»   » ಕನ್ನಡಕ್ಕೆ ಬೆಳದಿಂಗಳ ಬಾಲೆ ಶ್ರಿಯಾ ಸರನ್

ಕನ್ನಡಕ್ಕೆ ಬೆಳದಿಂಗಳ ಬಾಲೆ ಶ್ರಿಯಾ ಸರನ್

Posted By:
Subscribe to Filmibeat Kannada

ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚುತ್ತಿರುವ ಶ್ರಿಯಾ ಸರನ್ ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ಅರಸು' ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸಿದ್ದರು ಶ್ರಿಯಾ. ಈಗ ಆಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.

Actress Shriya Saran

ರೂಪಾ ಅಯ್ಯರ್ ಕೈಗೆತ್ತಿಕೊಂಡಿರುವ 'ಚಂದ್ರ' ಚಿತ್ರಕ್ಕೆ ಮೊದಲು ಗೋಲ್ಡನ್ ಗರ್ಲ್ ರಮ್ಯಾರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ರಮ್ಯಾ ಚಿತ್ರದಿಂದ ಹೊರಬಿದಿದ್ದರು. ಈಗ ಶ್ರಿಯಾರನ್ನು ಕರೆತರುವ ಬಗ್ಗೆ ರೂಪಾ ಅಯ್ಯರ್ ಮುಂದಾಗಿದ್ದಾರೆ.

"ಮೇ 10ರಂದು ಚಿತ್ರದ ನಾಯಕಿ ಯಾರು ಎಂಬುದನ್ನು ಪ್ರಕಟಿಸುತ್ತೇನೆ. ಈಗಾಗಲೆ ನಯನತಾರಾ, ಅಮಲಾ ಪೌಲ್, ದಿಯಾ ಮಿರ್ಜಾ ಹಾಗೂ ಶ್ರಿಯಾ ಜೊತೆ ಮಾಡನಾಡಿದ್ದೇನೆ" ಎಂದಿದ್ದಾರೆ ರೂಪಾ. ಆದರೆ ಶ್ರಿಯಾ ಚಿತ್ರಕ್ಕೆ ಸಹಿ ಹಾಕುವುದೊಂದು ಬಾಕಿ ಇದೆ.

'ಚಂದ್ರ' ಚಿತ್ರ ದ್ವಿಭಾಷಾ ಚಿತ್ರವಾಗಿದ್ದು ತಮಿಳಿನಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹಾಗಾಗಿ ಎರಡೂ ಭಾಷೆಗಳಿಗೆ ಒಪ್ಪುವ ನಾಯಕಿಯನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿದೆಯಂತೆ. ಚಿತ್ರದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್. ಈ ಚಿತ್ರದಲ್ಲಿ ರಮ್ಯಾ ಕೃಷ್ಣ ಹಾಗೂ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. (ಏಜೆನ್ಸೀಸ್)

English summary
Sources says that Roopa Iyer has managed to rope in Shriya Saran of Shivaji fame to play the love interest of lead Lovely Star Prem in the film Chandra. And as for Shriya, if she does sign on the dotted line, this will be her first full fledged role in a Kannada film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada