»   » ಹನಿ ಹನಿ ಪ್ರೇಮ್ ಕಹಾನಿ ಹುಡುಗಿಯ ಹುಟ್ಟುಹಬ್ಬ ಇಂದು

ಹನಿ ಹನಿ ಪ್ರೇಮ್ ಕಹಾನಿ ಹುಡುಗಿಯ ಹುಟ್ಟುಹಬ್ಬ ಇಂದು

Posted By: Super Admin
Subscribe to Filmibeat Kannada
Actress Pooja Gandhi
ಬೆಂಗಳೂರು, ಅ.7 : ಪೂಜಾಗಾಂಧಿಗೆ ಭಾನುವಾರ (ಅ.7) ಹುಟ್ಟು ಹಬ್ಬದ ಸಂಭ್ರಮ. 'ಮುಂಗಾರು ಮಳೆ" ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಪೂಜಾಗೆ ಇಂದು ಎಲ್ಲಿಲ್ಲದ ಸಂಭ್ರಮ.

ಮುಂಬೈ ಮೂಲದ ಹುಡುಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ವರ್ಷವಾಯಿತು. ಈಗ ಕನ್ನಡದಲ್ಲಿ ಹರಳು ಹುರಿದಂತೆ ಪಟಪಟನೆ ಮಾತನಾಡುತ್ತಾಳೆ. ಅಷ್ಟೇ ಅಲ್ಲ ತನ್ನ ಅಭಿಮಾನಿಗಳಿಗೆ ಕನ್ನಡದಲ್ಲೇ ಆಟೋಗ್ರಾಫ್ ಹಾಕುವಷ್ಟು ಚತುರೆ. ಹಾಗಾಗಿ ಈಕೆ ಈಗ ಕನ್ನಡತಿ.

ಮುಂಗಾರು ಮಳೆಯ ಹನಿ ಹನಿ ಪ್ರೇಮ್ ಕಹಾನಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ಕಿಂಚಿತ್ತೂ ಅಹಂ ಇಲ್ಲದ ಪೂಜಾ, ಸಿನಿಮಾದಲ್ಲಿ ಯಶಸ್ಸು ಅನ್ನುವುದು ಇಂದು ಇರುತ್ತೆ ನಾಳೆ ಹೋಗುತ್ತೆ. ಆದರೆ ಗೆಳೆತನ ಎನ್ನುವುದೇ ಶಾಶ್ವತ ಎನ್ನುತ್ತಾಳೆ. ಈಕೆಗೆ ಗೆಳಯರೆಂದರೆ ಪ್ರಾಣ. ಅವರ ಮಧ್ಯೆ ಇಂದು ಆಕೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಿದ್ದಾಳೆ.

ಮುಂಗಾರು ಮಳೆಯ ನಂತರ 'ಮನ್ಮಥ", 'ಮಿಲನ" ಚಿತ್ರಗಳಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದರೂ ಜನಮೆಚ್ಚುಗೆಯನ್ನು ಗಳಿಸಿದಳು ಪೂಜಾ. ಸದ್ಯಕ್ಕೆ ಗಣೇಶ್ ಜೊತೆ ನಟಿಸಿರುವ 'ಕೃಷ್ಣ" ಚಿತ್ರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಕನ್ನಡ ಚಿತ್ರರಂಗ ತನ್ನನ್ನು ಬೆಳಸಿದೆ. ಪ್ರೇಕ್ಷಕರು ನನ್ನ ನಟನೆಯನ್ನು ಮೆಚ್ಚಿದ್ದಾರೆ. ನಾನು ಕನ್ನಡಿಗರನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ತಮ್ಮ ಮನದಾಳದ ಪ್ರೀತಿಯನ್ನು  ವ್ಯಕ್ತಪಡಿಸಿದ್ದಾರೆ.

(ದಟ್ಸ್‌‍ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada