For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ಕೊನೆಯ ದಿನ ನಯನ'ಧಾರಾ'ಕಾರ

  By Rajendra
  |

  ದಕ್ಷಿಣದ ಬೆಡಗಿ ನಯನತಾರಾ ಚಿತ್ರರಂಗಕ್ಕೆ ಗುಡ್ ಬೈ ಹೇಳಿಯಾಗಿದೆ. ತೆಲುಗಿನಲ್ಲಿ ಆಕೆ ಅಭಿನಯಿಸುತ್ತಿರುವ ಶ್ರೀರಾಮ ರಾಜ್ಯಂ ಚಿತ್ರವೇ ಅಂತಿಮ. ಇದಾದ ಬಳಿಕ ನಯನತಾರಾ ಬಣ್ಣಹಚ್ಚುವುದಿಲ್ಲ ಎಂದು ಘೋಷಿಸಿದ್ದಾರೆ. ಇತ್ತೀಚೆಗೆ ಶ್ರೀರಾಮರಾಜ್ಯಂ ಚಿತ್ರೀಕರಣ ಮುಕ್ತಾಯವಾಯಿತು.

  ಕೊನೆಯ ದಿನದ ಚಿತ್ರೀಕರಣದಲ್ಲಿ ನಯನತಾರಾ ಕೂಡ ಭಾಗಿಯಾಗಿದ್ದರು. ಸೆಟ್ಸ್‌ನಲ್ಲಿ ಭಾವೋದ್ರೇಕಕ್ಕೆ ಒಳಗಾದ ನಯನತಾರಾ ಅವರಿಗೆ ಮತ್ತೊಮ್ಮೆ ಕಣ್ಣೀರು ಕಟ್ಟೆಯೊಡೆಯಿತು. ಆಕೆ ಬಿಕ್ಕಿಬಿಕ್ಕಿ ಅತ್ತು ತಮ್ಮ ದುಃಖ ಕಡಿಮೆ ಮಾಡಿಕೊಂಡರು. ಚಿತ್ರತಂಡ ಆಕೆಗೆ ಹೂವಿನ ಮಳೆಗರೆದು ಬೀಳ್ಕೊಟ್ಟು ಕಳುಹಿಸಿದೆ.

  ತನ್ನ ಮೇಲೆ ತೋರಿದ ಅಭಿಮಾನಕ್ಕೆ ನಯನತಾರಾ ತುಂಬಾ ಭಾವುಕರಾಗಿ ಕುಸಿದು ಬಿದ್ದಿದ್ದಾರೆ. ಬಳಿಕ ಆಕೆ ಸಾವರಿಸಿಕೊಂಡು ಚಿತ್ರ ತಂಡದಲ್ಲಿದ್ದ 150 ಮಂದಿಗೂ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೇಕಪ್ ಮ್ಯಾನ್‌ಗಂತೂ ಚಿನ್ನದ ಉಂಗುರವನ್ನೇ ಕಾಣಿಕೆಯಾಗಿ ನೀಡಿದ್ದಾರೆ. (ಏಜೆನ್ಸೀಸ್)

  English summary
  Actress Nayantara is all set to quit films! She recently completed shooting for her Telugu film Sri Rama Rajyam. On the last day of the shoot, she got emotional on the sets. The unit members showered flowers on the actress to express their gratitude.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X