»   » ಮದನ್‌ಗೆ ನಿತ್ಯಾನಂದ ರು.2 ಕೋಟಿ ಲಂಚದ ಆಮಿಷ

ಮದನ್‌ಗೆ ನಿತ್ಯಾನಂದ ರು.2 ಕೋಟಿ ಲಂಚದ ಆಮಿಷ

Posted By:
Subscribe to Filmibeat Kannada
Mandan Patel
ಕನ್ನಡದ 'ಸತ್ಯಾನಂದ' ಚಿತ್ರದ ವಿವಾದ ದಿನದಿಂದ ದಿನಕ್ಕೆ ಹೊಸಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಮುಖ್ಯಸ್ಥ ಕೆ ನಾಗರಾಜ್ ಅವರೊಂದಿಗೆ ಚಿತ್ರದ ನಿರ್ಮಾಪಕ ಮದನ್ ಪಟೇಲ್ ಈಗಾಗಲೆ ಶರಂಪರ ಕಿತ್ತಾಡಿದ್ದಾರೆ. ಸ್ವಾಮಿ ಸತ್ಯಾನಂದ ವಿರುದ್ಧ ಈಗ ಮತ್ತೊಂದು ಆರೋಪವನ್ನು ಮದನ್ ಪಟೇಲ್ ಮಾಡಿದ್ದಾರೆ.

'ಸತ್ಯಾನಂದ' ಚಿತ್ರವನ್ನು ನಿಲ್ಲಿಸುವಂತೆ ತಮಗೆ ಸ್ವಾಮಿ ನಿತ್ಯಾನಂದ ಲಂಚದ ಆಮಿಷ ಒಡ್ಡಿದ್ದಾರೆ ಎಂಬ ಗುರುತರ ಆರೋಪವನ್ನು ಮದನ್ ಪಟೇಲ್ ಹೊರಿಸಿದ್ದಾರೆ. 'ಸತ್ಯಾನಂದ' ಚಿತ್ರೀಕರಣ ಆರಂಭಿಸಿದಾಗ ಚಿತ್ರವನ್ನು ನಿಲ್ಲಿಸುವಂತೆ ಸ್ವಾಮಿ ನಿತ್ಯಾನಂದ ನನಗೆ ರು.2 ಕೋಟಿ ಆಮಿಷ ಒಡ್ಡಿದ್ದರು. ಆದರೆ ಆ ಲಂಚವನ್ನು ನಾನು ಎಡಗೈನಲ್ಲೂ ಮುಟ್ಟಲಿಲ್ಲ.

ಹಾಗಿರುವಾಗ ಸೆನ್ಸಾರ್ ಮಂಡಳಿಗೆ ನಾನೇಕೆ ಲಂಚ ನೀಡಲಿ ಎಂದಿದ್ದಾರೆ ಮದನ್. ಸತ್ಯಾನಂದ ಚಿತ್ರದ ಸೆನ್ಸಾರ್‌ಗಾಗಿ ಸೆನ್ಸಾರ್ ಮಂಡಳಿ ರು.5 ಲಕ್ಷ ಲಂಚ ಕೇಳಿತ್ತು ಎಂದು ಮದನ್ ಈ ಹಿಂದೆ ಆರೋಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಮದನ್ ಪಟೇಲ್ ವಿರುದ್ಧ ಸೆನ್ಸಾರ್ ಮಖ್ಯಸ್ಥ ಕೆ ನಾಗರಾಜ್ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದು ಗೊತ್ತೇ ಇದೆ. (ಏಜೆನ್ಸೀಸ್)

English summary
Kannada film Producer Madan Patel alleges that Swami Nityananda was offered money to stop making the film Satyananda. Nityananda offered 2 crore to stop making it alleges Madan
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada