Just In
Don't Miss!
- Sports
ಸ್ಫೋಟಕ ಅರ್ಧ ಶತಕ ಚಚ್ಚಿದ ಫ್ಲೆಚರ್ ಬಿಗಿದಪ್ಪಿದ ಮ್ಯಾಕ್ಸ್ವೆಲ್: ವಿಡಿಯೋ
- News
ಬೈಡನ್ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Education
KIOCL Recruitment 2021: ಆಫೀಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಭಾರತಿ ವಿಷ್ಣುವರ್ಧನ್
ಹಾಗೆಯೇ ಚಲನಚಿತ್ರ ನಿರ್ದೇಶಕರಾದ ಮಹೇಂದ್ರ , ರಂಗಕರ್ಮಿ ಕಾಸರಗೋಡು ಚಿನ್ನ, ನಿರ್ದೇಶಕರಾದಎಂ.ಎಸ್. ರಾಜಶೇಖರ್, ಸಂಗೀತ ನಿರ್ದೇಶಕರಾದ ರಾಜನ್(ನಾಗೇಂದ್ರ) ಹಾಗೂ ಕಲಾವಿದರಾದ ಲೋಹಿತಾಶ್ವ, ಸಾಹಿತಿ ಬೋಳುವಾರು ಮಹಮ್ಮದ್ ಕುಂಞ್, ಪತ್ರಕರ್ತ ಚ.ಹ. ರಘುನಾಥ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸದಸ್ಯ ಕಾರ್ಯದರ್ಶಿಗಳಾಗಿ ನಿರ್ದೇಶಕರು ವಾರ್ತಾ ಇಲಾಖೆ ಇವರನ್ನು ನೇಮಕಗೊಳಿಸಿ ಸಲಹಾ ಸಮಿತಿ ರಚಿಸಲಾಗಿದೆ. 2008-09ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ಜನಪ್ರಿಯ ಚಲನಚಿತ್ರ ನಿರ್ದೇಶಕ ಎಚ್ ಆರ್ ಭಾರ್ಗವ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಲನಚಿತ್ರ ಸಹಾಯಧನಕ್ಕಾಗಿ ಆಯ್ಕೆ ಸಮಿತಿ ರಚನೆ
2009-10 ನೇ ಸಾಲಿನ ಅರ್ಹ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಸಹಾಯಧನಕ್ಕಾಗಿ ಆಯ್ಕೆ ಮಾಡಲು ಈ ಕೆಳಕಂಡಂತೆ ಆಯ್ಕೆ ಸಲಹಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿರ್ಮಾಪಕರಾದ ಕೆ.ಸಿ.ಎನ್. ಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸದಸ್ಯರಾಗಿ ಹಿರಿಯ ಕಲಾವಿದರಾದ ಜಯಂತಿ, ಶ್ರೀಧರ್, ರಾಮಕೃಷ್ಣ ಸಾಹಿತಿಗಳಾದ ಬಿ.ಆರ್. ಲಕ್ಷಣರಾವ್, ಬಾಬು ಕೃಷ್ಣಮೂರ್ತಿ, ಭಾರತೀಯ ಚಲನಚಿತ್ರ ಸಮಾಜದ ಮಹಾ ಅಧ್ಯಕ್ಷರಾದ ಹೆಚ್. ಎನ್. ನರಹರಿರಾವ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿಗಳಾಗಿ ನಿರ್ದೇಶಕರು, ವಾರ್ತಾ ಇಲಾಖೆ ಇವರನ್ನು ನೇಮಕಗೊಳಿಸಿ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.