಿಲ್ಲ!
- Education
Cochin Shipyard Limited Recruitment 2022 : 330 ವೆಲ್ಡರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಚಿಂಗಾರಿ ಚಿತ್ರದ ಬಗ್ಗೆ ದರ್ಶನ್ ಹೇಳಿದ ಮಾತು
ಎಲ್ಲರೂ ಕಾತರದಿಂದ ಕಾಯುತ್ತಿರುವ ದರ್ಶನ್ ಚಿತ್ರ 'ಚಿಂಗಾರಿ' ಈ ತಿಂಗಳು 27ರಂದು ತೆರೆಗೆ ಬರಲಿದೆ. ದರ್ಶನ್ ಅಭಿಮಾನಿಗಳಿಗಂತೂ ಚಿಂಗಾರಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಸಹಜವಾಗಿದೆ. ಚಿಂಗಾರಿ ಆಡಿಯೋ ಬಿಡುಗಡೆ ವೇಳೆ ಚಿತ್ರದ ನಾಯಕ ದರ್ಶನ್ ಚಿತ್ರದ ಬಗ್ಗೆ ವೇದಿಕೆಯಲ್ಲಿ ಮೊದಲ ಬಾರಿಗೆ ಮಾತನಾಡಿದ್ದಾರೆ.
ತಮ್ಮ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷರಂತೆ ದರ್ಶನ್ ಕೂಡ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. "ಹೊಡೆದಾಟ ಮತ್ತು ಹಾಡುಗಳು ಹದವಾಗಿ ಬೆರೆತ ಚಿತ್ರ 'ಚಿಂಗಾರಿ'ಗೆ ವಿದೇಶಗಳಲ್ಲಿ ಫೈಟ್ ಗಳನ್ನು ನಡೆಸಲಾಗಿದೆ. ಪ್ರತಿಯೊಂದು ಫೈಟ್ಸ್ ಸೂಪರ್ ಆಗಿದೆ. ಸಾಹಸ ಪ್ರಧಾನವಾಗಿರುವ ಇಡೀ ಸಿನಿಮಾ ವಿಶಿಷ್ಠ ಅನುಭವ ನೀಡಲಿದೆ" ಎಂದಿದ್ದಾರೆ.
ಮುಂದುವರಿದ ದರ್ಶನ್ "ಚಿತ್ರ ಎಲ್ಲಾ ವರ್ಗದ ಜನರನ್ನು ತಲುಪುವುದರಲ್ಲಿ ಸಂಶಯವೇ ಇಲ್ಲ. ಸಾಹಸ ಪ್ರಧಾನ ಚಿತ್ರವನ್ನು ಹರ್ಷ ಮೊದಲ ಬಾರಿಗೆ ನಿರ್ದೆಶಿಸಿದ್ದರೂ ನಮ್ಮೆಲ್ಲರ ನಿರೀಕ್ಷೆಯಂತೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಎಲ್ಲರೂ ಸಾಕಷ್ಟು ಪರಿಶ್ರಮ ಪಟ್ಟು ಚಿತ್ರ ಚೆನ್ನಾಗಿ ಬರುವುದಕ್ಕೆ ಕಾರಣರಾಗಿದ್ದಾರೆ" ಎಂದು ಹೇಳುವ ಮೂಲಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದಿನ ಪುಟ ನೋಡಿ...