»   » ಗೋಲ್ಡನ್ ಸ್ಟಾರ್ ಕೂಲ್ ಚಿತ್ರಕ್ಕೆ ಮುಂಬೈ ಗೊಂಬೆ

ಗೋಲ್ಡನ್ ಸ್ಟಾರ್ ಕೂಲ್ ಚಿತ್ರಕ್ಕೆ ಮುಂಬೈ ಗೊಂಬೆ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹೊಸ ಚಿತ್ರ 'ಕೂಲ್'ಗೆ ಹೊಸ ಹುಡುಗಿಯನ್ನು ಹುಡುಕಿದ್ದಾರೆ. ಹೆಸರು ಅಮನ್ ಶರೀಫ್. ಕಿರುತೆರೆಯಲ್ಲಿ ಈಗಾಗಲೆ ಸಾಕಷ್ಟು ಹೆಸರು ಮಾಡಿರುವ ಈ ಬೆಡಗಿ ಹಿಂದಿಯ 'ಆಲೂ ಚಾಟ್' ಹಾಗೂ 'ಆವೋ ವಿಶ್ ಕರೇ' ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ಮುಂಬೈ ಗೊಂಬೆ ಪಡ್ಡೆಗಳ ನಿದ್ದೆಗೆಡಿಸಲು ಕೂಲಾಗಿ ಕನ್ನಡಕ್ಕೆ ಬರುತ್ತಿದ್ದಾರೆ.

'ಸಖತ್ ಹಾಟ್ ಮಗಾ' ಎಂಬುದು ಕೂಲ್ ಚಿತ್ರದ ಅಡಿಬರಹ. ಕಿರುತೆರೆಯ 'ಕಹಿಂ ತೋ ಹೋಗಾ' ಎಂಬ ಧಾರಾವಾಹಿಯ ಕಶಿಷ್ ಪಾತ್ರದ ಮೂಲಕ ಅಮ್ನಾ ಹೆಚ್ಚು ಜನಪ್ರಿಯವಾಗಿದ್ದರು. ಕೆಲವು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿಯೂ ಅಮ್ನಾ ಕಾಣಿಸಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಜೂನ್ 21ರಂದು ಚಿತ್ರದ ಮುಹೂರ್ತ ನೆರವೇರಲಿದ್ದು ಮುಸ್ಸಂಜೆ ಮಹೇಶ್ ಆಕ್ಷನ್, ಕಟ್ ಹೇಳಲಿದ್ದಾರೆ. ಕೂಲ್ ಚಿತ್ರದ ಒನ್ ಲೈನ್ ಕತೆ ಕಾಲೇಜ್ ಲವ್ ಸ್ಟೋರಿ. ಶರಣ್, ರಂಗಾಯಣ ರಘು ಹಾಗೂ ಸಾಧು ಕೋಕಿಲ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

ಬೆಂಗಳೂರು, ಮೈಸೂರು ಹಾಗೂ ಊಟಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಹರಿಕೃಷ್ಣ ಅವರ ಸಂಗೀತ ರತ್ನವೇಲು ಅವರ ಛಾಯಾಗ್ರಾಹಣ ಕೂಲ್ ಚಿತ್ರಕ್ಕಿರುತ್ತದೆ. ಇನ್ನೊಂದಿಷ್ಟು ಹೊಸ ಮುಖಗಳಿಗಾಗಿ ಗಣೇಶ್ ಹುಡುಕಾಟ ನಡೆಸಿದ್ದಾರೆ. ಮಳೆಯಲಿ ಜೊತೆಯಲಿ ಬಳಿಕ ಗಣೇಶ್ ಕೂಲಾಗಿ ಮತ್ತೊಬ್ಬ ಬಾಲಿವುಡ್ ಬೆಡಗಿಗೆ ಬಲೆ ಬೀಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada