»   » ಮಾಸ್ಟರ್ ಕಿಶನ್ ರ ಏಕ್ ಚೋಟಿಸಿ ಲವ್ ಸ್ಟೋರಿ

ಮಾಸ್ಟರ್ ಕಿಶನ್ ರ ಏಕ್ ಚೋಟಿಸಿ ಲವ್ ಸ್ಟೋರಿ

Posted By:
Subscribe to Filmibeat Kannada

ಮಾಸ್ಟರ್ ಕಿಶನ್ ಗೆ ಹೊಸ ಗೆಳತಿ ಸಿಕ್ಕಿದ್ದಾಳೆ! ಒಂಭತ್ತನೆ ವರ್ಷಕ್ಕೆ ಆಕ್ಷನ್, ಕಟ್ ಹೇಳಿ ದಾಖಲೆ ನಿರ್ಮಿಸಿದ ಅತ್ಯಂತ ಚಿಕ್ಕ ವಯಸ್ಸಿನ ನಿರ್ದೇಶಕ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾನೆ. ಚಿತ್ರದ ಹೆಸರು '15'. ಆದರೆ ಈ ಚಿತ್ರವನ್ನು ಕಿಶನ್ ನಿರ್ದೇಶಿಸುತ್ತಿಲ್ಲ. ಅವರ ತಂದೆ ಶ್ರೀಕಾಂತ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರದಲ್ಲಿ ಕಿಶನ್ ಮುಖ್ಯಪಾತ್ರವನ್ನು ಪೋಷಿಸಲಿದ್ದಾರೆ.

ಜುಲೈ 5ರಂದು ಮುಹೂರ್ತ ಮುಗಿಸಿಕೊಂಡಿರುವ ಈ ಚಿತ್ರ ಆಗಸ್ಟ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದೆ. ಬೆಂಗಳೂರು ಸೇರಿದಂತೆ ಯುಎಸ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಸಾಲ್ಟ್ ಪೆಪ್ಪರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದ ಬಿಡುಗಡೆ ಹೊತ್ತಿಗೆ ಕಿಶನ್ ಗೆ 15 ವರ್ಷ ತುಂಬುತ್ತದೆ.

ಕಿಶನ್ ಅವನ ತಂಗಿ, ಅಣ್ಣ್ಣ ಹಾಗೂ ಗರ್ಲ್ ಫ್ರೆಂಡ್ ಸುತ್ತ ಕತೆ ಸುತ್ತುತ್ತದೆ. ಇದೊಂದು ಹದಿಹರೆಯ ಪ್ರೇಮ ಚಿತ್ರ. ಭಾರತದಲ್ಲೇ ಮೊದಲ ಬಾರಿಗೆ ನಿರ್ಮಿಸುತ್ತಿರುವ ಹೊಸ ಬಗೆಯ ಚಿತ್ರವಿದು. ಕಿಶನ್ ರ ಗೆಳತಿಯಾಗಿ ಮುಂಬೈ ಮೂಲದ ರುಷಿತಾ ಕಾಣಿಸಲಿದ್ದಾರೆ. ಏಳು ಹಿಂದಿ ಚಿತ್ರಗಳು ಹಾಗೂ 90ಕ್ಕೂ ಅಧಿಕ ಜಾಹೀರಾಗುತಳಲ್ಲಿ ನಟಿಸಿದ ಅನುಭವ ರುಷಿಕಾರದ್ದು.

ಸದ್ಯಕ್ಕೆ ಹತ್ತನೇ ತರಗತಿಯಲ್ಲಿ ರುಷಿಕಾ ಓದುತ್ತಿದ್ದಾರೆ. ಚಿತ್ರದಲ್ಲಿ ಕಿಶನ್ ತನ್ನ ಗೆಳತಿಯ ಜೊತೆ ಡ್ಯುಯೆಟ್ ಹಾಡುತ್ತಾ ಪ್ರೇಮದಲ್ಲಿ ಬೀಳುವ ಸನ್ನಿವೇಶಗಳನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು. ಸಿದ್ದಾರ್ಥ ವಿಪಿನ್ ಅವರ ಸಂಗೀತ ಎಸ್ ಕುಮಾರನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X