»   » ಚಿತ್ರನಟಿ ರಮ್ಯಾಗೆ ಲಾರಿ ಡಿಕ್ಕಿ; ಆಸ್ಪತ್ರೆಗೆ ದಾಖಲು!

ಚಿತ್ರನಟಿ ರಮ್ಯಾಗೆ ಲಾರಿ ಡಿಕ್ಕಿ; ಆಸ್ಪತ್ರೆಗೆ ದಾಖಲು!

Posted By:
Subscribe to Filmibeat Kannada

ಲಕ್ಕಿ ಸ್ಟಾರ್ ರಮ್ಯಾ ಅವರಿಗೆ ಅಪಘಾತವಾಗಿದೆಯಂತೆ. ಹಾಗಂತ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಆಘಾತಕಾರಿ ಸುದ್ದಿಯಿಂದ ಆಕೆಯ ಹಿಂಬಾಲಕರು ದಂಗಾಗಿ ಹೋಗಿದ್ದಾರೆ. ರಮ್ಯಾ ಅವರ ಈ ಸಂದೇಶ ಅವರ ಅಪಾರ ಅಭಿಮಾನಿ ಬಳಗವನ್ನು ದಿಗ್ಭ್ರಮೆಗೊಳಿಸಿದೆ.

ಚಿರಂಜೀವಿ ಸರ್ಜಾ ಜೊತೆ 'ದಂಡಂ ದಶಗುಣಂ' ಚಿತ್ರದಲ್ಲಿ ಅಭಿನಯಿಸುತ್ತಿರಬೇಕಾದರೆ ಈ ಅಪಘಾತ ನಡೆದಿದೆಯೇ? ಎಂಬ ಅನುಮಾನ ಸಹ ವ್ಯಕ್ತವಾಗಿದೆ. "Morning! In the hospital! Admitted for head injury..hit by a lorry yesterday. So much drama in my life. Play so many roles.. Very filmy!" ಎಂದು ಟ್ವೀಟ್ ಮಾಡುವ ಮೂಲಕ ರಮ್ಯಾ ಸಂಚಲನ ಸೃಷ್ಟಿಸಿದ್ದಾರೆ.

ಆದರೆ ಇದು ಚಿತ್ರೀಕರಣದಲ್ಲಿ ಆದ ಅಪಘಾತವೋ ಅಥವಾ ತೆರೆಯ ಮೇಲಿನ ಕಥೆಯೋ ಗೊತ್ತಿಲ್ಲ. ರಮ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ನಾಟ್ ರೀಚಬಲ್! ಒಟ್ಟಿನಲ್ಲಿ ರಮ್ಯಾ ಈ ರೀತಿ ಟ್ವೀಟ್ ಮಾಡಿ ಗುಲ್ಲೆಬ್ಬಿಸಿದ್ದಾರೆ. ರಮ್ಯಾ ಕ್ಷೇಮವಾಗಿದ್ದರೆ ಅಷ್ಟೇ ಸಾಕು ಎಂಬುದು ನಮ್ಮ ಹಾರೈಕೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada