»   » 'ಖಾಕಿ ಖದರ್'ಗೆ ಶರಣಾದ ಗ್ಲಾಮರ್ ರಾಣಿ ರಾಗಿಣಿ

'ಖಾಕಿ ಖದರ್'ಗೆ ಶರಣಾದ ಗ್ಲಾಮರ್ ರಾಣಿ ರಾಗಿಣಿ

Posted By:
Subscribe to Filmibeat Kannada
<ul id="pagination-digg"><li class="next"><a href="/news/08-ragini-dwivedi-acts-movie-police-khadar-anand-p-raju-aid0172.html">Next »</a></li></ul>

ರಾಗಿಣಿ ದ್ವಿವೇದಿ ಗ್ಲಾಮರ್ ಪಾತ್ರಗಳಿಗೇ ಮೀಸಲು ಎಂದು ಖ್ಯಾತರಾದ ನಟಿ. ಈಗ ಕನ್ನಡದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು. ಗ್ಲಾಮರ್ ಗೊಂಬೆ ರಾಗಿಣಿ ಇದೀಗ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲು ಹೊರಟಿದ್ದಾರೆ. ನಟಿಸಲಿರುವ ಚಿತ್ರ ಖದರ್ ಪೊಲೀಸ್. ನಾಯಕನಿಲ್ಲದ ಈ ಚಿತ್ರದಲ್ಲಿ ರಾಗಿಣಿಗೆ ನಾಯಕನಿಲ್ಲ. ಸೋ, ಡಾನ್ಸ್ ಇಲ್ಲ, ರೊಮಾನ್ಸ್ ಇಲ್ಲವೇ ಇಲ್ಲ.

ರಾಗಿಣಿ ಮತ್ತೊಬ್ಬಳು ಮಾಲಾಶ್ರೀ ಆಗಲು ಹೊರಟಿದ್ದಾರೇನು ಅಂತ ನೀವು ಪ್ರಶ್ನಿಸಿದರೆ ಹೌದು ಅಂತ ಹೇಳಬಹುದು. ಮಾಲಾಶ್ರೀ ಖಾಕಿ ತೊಡುವ ಮೊದಲು ಆಕ್ಷನ್ ಬೇಸ್ಡ್ ಹಾಗೂ ಹಠಮಾರಿ ಪಾತ್ರಗಳಲ್ಲಿ ಸಖತ್ ಮಿಂಚಿದ್ದರು. ಮಾಲಾಶ್ರೀ ಚಿತ್ರಗಳಲ್ಲಿ ನಾಯಕನಿಗೆ ಕೆಲಸವೂ ಇರಲಿಲ್ಲ, ಮಹತ್ವವೂ ಇರಲಿಲ್ಲ.

ಆದರೆ ರಾಗಿಣಿ ವಿಷಯ ಹಾಗೇನಿಲ್ಲ. ಆಕೆ ಕೇವಲ ಗ್ಲಾಮರಸ್ ಪಾತ್ರಗಳನ್ನು ಮಾಡಿಕೊಂಡು ಬಂದವರು. ಒಂದೇ ಒಂದು ನಾಯಕಿ ಪ್ರಧಾನ ಪಾತ್ರವನ್ನು ಪೋಷಿಸಿದವರಲ್ಲ. ರಾಗಿಣಿಯನ್ನು ಪೊಲೀಸ್ ಪಾತ್ರದಲ್ಲಿ ಕಲ್ಪಿಸಿಕೊಂಡರೇ ನಗು ಬರುತ್ತದೆ ಎಂದು ಪ್ರೇಕ್ಷಕ ಮಹಾಶಯರು ಹೇಳಿದರು ಯಾರೂ ನಗಬೇಕಿಲ್ಲ. ರಾಗಿಣಿಯ ಖದರ್ ನೋಡಿ ಪ್ರೇಕ್ಷಕರು ಮೂರ್ಛೆ ಹೋಗದಿದ್ದರೆ ಸಾಕು.

ಆದರೆ ಸ್ವತಃ ರಾಗಿಣಿ ಬದಲಾವಣೆ ಬಯಸಿದಂತಿದೆ. ಕೊಬ್ರಿ ಮಂಜು ನಿರ್ಮಾಣ ಹಾಗೂ ಆಕ್ಷನ್ ಚಿತ್ರಗಳ ಸರದಾರ ಆನಂದ್ ಪಿ. ರಾಜು ನಿರ್ದೇಶನದ 'ಖದರ್ ಪೊಲೀಸ್' ಚಿತ್ರದಲ್ಲಿ ಲೇಡಿ ಟೈಗರ್ ಆಗಲಿದ್ದಾರೆ ರಾಗಿಣಿ. ಗುತ್ತಿರುವ ಯಾರನ್ನೂ ಲೆಕ್ಕಿಸದ, ದೀನ-ದಲಿತರಿಗೆ ನ್ಯಾಯ ಒದಗಿಸುವ, ಪ್ರಾಣವನ್ನೂ ಲೆಕ್ಕಿಸದೆ ಶತ್ರುಗಳನ್ನು ಸದೆ ಬಡಿಯುವ ದಕ್ಷ ಪೊಲೀಸ್ ಅಧಿಕಾರಿ ರಾಗಿಣಿಯದು. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/08-ragini-dwivedi-acts-movie-police-khadar-anand-p-raju-aid0172.html">Next »</a></li></ul>

English summary
Actress Ragini Dwivedi acts in police role in the movie Khadar Police. Director Anand P Raju directs this movie in Kobri Manju Production. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X