Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರ ನಿರ್ಮಾಪಕ ಬಿ ಕೆ ಶ್ರೀನಿವಾಸ್ ಸಾಹಿತ್ಯ ಲೋಕಕ್ಕೆ
ಮನುಷ್ಯನ ಜೀವನದಲ್ಲಿ ನಂಬಿಕೆಯೆಂಬುದು ಬಹಳ ಮುಖ್ಯ. ಆ ನಂಬಿಕೆಯಿಂದಲೇ ಮಾನವ ಜೀವನ ಸಾಗುತ್ತಿರುವುದು. ಈ ಸತ್ಯವನ್ನು ಬಹಳ ಚೆನ್ನಾಗಿ ಅರಿತಿರುವ ಬಿ.ಕೆ.ಶ್ರೀನಿವಾಸ್ ಅದನ್ನೇ ಈಗ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಶ್ರೀನಿವಾಸ್ ಈ ಹಿಂದೆ 'ಮಂದಾಕಿನಿ' ಎಂಬ ಚಿತ್ರವನ್ನು ನಿರ್ಮಿಸಿದ್ದರು.
ಇತ್ತೀಚೆಗೆ ಯವನಿಕಾ ಸಭಾಂಗಣದಲ್ಲಿ ಇವರು ಬರೆದ 'ನಂಬಿಕೆಯೇ ಜೀವನ' ಪುಸ್ತಕವನ್ನು ಸಾಹಿತಿ ಸಾ.ಶಿ.ಮರುಳಯ್ಯ ಬಿಡುಗಡೆಗೊಳಿಸಿದರು. ಡಾ:ಬರಗೂರು ರಾಮಚಂದ್ರಪ್ಪ ಅವರ ಅದ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಜನಪದ ಗಾಯಕ ವೇಮಗಲ್ ನಾರಾಯಣಸ್ವಾಮಿ, ಚಿತ್ರನಟ ಸುಂದರರಾಜ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಾ.ಶಿ.ಮರುಳಯ್ಯ ಅವರು ಮನೆಮನೆಗೆ ಹಾಲು ಮಾರಿಕೊಂಡು ಬಂದ ಶ್ರೀನಿವಾಸ್ ಇಂದು ನೂರಾರು ಜನರಿಗೆ ಉದ್ಯೋಗ ನೀಡುವಂಥವರಾಗಿದ್ದಾರೆ. ಜೀವನ ಕೃಷಿಯಲ್ಲಿ ಅನುಭವ ಪಡೆದು ಈಗ ಸಾಹಿತ್ಯ ಕೃಷಿ ಪ್ರಾರಂಭಿಸಿದ್ದಾರೆ. ಅವರು ಪಡೆದಿರುವ ಜನಪ್ರಿಯತೆಗೆ ಈ ಸಭಾಂಗಣ ತುಂಬಿರುವುದೇ ಸಾಕ್ಷಿ. ಜೀವನಕ್ಕೆ ಹತ್ತಿರವಾದ ಸರಳ ನುಡಿಗಳನೇ ಬಳಸಿ ಕೃತಿ ಬರೆದಿದ್ದಾರೆ. ಬರಗೂರು ರಾಮಚಂದ್ರಪ್ಪನವರು ಪುಸ್ತಕಕ್ಕೆ ಮುನ್ನುಡಿ ಬರೆದು ಅದರ ಮೌಲ್ಯವನ್ನು ಇನ್ನೂ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ ಸಾಹಿತ್ಯ ರಚಿಸಲು ಅನುಭವ, ಅಧ್ಯಯನ ಶೀಲತೆ ಎರಡೂ ಇರಬೇಕು. ಶ್ರೀನಿವಾಸ್ ಅವರಿಗೆ ಅನುಭವ ಇದೆ. ಅಧ್ಯಯನ ಶೀಲತೆ ಕಡಿಮೆ ಇದೆ. ತನ್ನಗನಿಸಿದ್ದನ್ನು ಬರೆದಿದ್ದಾರೆ. ಶ್ರೀನಿವಾಸ್ ಭ್ರಮೆಯಿಂದ ಹೊರ ಬರುತ್ತಿದ್ದಾರೆ. ಸಾಹಿತ್ಯ ಪ್ರಪಂಚಕ್ಕೆ ಅಂಬೆಗಾಲಿಡುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ವತ್ಸಲಾಮೋಹನ್ ಅಚ್ಚುಕಟ್ಟಾಗಿ ನಿರೂಪಿಸಿಕೊಟ್ಟರು.