»   » 'ಸಿನಿಮಾ ಯಾನ' ಕನ್ನಡ ಚಿತ್ರರಂದ ಫ್ಲಾಷ್ ಬ್ಯಾಕ್

'ಸಿನಿಮಾ ಯಾನ' ಕನ್ನಡ ಚಿತ್ರರಂದ ಫ್ಲಾಷ್ ಬ್ಯಾಕ್

Subscribe to Filmibeat Kannada
ಡಾ.ಕೆ. ಪುಟ್ಟಸ್ವಾಮಿ ರಚಿಸಿರುವ 'ಸಿನಿಮಾ ಯಾನ'(ಕನ್ನಡ ಚಿತ್ರರಂಗ 75-ಒಂದು ಫ್ಲಾಷ್ ಬ್ಯಾಕ್) ಕೃತಿ ಶನಿವಾರ (ಜನವರಿ 9) ಬಿಡುಗಡೆಯಾಗಲಿದೆ. ಈ ಅಮೂಲ್ಯ ಕೃತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದಯ್ಯ ಬಿಡುಗಡೆ ಮಾಡಲಿದ್ದಾರೆ.

ಪುಸ್ತಕ ಕುರಿತು ಪ್ರೊ.ಕಿ.ರಂ.ನಾಗರಾಜು ಹಾಗೂ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಹಾಗೂ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಡಾ.ಜಯಮಾಲಾ ಅವರು ವಹಿಸಲಿದ್ದಾರೆ. ಈ ಪುಸ್ತಕವನ್ನು ಹಸಿರು ಪ್ರಕಾಶನ ಹೊರತಂದಿದೆ. ಹಸಿರು ಪ್ರಕಾಶನದ ದೂರವಾಣಿ ಸಂಖ್ಯೆಗಳು: 98456 30109, 94499 87678.

ಸಮಯ: ಬೆಳಗ್ಗೆ 10.30 ಗಂಟೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ, ಬೆಂಗಳೂರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada