»   » ಡಾ.ರಾಜ್ ನುಡಿಮುತ್ತು; ಓದಿ ಒಂದತ್ತು!

ಡಾ.ರಾಜ್ ನುಡಿಮುತ್ತು; ಓದಿ ಒಂದತ್ತು!

Posted By:
Subscribe to Filmibeat Kannada


1. ನನ್ನಿಂದ ಜನರಿಗೆ ಆಗಲಿ, ಜಗತ್ತಿಗೆ ಆಗಲಿ ಯಾವುದೂ ಪ್ರಯೋಜನವಾಗಿಲ್ಲ. ಎಲ್ಲರಿಂದ ನನಗೆ ಮಾರ್ಗ ದೊರೆತಿದೆ.

2. ಇತರರಿಗೆ ಮಾರ್ಗದರ್ಶನ ಮಾಡುವುದು ಸುಲಭ. ಆದರೆ ನಾವೇ ಹೊಸ ಮಾರ್ಗ ಹುಡುಕುವುದು ಕಷ್ಟ.

3. ದೇವರನ್ನು ನಾವು ದೇವಸ್ಥಾನದಲ್ಲಿ ಹುಡುಕುವ ಮೊದಲು ನಮ್ಮಲ್ಲಿಯೇ ಕಾಣಬೇಕು.

4. ಯೋಚಿಸಿ ನೋಡಿ, ನಮ್ಮ ಬದುಕಿನ ಸಾರ್ಥಕತೆ ಬೇರೆಲ್ಲೋ ಇದೆ. ಖಂಡಿತವಾಗಿ ಬಿರುದು ಪ್ರಶಸ್ತಿಗಳಲ್ಲಲ್ಲ.

5. ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು.

6. ಅನುಮಾನವೇ ಇಲ್ಲ. ಒಂದು ವೇಳೆ ನಾನು ನಟ ಆಗದಿದ್ದರೇ ನನ್ನೂರಿನ ಹೊಲ ಊಳುತ್ತಾ ರೈತನಾಗಿರುತ್ತಿದ್ದೆ.

7. ನಾನು ಪ್ರತಿದಿನವೂ ಏನನ್ನಾದರೂ ಮರೆತಿರಬಹುದು.. ಆದರೆ ನನ್ನ ಅಪ್ಪಾಜಿಯ ನೆನೆಯದಿದೇ ಇರುವ ದಿನವಿಲ್ಲ.

8. ಯಾವುದೇ ಸಾಧನೆ ನನ್ನಿಂದ ಆಗಿದೆ ಎಂದು ಹೇಳಿದರೆ ನಾನೆಂದೂ ಅದನ್ನು ನಾನು ಮಾಡಿದ್ದು ಅನ್ನುವುದಿಲ್ಲ.

9. ಒಳ್ಳೆತನ ಅನ್ನೋದನ್ನು ಮನುಷ್ಯ ಬುದ್ಧಿ ತಿಳಿದಾಗಿನಿಂದ ಸಾಯೋವರೆಗೂ ಕಲೀತಾನೇ ಇರಬೇಕು.

10. ಮಾನವೀಯತೆಯ ಪ್ರಯೋಗಶಾಲೆಯಲ್ಲಿ ಯಾರು ತೇರ್ಗಡೆಯಾಗುವರೋ ಅವರೇ ನಿಜವಾದು ಮನುಷ್ಯರು.

('ದಂತಕತೆಯಾದ ರಾಜ್ ಕುಮಾರ್'ಪುಸ್ತಕದಿಂದ ಆಯ್ದದ್ದು)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada